More

    ದಾವೂದ್​ ತನ್ನ ನೆಲದಲ್ಲಿಯೇ ಇದ್ದಾನೆಂದು ಒಪ್ಪಿಕೊಂಡ ಪಾಕ್​; ಆರ್ಥಿಕ ದಿಗ್ಬಂಧನದಿಂದ ಪಾರಾಗಲು ತಂತ್ರ…?

    ನವದೆಹಲಿ: ಭಾರತದ ಮೋಸ್ಟ್​ ವಾಂಟೆಡ್ ಕ್ರಿಮಿನಲ್​, ಭೂಗತ ಪಾತಕಿ ಹಾಗೂ ಮುಂಬೈನಲ್ಲಿ ಸಂಭವಿಸಿದ 1993 ಬಾಂಬ್​ ದಾಳಿಯ ಸೂತ್ರಧಾರ ದಾವೂದ್​ ಇಬ್ರಾಹಿಂ ತನ್ನ ನೆಲದಲ್ಲಿಯೇ ಇದ್ದಾನೆಂದು ಪಾಕಿಸ್ತಾನ ಕೊನೆಗೂ ಒಪ್ಪಿಕೊಂಡಿದೆ.

    ದಾವೂದ್​ ನೆಲೆಸಿರುವ ವೈಟ್​ಹೌಸ್​, ಸೌದಿ ಮಸೀದಿ ಹತ್ತಿರ, ಕ್ಲಿಫ್ಟನ್​ ವಿಳಾಸ​ ಕರಾಚಿಯದ್ದಾಗಿದೆ ಎಂದು ಪಾಕಿಸ್ತಾನ ಒಪ್ಪಿಕೊಂಡಿದೆ. ಈತನ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದೆ.

    ಪಾಕಿಸ್ತಾನದ ಈ ಹೇಳಿಕೆಗೆ ಕಾರಣವೂ ಇಲ್ಲದಿಲ್ಲ. ಜಾಗತಿಕವಾಗಿ ನಿಷೇಧಿಸಲಾಗಿರುವ 88 ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಕಾರಣ, ವಿಶ್ವ ಸಮುದಾಯ ಅದರಲ್ಲೂ ವಿಶ್ವ ಆರ್ಥಿಕ ಕಾರ್ಯಪಡೆ (ಎಫ್​ಎಟಿಎಫ್​) ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ಜತೆಗೆ ಪಾಕಿಸ್ತಾನವನ್ನು ಬೂದು ಪಟ್ಟಿಯಿಂದ ಕಪ್ಪು ಪಟ್ಟಿಗೆ ಸೇರಿಸುವುದಾಗಿ ಎಚ್ಚರಿಕೆ ನೀಡಿದೆ.

    ಇದನ್ನೂ ಓದಿ; ಗಣೇಶ ಹಬ್ಬದಂದು ಬಿಡುಗಡೆಯಾಯ್ತು ನಿತ್ಯಾನಂದನ ಕೈಲಾಸದ ಕರೆನ್ಸಿ; ಭಾರತೀಯ ರೂಪಾಯಿಗೆಷ್ಟು ಮೌಲ್ಯ ?

    ಈ ಕಾರಣದಿಂದಾಗಿ ಭಯೋತ್ಪಾದನಾ ಸಂಘಟನೆಗಳು, ಮತ್ತದರ ಮುಖಂಡರಾದ ಹಫೀಜ್​ ಸಯೀದ್​, ಮಸೂದ್​ ಅಝರ್​, ದಾವೂದ್​ ಇಬ್ರಾಹಿಂ ಮೊದಲಾದವರ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸಲಾಗಿದೆ. ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು, ಬ್ಯಾಂಕ್​ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ.

    ಈ ಕುರಿತಾಗಿ ಆಗಸ್ಟ್​ 18ರಂದು ಎರಡು ಅಧಿಸೂಚನೆಗಳನ್ನು ಹೊರಡಿಸಿದೆ. ಮುಂಬೈ ದಾಳಿಯ ಸೂತ್ರಧಾರ ಸಂಘಟನೆಯಾದ ಜಮಾತ್​ ಉದ್ ದಾವಾ, ಜೈಷ್​-ಎ- ಮಹಮ್ಮದ್​ ಸಂಘಟನೆಗಳ ಆರ್ಥಿಕ ಚಟುವಟಿಕೆಗಳ ಮೇಲೆ ನಿಬ್ಂಧ ವಿಧಿಸಲಾಗಿದೆ ಎಂದು ತಿಳಿಸಿತ್ತು.

    ಇದನ್ನೂ ಓದಿ; ಆ.15ರಂದು ಸ್ಫೋಟಕ್ಕೆ ಸಂಚು ರೂಪಿಸಿದ್ದವನ ಬಂಧನ; ಸ್ಫೋಟಕ ವಶ; ಈತನಿಗಿತ್ತು ಐಸಿಸ್​ನೊಂದಿಗೆ ನೇರ ಸಂಪರ್ಕ 

    ದಾವೂದ್​ ಇಬ್ರಾಹಿಂ ಪಾಕಿಸ್ತಾನದಲ್ಲಿ ಅಕ್ರಮವಾಗಿ ಹಲವು ವಹಿವಾಟುಗಳನ್ನು ನಡೆಸುತ್ತಿದ್ದಾನೆ. 1993ರ ಮುಂಬೈ ದಾಳಿ ಬಳಿಕ ಭಾರತದಲ್ಲಿ ಮೋಸ್ಟ್​ ವಾಂಟೆಡ್​ ಆಗಿದ್ದಾನೆ. ಆತ ನೆಲೆಸಿದ್ದಾನೆಂದು ಹೇಳಲಾದ ವಿಳಾಸ ಕರಾಚಿಯದ್ದೇ ಆಗಿದೆ ಎಂದು ಪಾಕ್​ ಅಧಿಕಾರಿಗಳು ವಿಶ್ವದೆದುರು ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ.
    ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ವಿದೇಶಗಳಿಂದ ಸಾಲ ಅಥವಾ ಆರ್ಥಿಕ ನೆರವು ಪಡೆಯಲು ಎಫ್​ಎಟಿಎಫ್​ನ ಬೂದು ಪಟ್ಟಿಯಿಂದ ಹೊರಬರಬೇಕಿದೆ. ಇದಕ್ಕಾಗಿ ಎಲ್ಲ ಕಸರತ್ತುಗಳನ್ನು ನಡೆಸುತ್ತಿದೆ.

    https://www.vijayavani.net/ec-issues-guidelines-for-conduct-of-elections-during-covid-19/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts