schoolgirls cleaning toilets: ಸರ್ಕಾರಿ ಶಾಲೆಯೊಂದರಲ್ಲಿ ಪುರುಷ ಶಿಕ್ಷಕರು ಬಳಸುವ ಶೌಚಾಲಯಗಳನ್ನು ವಿದ್ಯಾರ್ಥಿನಿಯರು ಸ್ವಚ್ಛಗೊಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಪರಿಸ್ಥಿತಿಯ ಬಗ್ಗೆ ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
A shocking video of girl students cleaning toilets at a Panchayat Union Primary School in Puliyur Kalipalayam, under the Thanthondrimalai Panchayat Union in Karur district, has come to light.
Is this Tamil Nadu Chief Minister MK Stalin’s ‘education model’? Is this why he is… pic.twitter.com/6NsE0O7trq
— Amit Malviya (@amitmalviya) March 19, 2025
ತಮಿಳುನಾಡಿನ ಕರೂರ್ ಜಿಲ್ಲೆಯ ತಾಂತೊಂಡ್ರಿಮಲೈ ಪಂಚಾಯತ್ ಒಕ್ಕೂಟದ ವ್ಯಾಪ್ತಿಯ ಪುಲಿಯೂರ್ ಕಾಳಿಪಾಳಯಂನಲ್ಲಿರುವ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. 5ನೇ ತರಗತಿಯ ವಿದ್ಯಾರ್ಥಿಗಳು ಶೌಚಾಲಯ ಸ್ವಚ್ಛಗೊಳಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಜಿಲ್ಲಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಮುಂದಿನ ತನಿಖೆ ನಡೆಯುವವರೆಗೆ ಪ್ರಾಂಶುಪಾಲರನ್ನು ಅಮಾನತುಗೊಳಿಸಿ ಕರೂರ್ ಮುಖ್ಯ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡುವ ಮೂಲಕ ಖಂಡಿಸಿದ್ದಾರೆ. “ಕರೂರು ಜಿಲ್ಲೆಯ ತಾಂತೊಂಡ್ರಿಮಲೈ ಪಂಚಾಯತ್ ಒಕ್ಕೂಟದ ವ್ಯಾಪ್ತಿಯ ಪುಲಿಯೂರು ಕಾಳಿಪಾಳ್ಯಂನಲ್ಲಿರುವ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಯಲ್ಲಿ ಹುಡುಗಿಯರು ಶೌಚಾಲಯ ಸ್ವಚ್ಛಗೊಳಿಸುತ್ತಿರುವ ಆಘಾತಕಾರಿ ವಿಡಿಯೋವೊಂದು ಬೆಳಕಿಗೆ ಬಂದಿದೆ. ಇದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ‘ಶಿಕ್ಷಣ ಮಾದರಿ’ಯೇ? ಅದಕ್ಕಾಗಿಯೇ ಅವರು ಎನ್ಇಪಿಯನ್ನು ವಿರೋಧಿಸುತ್ತಿದ್ದಾರೆಯೇ? ಡಿಎಂಕೆ ಕಾರ್ಯಕರ್ತರು ನಡೆಸುವ ಸ್ಥಳೀಯ ಶಾಲೆಗಳು ಆಡಿಟ್‌ನಿಂದ ತಪ್ಪಿಸಿಕೊಳ್ಳುತ್ತವೆ ಮತ್ತು ಹಣವನ್ನು ಲೂಟಿ ಮಾಡುತ್ತವೆ? ಇದು ನಾಚಿಕೆಗೇಡಿನ ಸಂಗತಿ” ಎಂದು ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.