ಮೋದಿ ಮತ್ತೊಮ್ಮೆ ಪ್ರಧಾನಿ ಆಗಲೆಂದು 700 ಜನರಿಂದ ಅಂಬಾಮಠಕ್ಕೆ ಪಾದಯಾತ್ರೆ

ಸಿಂಧನೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿ ಭಾನುವಾರ ಸಿಂಧನೂರು ನಗರದಿಂದ ಸುಕ್ಷೇತ್ರ ಅಂಬಾಮಠವರೆಗೆ ಏಳುನೂರು ಜನ ಪಾದಯಾತ್ರೆ ನಡೆಸಿದರು. ಎಪಿಎಂಸಿಯ ಗಣೇಶ ದೇವಸ್ಥಾನದಿಂದ ಬೆಳಗ್ಗೆ 6ಕ್ಕೆ ಆರಂಭಗೊಂಡ ಪಾದಯಾತ್ರೆ ಗೊರೇಬಾಳ ಮಾರ್ಗವಾಗಿ ಅಂಬಾಮಠ ತಲುಪಿತು. ನಂತರ ಅಂಬಾದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹಿಂದು ಜಾಗರಣ ವೇದಿಕೆಯ ಪ್ರಾಂತ ಪ್ರಮುಖ ಶಿವಾನಂದ ಬಡಿಗೇರ, ಮಂಜುನಾಥ ಹರಸೂರು, ಪ್ರಹ್ಲಾದ ಕೆಂಗಲ್, ಯಲ್ಲುಸಾಬದಿ, ರಾಘವೇಂದ್ರ ಅಳವಂಡಿ, ಹನುಮೇಶ ವಾಲೇಕಾರ, ಬಸವರಾಜ ಬಗ್ಗೂರು, ಪ್ರಾಣೇಶ ದೇಶಪಾಂಡೆ, ತಿಮ್ಮಣ್ಣ ದಾಸರ, ಬಸವರಾಜ ಗೌಡನಬಾವಿ, ಅಶೋಕ ಮಸ್ಕಿ, ಶ್ರೀಧರ ಕುಲಕರ್ಣಿ, ಎಂ.ವಿ.ಮೋಹನ್, ಆರ್.ಕೆ.ಹಿರೇಮಠ ಸೇರಿ ಇತರರಿದ್ದರು.