More

  ಕಲಬುರಗಿಯಲ್ಲಿ ಕಾಂಗ್ರೆಸ್​ ನಿಜಾಂಶಾಹಿ ಆಡಳಿತ

  ಕಲಬುರಗಿ: ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಳವಾಗಿದ್ದು, ಜನಸಾಮಾನ್ಯರ ಮೇಲೆ ಹಲ್ಲೆ ನಡೆಯುತ್ತಿದ್ದು, ಪ್ರತಿಭಟನೆ ಹತ್ತಿಕ್ಕಿ ನಿಜಾಂಶಾಹಿ ರೀತಿ ದುರಾಡಳಿತ ನಡೆಸಲಾಗುತ್ತಿದೆ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ಪಿ.ರಾಜೀವ್ ಆರೋಪಿಸಿದರು.

  ಕಲಬುರಗಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಮೇಲೆ ಸಂಚು ರೂಪಿಸಿ ಮಧ್ಯ ರಾತ್ರಿ ಹಲ್ಲೆ ನಡೆಸಲಾಗಿದೆ. ಆರೋಪಿಗಳನ್ನು ಬಂಧಿಸದೆ ರಕ್ಷಿಸುವ ಪ್ರಯತ್ನ ನಡೆದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

  ಕೋಲಿ ಸಮಾಜದ ಯುವಕ ದೇವಾನಂದ ಕೊರಬಾ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್​ ನೋಟ್​ ಬರೆದಿಟ್ಟರು, ಪ್ರಕರಣ ದಾಖಲಿಸಲಿಲ್ಲ. ಕುಟುಂಬಸ್ಥರು ಧರಣಿ ಸ್ಥಳದ ಎದುರೇ ಆರೋಪಿ ಓಡಾಡುತ್ತಿದ್ದರೂ ಕ್ರಮ ಆಗಲಿಲ್ಲ. ಜೇವರ್ಗಿಯಲ್ಲಿ ಬಿಜೆಪಿ ಕಾರ್ಯಕರ್ತ ಸಾಯಬಣ್ಣ ಅವರಿಗೆ ವಿನಾಕಾರಣ ಗುಂಡು ಹೊಡೆಯಲಾಗುತ್ತದೆ. ಮಹಾನಗರ ಪಾಲಿಕೆ ಅಧಿಕಾರಿ ಧನಶೆಟ್ಟಿ ಅವರ ಮೇಲೆ ಎಲ್ಲರ ಎದುರೆ ಹಲ್ಲೆ ಮಾಡಿದರೂ ಬಂಧನವಾಗಲ್ಲ. ಕಲಬುರಗಿ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವವಲ್ಲ, ರಾಜಪ್ರಭುತ್ವ ಆರಂಭವಾಗಿದ್ದು, ನಿಜಾಮರ ರೀತಿ ದೌರ್ಜನ್ಯದ ಆಡಳಿತ ನಡೆಯುತ್ತಿದೆ ಎಂದು ಕಿಡಿ ಕಾರಿದರು.

  ಕಲಬುರಗಿಯ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಪ್ರತಿಭಟನೆಗೆ ಬರುವವರನ್ನು ೧೪೪ ಸೆಕ್ಷನ್ ಜಾರಿ ಮಾಡಿ, ಎಲ್ಲೆಂದರಲ್ಲಿ ತಡೆದು ವಾಪಸ್ ಕಳುಹಿಸಿದ್ದು, ಪ್ರತಿಭಟನೆಯ ಹಕ್ಕು ಕಸಿದುಕೊಂಡಿದ್ದಾರೆ. ಸಂವಿಧಾನದ ಅಡಿಯಲ್ಲಿಯೇ ಕೆಲಸ ನಡೆಯಬೇಕು ಎಂದು ಆಗ್ರಹಿಸಿದರು.
  ಶಾಸಕ ಅವಿನಾಶ ಜಾಧವ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಬಸವರಾಜ ಬೆಣ್ಣೂರ, ಸಂತೋಷ ಹಾದಿಮನಿ, ಬಾಬುರಾವ ಹಾಗರಗುಂಡಗಿ, ರಾಘವೇಂದ್ರ ಕುಲ್ಕರ್ಣಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts