ಚಿತ್ರಕಲೆ ದೃಷ್ಟಾಂತಗಳನ್ನು ಸಾರಿ ಹೇಳುವ ಕಲೆ
ವಿಜಯವಾಣಿ ಸುದ್ದಿಜಾಲ ಧಾರವಾಡ
ಚಿತ್ರಕಲೆಯು ಅನೇಕ ದೃಷ್ಟಾಂತಗಳನ್ನು ಸಾರಿ ಹೇಳುವ ಕಲೆಯಾಗಿದೆ. ವಚನಕಾರರನ್ನು, ಹಿಂದಿನ ಕಾಲದ ವೈಭವವನ್ನು ಚಿತ್ರಕಲೆ ಮೂಲಕ ತೋರಿಸುವ ಈ ಶಿಕ್ಷಕರ ಪ್ರಯತ್ನ ಮೆಚ್ಚುವಂತಹದ್ದು ಎಂದು ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ನಗರದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಚಿತ್ರಕಲಾ ಶಿಕ್ಷಕರ ಕಾರ್ಯಾಗಾರ ಹಾಗೂ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಸುರೇಶ ಹಾಲಬಾವಿ ಮಾತನಾಡಿ, ಧಾರವಾಡವು ಇಡೀ ಉತ್ತರ ಕರ್ನಾಟಕವನ್ನು ತನ್ನತ್ತ ಸೆಳೆಯುವಂತೆ ಮಾಡಿದ ಕಲಾವಿದ ಡಿ.ವಿ.ಹಾಲಬಾವಿ. ಅಂತಹ ಮಹಾನ್ ಕಲಾವಿದರ ತವರೂರಲ್ಲಿ ಚಿತ್ರಕಲಾ ಶಿಕ್ಷಕರು ಅನೇಕ ಚಿತ್ರಗಳನ್ನು ಪ್ರದರ್ಶಿಸಿ ಸಮಾಜದ ಗಮನ ಸೆಳೆಯುತ್ತಿರುವುದು ವಿಶೇಷ ಎಂದರು.
ಬಿ.ವೈ. ಭಜಂತ್ರಿ, ಪಿ.ಆರ್. ಬಾರಕೇರ ಮಾತನಾಡಿದರು. ಬಿ.ಎಸ್. ತೋಟಗಿ ಅಧ್ಯಕ್ಷತೆ ವಹಿಸಿದ್ದರು. ಸಂಜು ಬಸ್ತವಾಡ, ಯಲ್ಲಪ್ಪ ಹುಬ್ಬಳ್ಳಿ, ಚಿತ್ರಕಲಾ ಕಾಲೇಜಿನ ಪ್ರಾಚಾರ್ಯ ಬಿ.ಎಚ್. ಕುರಿಯವರ, ಬಸವಂತ ತೋಟದ, ಶಿಕ್ಷಕರಾದ ಆರ್.ಬಿ. ಹಳ್ಳುರ, ಎಸ್.ಎಚ್. ಪಾಟೀಲ, ಗಾಮನಗಟ್ಟಿ, ಇತರರು ಇದ್ದರು.
ಬಂಡಿವಡ್ಡರ ಸ್ವಾಗತಿಸಿದರು. ಬಿ.ಪಿ. ಪಾಟೀಲ ನಿರೂಪಿಸಿದರು. ಮಂಜು ಹೂಗಾರ ವಂದಿಸಿದರು.
ಚಿತ್ರಕಲೆ ದೃಷ್ಟಾಂತಗಳನ್ನು ಸಾರಿ ಹೇಳುವ ಕಲೆ

You Might Also Like
ಹೋಟೆಲ್ ಸ್ಟೈಲ್ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe
ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…
ಚಿನ್ನದ ಮೇಲೆ ಲೋನ್ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan
Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…
ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips
ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…