VIDEO|ರಾಷ್ಟ್ರಪತಿಯಿಂದ ಡ್ಯಾನ್ಸರ್​ ಪ್ರಭುದೇವ್​, ಮೋಹನ್​ ಲಾಲ್​ ಸೇರಿದಂತೆ ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ನವದೆಹಲಿ: ರಾಷ್ಟ್ರಪತಿ ಭವನದಲ್ಲಿಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರು ವಿವಿಧ ಕ್ಷೇತ್ರದ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಜನವರಿ 25 ರಂದು ಕೇಂದ್ರ ಸರ್ಕಾರ 14 ಪದ್ಮಭೂಷಣ ಮತ್ತು 4 ಪದ್ಮ ವಿಭೂಷಣ ಸೇರಿದಂತೆ 112 ಪದ್ಮ ಪ್ರಶಸ್ತಿಗಳನ್ನು ಘೋಷಿಸಿತ್ತು. 112 ಜನರ ಪೈಕಿ ಇಂದು 56 ಜನರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಮಲಯಾಳಂ ನಟ ಮೋಹನ್​ಲಾಲ್​ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರೆ, ಹೆಸರಾಂತ ಡಾನ್ಸರ್​ ಪ್ರಭುದೇವ್​ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.

ಮಾರ್ಚ್​ 16ರಂದು ನಡೆಯುವ ಮತ್ತೊಂದು ಸಮಾರಂಭದಲ್ಲಿ ಉಳಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. (ಏಜೆನ್ಸೀಸ್​)