ಯಸಳೂರಿನ ರಸ್ತೆಯಲ್ಲಿ ಜೋಡಿ ಸಲಗ ಪ್ರತ್ಯಕ್ಷ, ಬೆಚ್ಚಿದ ಸ್ಥಳೀಯರು

ಹಾಸನ: ಸಕಲೇಶಪುರ ತಾಲೂಕಿನ ಹೋಬಳಿ ಕೇಂದ್ರ ಯಸಳೂರಿನಲ್ಲಿ ಗುರುವಾರ ರಾತ್ರಿ ಜೋಡಿ ಸಲಗಗಳು ಮುಖ್ಯ ರಸ್ತೆಯಲ್ಲಿಯೇ ಸಂಚರಿಸಿ ದಾಂಧಲೆ ನಡೆಸಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.

ರಾತ್ರಿ ಐಗೂರಿನಿಂದ ಮಾಗಲು ಕಡೆಗೆ ಸಾಗುತ್ತಿದ್ದ ಲಾರಿಯೊಂದಕ್ಕೆ ಯಸಳೂರು ಗ್ರಾಮದೊಳಗಿನ ರಾಜ್ಯ ಹೆದ್ದಾರಿಯಲ್ಲಿಯೇ ಎರಡು ಸಲಗಗಳು ಅಡ್ಡ ನಿಂತಿವೆ.

ಇದರಿಂದ ಬೆದರಿದ ಲಾರಿ ಚಾಲಕ ವಾಹನದ ಇಂಜಿನ್ ಆರಿಸಿ ಸದ್ದಿಲ್ಲದೆ ಕುಳಿತು ತಮ್ಮ ಮೊಬೈಲ್ ನಲ್ಲಿ ಆನೆಗಳ ಓಡಾಟ ಚಿತ್ರೀಕರಿಸಿದ್ದಾರೆ.

ರಸ್ತೆಯಿಂದ ಆಚೆ ತೆರಳಲು ಮನೆಯೊಂದರ ಗೇಟ್ ಮುರಿಯಲು ಯತ್ನಿಸಿದ ಆನೆಗಳು ಅದು ಸಾಧ್ಯವಾಗದಿದ್ದಾಗ ಕಾಂಪೌಂಡ್ ದಾಟಿಕೊಂಡು ಮುಂದೆ ಸಾಗಿವೆ.

ಆನೆಗಳು ರಸ್ತೆಯಿಂದ ಮರೆಯಾದ ನಂತರ ಚಾಲಕ ಲಾರಿಯನ್ನು ಸ್ಟಾರ್ಟ್ ಮಾಡಿ ಮುಂದೆ ಸಾಗಿದ್ದಾನೆ.

ಈ ಹಿಂದೆ ಒಂದು ಬಾರಿ ಹಗಲಿನಲ್ಲಿಯೇ ಕಾಡಾನೆಯೊಂದು ರಸ್ತೆಯಲ್ಲಿ ಓಡಾಡಿದ್ದನ್ನು ಕಂಡಿದ್ದ ಸ್ಥಳೀಯರು ಈಗ ಜೋಡಿ ಸಲಗಗಳ ವಾಕಿಂಗ್ ಕಂಡು ಬೆಚ್ಚಿಬಿದ್ದಿದ್ದಾರೆ.

Leave a Reply

Your email address will not be published. Required fields are marked *