ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್, ನಿರ್ದೇಶಕರು-ನಿರ್ಮಾಪಕರಾಗಿರುವ ಏಕ್ತಾ ಕಪೂರ್ ಮತ್ತು ಕರಣ್ ಜೋಹರ್, ಗಾಯಕ ಅದ್ನಾನ್ ಸಮಿ ಪ್ರಸಕ್ತ ವರ್ಷದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಂದು ಪದ್ಮ ಪುರಸ್ಕಾರವನ್ನು ಪ್ರಕಟ ಮಾಡಲಾಗಿದ್ದು ಬಾಲಿವುಡ್ ಕ್ಷೇತ್ರದಿಂದ ಈ ನಾಲ್ವರಿಗೆ ಒಲಿದಿದೆ. ಪದ್ಮಶ್ರೀಗೆ ಭಾಜನರಾದ ಕಂಗನಾ ರಣಾವತ್ ಸಂತಸ ವ್ಯಕ್ತಪಡಿಸಿದ್ದಾರೆ.
ನನ್ನನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ ನನ್ನ ದೇಶಕ್ಕೆ ಕೃತಜ್ಞತೆಗಳು. ನಾನು ಈ ಪ್ರಶಸ್ತಿಯನ್ನು ಕನಸುಗಳನ್ನು ಈಡೇರಿಸಿಕೊಳ್ಳುವಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯವಾಗಿ ಎದುರಿಸುವ ಪ್ರತಿ ಮಹಿಳೆಗೂ ಅರ್ಪಿಸುತ್ತೇನೆ. ಪ್ರತಿ ಮಗಳಿಗೆ, ಪ್ರತಿ ತಾಯಿಗೆ ಹಾಗೇ ಈ ದೇಶದ ಭವಿಷ್ಯಕ್ಕಾಗಿ ಕನಸು ಕಾಣುವ ಪ್ರತಿ ಸ್ತ್ರೀಗೂ ಇದು ಅರ್ಪಣೆ ಎಂದು ಹೇಳಿದ್ದಾರೆ.