25.1 C
Bangalore
Friday, December 6, 2019

ಮನೆ ಅಂಗಳದಲ್ಲಿಯೇ ಭತ್ತ ಬೆಳೆ

Latest News

ಮಲಗಿದ ಮೇಲೆ ಸಂಪೂರ್ಣ ಸುಖ ನಿದ್ದೆಗೆ ಇಲ್ಲಿವೆ ಕೆಲ ಟಿಪ್ಸ್​ಗಳು

ಸಂಪುರ್ಣ ಎಂಟು ತಾಸು ನಿದ್ದೆ..! - ನಿದ್ದೆ ಮಾಡಿದ ಮೇಲೆ ಮಧ್ಯೆ ಯಾವುದಕ್ಕೂ ಅಂದರೆ ಬಾತ್​ರೂಂಗೆ ಹೋಗಲು, ನೀರು ಕುಡಿಯಲು, ನಿಮ್ಮ ಮೊಬೈಲ್​ ಚೆಕ್​ ಮಾಡಲು...

ಗೊರಗುದ್ದಿ ಶಾಲೆ ಗೋಳು ಕೇಳೋರಿಲ್ಲ

|ಬೆಳ್ಳೆಪ್ಪ ಮ.ದಳವಾಯಿ ಕಡಬಿ ಸರ್ಕಾರ ಸರ್ವಶಿಕ್ಷಣ ಅಭಿಯಾನದ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೆ ಆ ಯೋಜನೆಗಳಿಗೆ ಸರ್ಕಾರ ಕೋಟ್ಯಂತರ ರೂ.ಹಣ ಖರ್ಚು...

ಅತ್ಯಾಚಾರ ಆರೋಪಿಗಳ ಎನ್​ಕೌಂಟರ್​ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಪೊಲೀಸ್​ ಆಯುಕ್ತ ವಿಶ್ವನಾಥ್​ ಸಜ್ಜನರ್​

ಹೈದರಾಬಾದ್​: ಪಶುವೈದ್ಯೆಯ ಮೇಲೆ ಅತ್ಯಾಚಾರವೆಸಗಿ, ಕೊಲೆಗೈದು ಮೃತದೇಹಕ್ಕೆ ಬೆಂಕಿಯಿಟ್ಟು ಕ್ರೂರತ್ವ ಮೆರೆದಿದ್ದ ನಾಲ್ವರು ಆರೋಪಿಗಳನ್ನು ಹೈದರಾಬಾದ್​ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆ ಎನ್​ಕೌಂಟರ್​ ಮೂಲಕ...

ಯಾಂತ್ರಿಕ ಜೀವನಕ್ಕೆ ಮಾರುಹೋಗಿದ್ದಾರೆ ಜನ

ಕನಕಪುರ: ಯಾಂತ್ರಿಕ ಜೀವನಕ್ಕೆ ಮಾರುಹೋಗಿರುವ ಇಂದಿನ ಜನತೆ ಗ್ರಾಮೀಣ ಕಲೆ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಎಂದು ದೇಗುಲಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ತಿಳಿಸಿದರು. ಕೋಡಿಹಳ್ಳಿ ರಂಗಮಂದಿರದಲ್ಲಿ ಕನ್ನಡ...

ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಎನ್​ಕೌಂಟರ್​​ ಅನ್ನು ಸ್ವಾಗತಿಸಿದ ಗೋವಾ ಕಾಂಗ್ರೆಸ್​​

ಪಣಜಿ: ಹೈದರಾಬಾದ್​ನಲ್ಲಿ ಶುಕ್ರವಾರ ಮುಂಜಾನೆ ದಿಶಾ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿದ್ದ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್​​ನಲ್ಲಿ ಕೊಲೆ ಮಾಡಿದ್ದನ್ನು ಗೋವಾ ಕಾಂಗ್ರೆಸ್​ ಮಹಿಳಾ...

ಪುರುಷೋತ್ತಮ ಭಟ್ ಪೆರ್ಲ
ಯುವಜನರಿಗೆ ಕೃಷಿ ಆಸಕ್ತಿ ಕುಸಿಯುತ್ತಿದೆ ಎಂಬ ಭೀತಿಯ ಮಧ್ಯೆ ಹಲವು ಸಾಧನಾಶೀಲರು ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗ ಮೂಲಕ ಭರವಸೆ ತುಂಬಿ ಪ್ರೇರಣೆಯಾಗುತ್ತಿದ್ದಾರೆ. ಕಾಟುಕುಕ್ಕೆಯಲ್ಲೊಬ್ಬರು ಇಂತಹ ಸಾಧಕರೊಬ್ಬರಿದ್ದು, ಮನೆಯ ಅಂಗಳವನ್ನೇ ಅಗೆದು ಭತ್ತದ ಗದ್ದೆಯನ್ನಾಗಿಸಿ ಆಹಾರ ಬೆಳೆಯ ಬಗೆಗೆ ಪ್ರೀತಿ ತೋರಿದ್ದಾರೆ. ಯುವ ಸಾಹಿತಿ, ಸಂಘಟಕ ಕಾಟುಕುಕ್ಕೆ ಬಳಿಯ ಕುಮಾರಕೊಚ್ಚಿ ನಿವಾಸಿ ಸುಭಾಶ್ ಪೆರ್ಲ ಅಂಗಳದಲ್ಲಿಯೇ ಭತ್ತ ಬೆಳೆದ ಸಾಧಕ. ಮನೆಯಂಗಳದ ನಾಲ್ಕು ಸೆಂಟ್ ಸ್ಥಳದಲ್ಲಿ ಎರಡನೇ ವರ್ಷ ಭತ್ತ ಕೃಷಿ ಮಾಡಿದ್ದು, ಕಳೆದ ವರ್ಷ 39 ಕೆಜಿ ಭತ್ತ (ಒಂದು ಮುಡಿ) ಬೆಳೆದಿದ್ದಾರೆ.

ಮೂಲತಃ ಬೆದ್ರಂಪಳ್ಳ ನಿವಾಸಿಯಾಗಿರುವ ಇವರು ಹಲವು ವರ್ಷಗಳಿಂದ ಕುಮಾರಕೊಚ್ಚಿಯಲ್ಲಿ ವಾಸಿಸುತ್ತಿದ್ದು, ಎರಡು ಎಕ್ರೆ ಪ್ರದೇಶದಲ್ಲಿ ಅಡಕೆ, ತೆಂಗು, ಬಾಳೆ, ಕರಿಮೆಣಸು ಇತ್ಯಾದಿ ಮಿಶ್ರ ಬೇಸಾಯ ಮಾಡುತ್ತಿದ್ದಾರೆ. ಕುಟುಂಬದ ಹಿರಿಯರು ಬೆದ್ರಂಪಳ್ಳದಲ್ಲಿ ಭತ್ತ ಬೇಸಾಯ ನಡೆಸಿದ್ದರ ಪ್ರೇರಣೆಯಾಗಿ ಅಂಗಳದಲ್ಲಿ ಭತ್ತ ಬೆಳೆಯುವ ಆಸಕ್ತಿ ಹುಟ್ಟಿ ಅದನ್ನು ಕಾರ್ಯ ರೂಪಕ್ಕೆ ತಂದಿದ್ದಾರೆ. ಕೃಷಿಯಲ್ಲಿ ಕ್ರಾಂತಿ ಮಾಡಿರುವ ಪಾಳೇಕರ್ ವ್ಯವಸ್ಥೆಯನ್ನು ಅಳವಡಿಸಿರುವ ಸುಭಾಶ್, ಸಾವಯವ ಗೊಬ್ಬರ ಹಾಗೂ ಜೀಮಾಮೃತ ಬಳಸುತ್ತಿದ್ದಾರೆ. ಪ್ರಸ್ತುತ ಬೆಳೆ ಕಟಾವಿಗೆ ಸಿದ್ಧವಾಗಿದ್ದು, ಒಂದೆರಡು ವಾರಗಳಲ್ಲಿ ಕೊಯ್ಲು ನಡೆಯಲಿದೆ. ಸುಭಾಶ್ ಪತ್ನಿ ಆಶಾ ಜಿ. ಹಾಗೂ ಮಕ್ಕಳಾದ ಆಕಾಶ್ ಮತ್ತು ಅಭಿಲಾಶ್ ಸುಭಾಶ್ ಕೃಷಿ ಪ್ರೀತಿಗೆ ಕೈಜೋಡಿಸಿದ್ದಾರೆ.

ಸಾಮಾಜಿಕ, ರಾಜಕೀಯ ರಂಗಗಳಲ್ಲಿ ಹಿಂದೆ ಸಕ್ರಿಯರಾಗಿದ್ದ ಸುಭಾಶ್ ಪೆರ್ಲ ಪೆರ್ಲ ಪೇಟೆಯಲ್ಲಿ ವಾಚು ದುರಸ್ತಿಯ ಪುಟ್ಟ ಅಂಗಡಿ ನಡೆಸುತ್ತಿದ್ದಾರೆ. ಜತೆಗೆ ಕೊಳವೆಬಾವಿ ನಿರ್ಮಾಣ ಯಂತ್ರದ ನಿರ್ವಹಣೆ ಹಾಗೂ ಇತ್ತೀಚೆಗೆ ಸಾಹಿತ್ಯ ಕೃಷಿಗೂ ತೊಡಗಿಸಿಕೊಂಡು ಜನಮನ ಸೆಳೆದಿದ್ದಾರೆ. ವಾಣಿಜ್ಯ ಬೆಳೆಗಳಿಗಿಂತ ಆಹಾರ ಬೆಳೆ ಬೆಳೆಸಲು ಮುಂದಾಗದಿದ್ದರೆ ಭವಿಷ್ಯ ಭಯಾನಕವಾಗಿರುತ್ತದೆ ಎಂಬುದು ಅವರ ಅಭಿಪ್ರಾಯ. ಮನೆಯಂಗಳದಲ್ಲಿ ಬೆಳೆದಿದ್ದು ಹೀಗೆ: ಪಿಕಾಸಿ, ಗುದ್ದಲಿ ಮೂಲಕ ಅಂಗಳ ಅಗೆದು ನಾಲ್ಕು ಸೆಂಟ್ ಸ್ಥಳವನ್ನು ಭತ್ತದ ಬೆಳೆ ಬೆಳೆಯಲು ಹದಗೊಳಿಸಿ ಬಿತ್ತನೆ ನಡೆಸಿದರು. 25*25 ಸೆಂ.ಮೀ. ಅಂತರ ಇಟ್ಟು ಬೀಜ ಬಿತ್ತಿದ್ದು ವಿಶೇಷ. ಯಾವುದೇ ರಾಸಾಯನಿಕ ಗೊಬ್ಬರ ಬಳಸಿಲ್ಲ. ಹಟ್ಟಿ ಗೊಬ್ಬರ ಜತೆಗೆ ವಿಶೇಷವಾಗಿ ಸಿದ್ಧಗೊಳಿಸಲಾದ ಜೀವಾಮೃತವನ್ನಷ್ಟೇ ಉಪಯೋಗಿಸಲಾಗಿದೆ. ಇದು ಖ್ಯಾತ ಕೃಷಿ ಸಾಧಕ ಪಾಳೇಕರ್ ಅನುಸರಿಸುವ ವಿಧಾನ. ನಮ್ಮಲ್ಲೂ ಈ ಪ್ರಯೋಗ ಗೆದ್ದಿರುವುದು ಸಂತಸಕರ ಎನ್ನುತ್ತಾರೆ ಸುಭಾಶ್ ಪೆರ್ಲ.

ಸ್ವಾವಲಂಬಿಯಾಗಬೇಕು ಎನ್ನುವುದು ಬಾಲ್ಯದಿಂದಲೂ ಕಂಡುಕೊಂಡ ಕನಸಾಗಿದೆ. ಈ ನಿಟ್ಟಿನಲ್ಲಿ ಆಹಾರ ಸ್ವಾವಲಂಬಿಯಾಗುವಲ್ಲಿ ಎರಡು ವರ್ಷಗಳಿಂದ ಪ್ರಯತ್ನಿಸಿದ್ದು, ಉದ್ದೇಶಿತ ಗುರಿ ತಲಪಲಾಗುವುದು. ಪ್ರಸ್ತುತ ಮನೆಯ ಅಂಗಳದಲ್ಲಿ ನಾಲ್ಕು ಸೆಂಟ್ಸ್‌ನಲ್ಲಿ ಪ್ರಾಯೋಗಿಕವಾಗಿ ಭತ್ತ ಬೆಳೆಸಿರುವ ಸಂತಸ ಇದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ವಿಸ್ತರಿಸಲಾಗುವುದು. ಲಭ್ಯ ಭೂಮಿಯಲ್ಲಿ ಆಹಾರ ಬೆಳೆ ಬೆಳೆಸಬೇಕು. ಇದರಿಂದ ನೆಮ್ಮದಿಯ ಜೀವನ ಸಾಧ್ಯವಿದೆ.
-ಸುಭಾಶ್ ಪೆರ್ಲ, ಮನೆಯಂಗಳದಲ್ಲಿ ಭತ್ತ ಬೆಳೆದ ಸಾಧಕ ಕೃಷಿಕ.

Stay connected

278,739FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...