ಪದ್ಮಾವತಿ ದೇವಿ ರಥೋತ್ಸವ 22ಕ್ಕೆ

blank

ರಿಪ್ಪನ್‌ಪೇಟೆ: ಹೊಂಬುಜ ಅತಿಶಯ ಕ್ಷೇತ್ರದಲ್ಲಿ ಶ್ರೀ ಪದ್ಮಾವತಿ ದೇವಿ ರಥೋತ್ಸವವು ಮಾ.22ರಂದು ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಲಿದೆ.
ಬುಧವಾರ ಇಂದ್ರಪ್ರತಿಷ್ಠೆ, ವಿಮಾನಶುದ್ಧಿ, ಧ್ವಜಾರೋಹಣ, ಮಹಾನೈವೇದ್ಯ ಪೂಜೆ, ನಾಂದಿಮಂಗಲ, ವಾಸ್ತುಶಾಂತಿ, ಮೃತ್ತಿಕಾ ಸಂಗ್ರಹ ವಿಧಿ ವಿಧಾನಗಳು ಜರುಗಿದವು. 20ರಂದು ರಾತ್ರಿ ಸಿಂಹವಾಹನೋತ್ಸವ, 21ರಂದು ರಾತ್ರಿ ಬೆಳ್ಳಿ/ಪುಷ್ಪ ರಥೋತ್ಸವ ಜರುಗಲಿದೆ. 22ರಂದು ಮೂಲ ನಕ್ಷತ್ರದಲ್ಲಿ ನಿತ್ಯವಿಧಿ ಸಹಿತ ಮಹಾನೈವೇದ್ಯ ಪೂಜೆ, ಮಧ್ಯಾಹ್ನ ರಥಾರೋಹಣ, ರಾತ್ರಿ ವಿಹಾರ, 23ರಂದು ತ್ರಿಕೂಟ ಜಿನಾಲಯದಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿಗೆ 108 ಕಲಶಗಳ ಅಭಿಷೇಕ, ಸಂಘಪೂಜೆ, 24ರಂದು ಕುಂಕುಮೋತ್ಸವ, ಧ್ವಜಾವರೋಹಣದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಗಣಾಧಿಪತಿ ಗಣಧರಾಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರ ಸಂಘದದವರು 40 ವರ್ಷಗಳ ಬಳಿಕ ದರ್ಶನಾರ್ಥವಾಗಿ ಆಗಮಿಸಿರುವ ಸಂದರ್ಭ ವಾರ್ಷಿಕ ಮಹಾರಥೋತ್ಸವ ಜರುಗುತ್ತಿದೆ. ಪೂಜ್ಯ ಮುನಿಶ್ರೀಗಳ ಸಾನ್ನಿಧ್ಯ ಲಭಿಸಿರುವುದು ಭಕ್ತರಿಗೆ ಸಂತಸ ಉಂಟುಮಾಡಿದೆ.
ವಿಶೇಷ ಆರಾಧನೆಗಳು: ಪ್ರತಿವರ್ಷ ಜರುಗುವ ರಥೋತ್ಸವ ಸಂದರ್ಭ ಶ್ರೀ ನೇಮಿನಾಥ ಸ್ವಾಮಿ ಸನ್ನಿಧಿಯಲ್ಲಿ ಗಣಧರ ವಲಯ ಆರಾಧನೆ, ಮಕ್ಕಳ ಬಸದಿಯಲ್ಲಿ ಕಲ್ಯಾಣ ಮಂದಿರ ಆರಾಧನೆ, ನಗರ ಜಿನಾಲಯದಲ್ಲಿ ಭಕ್ತಾಮರ ಆರಾಧನೆ, ಶ್ರೀ ಬೋಗಾರ ಬಸದಿಯಲ್ಲಿ ಚೌಷಟ್ ಋದ್ಧಿ ವಿಧಾನಗಳನ್ನು ಏರ್ಪಡಿಸಲಾಗುತ್ತದೆ. ಭಕ್ತರು ಆರಾಧನೆ, ಪೂಜೆಯಲ್ಲಿ ಪಾಲ್ಗೊಳ್ಳುವರು.
ಪ್ರಶಸ್ತಿ ಪ್ರದಾನ ನಾಳೆ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಮೈಸೂರಿನ ಸಾಹಿತಿ ಪ್ರೊ. ಪದ್ಮಾ ಶೇಖರ್ ಅವರಿಗೆ ಹೊಂಬುಜ ಮಹಾಸಂಸ್ಥಾನದಿಂದ ಸಿದ್ಧಾಂತ ಕೀರ್ತಿ ಪ್ರಶಸ್ತಿಯನ್ನು ಮಾ.21ರಂದು ಪ್ರದಾನ ಮಾಡಲಾಗುವುದು. ಜೈನ ಧರ್ಮ ಸಾಹಿತ್ಯ, ಸಂಶೋಧನೆ, ಗ್ರಂಥ ಸಂಪಾದನೆ ಹಾಗೂ ಸಂಸ್ಕೃತಿಗೆ ಇವರು ಸಲ್ಲಿಸಿರುವ ಸೇವೆ ಅನನ್ಯ. ಪ್ರತಿ ವರ್ಷ ಜಾತ್ರೋತ್ಸವದ ಸಂದರ್ಭ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

Share This Article

ತಿಂದ ನಂತರವೂ ಹಸಿವಾಗುತ್ತಿದ್ಯಾ? ಹಾಗಾದರೆ ಹಸಿವನ್ನು ನಿಯಂತ್ರಿಸಲು ಇವುಗಳನ್ನು ತಿನ್ನಿರಿ… hungry

hungry: ಕೆಲವರಿಗೆ ಏನು ತಿಂದರೂ ಮತ್ತೆ ಬೇಗನೆ ಹಸಿವಾಗುತ್ತದೆ. ಅದು ನನಗೆ ಚಾಟ್, ಮಸಾಲಗಳು, ಬಜ್ಜಿ…

ನಿಮ್ಮ ಕನಸಿನಲ್ಲಿ ಗಿಳಿ, ಗೂಬೆ, ನವಿಲು ಕಾಣಿಸಿಕೊಂಡಿದ್ಯಾ? ಈ ಪಕ್ಷಿಗಳಿಂದ ಬರಲಿದ್ಯಾ ಅದೃಷ್ಟ.. dreams

dreams: ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಕನಸುಗಳು ಬಹಳ ಮುಖ್ಯ. ಕನಸಿನಲ್ಲಿ ಗಿಳಿ, ಗೂಬೆ, ನವಿಲು ಮುಂತಾದ…