More

    ಜೀ ಕನ್ನಡದಲ್ಲಿ ಪೈಲ್ವಾನ್

    ಕಿಚ್ಚ ಸುದೀಪ್ ನಟನೆಯ ಕನ್ನಡದ ಬಿಗ್ ಬಜೆಟ್ ಚಿತ್ರ ‘ಪೈಲ್ವಾನ್’ ಜೀ ಕನ್ನಡ ವಾಹಿನಿಯಲ್ಲಿ ಜ.12ರ ಭಾನುವಾರ ಸಂಜೆ 7 ಗಂಟೆಗೆ ಪ್ರಸಾರ ಆಗಲಿದೆ. 2019ರ ಸೆ.12ರಂದು ಕನ್ನಡದಲ್ಲಿ ತೆರೆಕಂಡಿದ್ದ ‘ಪೈಲ್ವಾನ್’, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದು ಯಶಸ್ವಿ ಪ್ರದರ್ಶನ ಕಂಡಿತ್ತು.

    ಸೂಪರ್ ಹಿಟ್ ಚಿತ್ರಗಳಾದ ‘ಗಜಕೇಸರಿ’, ‘ಹೆಬ್ಬುಲಿ’ಗೆ ನಿರ್ದೇಶನ ಮಾಡಿದ್ದ ಎಸ್.ಕೃಷ್ಣ ಈ ಸಾಹಸಮಯ ‘ಪೈಲ್ವಾನ್’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ, ಸುಶಾಂತ್ ಸಿಂಗ್, ಅವಿನಾಶ್, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಅಪ್ಪಣ್ಣ ಪ್ರಮುಖ ತಾರಾಬಳಗದಲ್ಲಿದ್ದಾರೆ. ಉತ್ತಮ ಹಾಡುಗಳನ್ನು ಹೊಂದಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಎ. ಕರುಣಾಕರ ಛಾಯಾಗ್ರಹಣವಿದೆ. ಜೀ ಸ್ಟುಡಿಯೋಸ್​ನ ‘ಆರ್​ಆರ್​ಆರ್ ಮೋಷನ್ ಪಿಕ್ಚರ್ಸ್ ಪ್ರೊಡಕ್ಷನ್’ನಲ್ಲಿ ಈ ಚಿತ್ರ ನಿರ್ವಣವಾಗಿದೆ. ನೆಚ್ಚಿನ ನಟನ ‘ಪೈಲ್ವಾನ್’ ಚಿತ್ರ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಜೀ ಕನ್ನಡ ವಾಹಿನಿ ಈ ಸಂಕ್ರಾಂತಿ ಉಡುಗೊರೆ ಎಂಬಂತೆ ಈ ಸಿನಿಮಾ ಪ್ರಸಾರ ಮಾಡಲು ಮುಂದಾಗಿದೆ.

    ಸುನೀಲ್ ಶೆಟ್ಟಿ ಕುಸ್ತಿ ಪಟ್ಟು

    ಪೈಲ್ವಾನ್ ಚಿತ್ರದ ವಿಶೇಷ ಏನೆಂದರೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅಭಿನಯಿಸಿರುವುದು. ಈ ಚಿತ್ರದ ಮೂಲಕ ಸುನೀಲ್ ಶೆಟ್ಟಿ ಕನ್ನಡಕ್ಕೆ ಎಂಟ್ರಿ ಕೊಟ್ಟು ಕಿಚ್ಚನಿಗೆ ಕುಸ್ತಿ ಪಟ್ಟುಗಳನ್ನು ಹೇಳಿಕೊಟ್ಟಿದ್ದಾರೆ. ಸುದೀಪ್ ಅವರದ್ದು ಕುಸ್ತಿಪಟು, ಬಾಕ್ಸರ್ ಪಾತ್ರ. ‘ಪೈಲ್ವಾನ್’ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ರಾಜಸ್ಥಾನ ಬೆಡಗಿ ಆಕಾಂಕ್ಷಾ ಸಿಂಗ್ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts