More

  ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಆಕ್ರೋಶ

  ಕೊಳ್ಳೇಗಾಲ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಪಟ್ಟಣದಲ್ಲಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ), ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳಿಂದ ಮಂಗಳವಾರ ಪ್ರತಿಭಟನೆ ನಡೆಯಿತು.

  ಪಟ್ಟಣದ ಆರ್.ಎಂ.ಸಿ. ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಕುರುಬನಕಟ್ಟೆ ಮುಖ್ಯ ರಸ್ತೆ, ಪ್ರವಾಸಿ ಮಂದಿರ ರಸ್ತೆ, ತಾಲೂಕು ಪಂಚಾಯಿತಿ ವೃತ್ತ, ಎಂಜಿಎಸ್‌ವಿ ಜೂನಿಯರ್ ಕಾಲೇಜು, ಬಸ್ ನಿಲ್ದಾಣ, ಡಾ. ವಿಷ್ಣುವರ್ಧನ್, ಡಾ.ರಾಜ್‌ಕುಮಾರ್, ಮಸೀದಿ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮೂಲಕ ತಾಲೂಕು ಕಚೇರಿಗೆ ತಲುಪಿ ಉಪವಿಭಾಗಾಧಿಕಾರಿ ಮಹೇಶ್ ಅವರಿಗೆ ಮನವಿ ಸಲ್ಲಿಸಿದರು.

  ರೈತ ಮುಖಂಡ ಅಣಗಳ್ಳಿ ಬಸವರಾಜು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುತ್ತ ಕಾಲ ಕಳೆಯುತ್ತಿವೆ. ಇತ್ತೀಚೆಗೆ, ರಾಜ್ಯ ಸರ್ಕಾರ ಡೀಸೆಲ್, ಪೆಟ್ರೋಲ್ ಬೆಲೆಯನ್ನು ಏರಿಕೆ ಮಾಡಿದ್ದು, ಇದು ಸಣ್ಣ ವಾಹನಗಳ ಮಾಲೀಕರ ಮೇಲೆ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

  2 ವರ್ಷಗಳಿಂದ ರೈತರು ಬರಗಾಲ ಎದುರಿಸುತ್ತಿದ್ದಾರೆ. ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ದನ-ಕರುಗಳಿಗೆ ನೀರಿಲ್ಲ. ತಿನ್ನಲು ಮೇವಿಲ್ಲ. ರೈತನಿಗೆ ದನ-ಕರುಗಳನ್ನು ಮಾರಿಕೊಳ್ಳುವ ಪರಿಸ್ಥಿತಿ ಇದೆ. ಆಟೋ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ. ಒಂದೆಡೆ ಸರ್ಕಾರಕ್ಕೆ ಬಸ್‌ಗಳಲ್ಲಿ ಹೆಚ್ಚು ಜನ ಸಂಚಾರ ಮಾಡಿದರೆ ಸಂತೋಷವಾಗುತ್ತದೆ. ಮತ್ತೊಂದೆಡೆ ತ್ರಿಬಲ್ ರೈಡಿಂಗ್ ಹೋದರೆ ಪೊಲೀಸರು ಹಿಡಿಯುತ್ತಾರೆ. ಇದು ವಿಪರ್ಯಾಸವೇ ಸರಿ ಎಂದರು.

  ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಆರ್.ಮೋಹನ್ ಮಾತನಾಡಿ, ರಾಜ್ಯ ಸರ್ಕಾರ ತೈಲ ಬೆಲೆ ಏರಿಕೆ ಮಾಡಿರುವುದು ಖಂಡನೀಯ. ಇದರಿಂದ ರೈತರು, ಬಡವರಿಗೆ ಬಹಳ ತೊಂದರೆಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರವಾಗಲೇ ಯಾವುದೇ ವಸ್ತು ಬೆಲೆ ಏರಿಕೆ ಮಾಡಬೇಕಾದರೂ ಕೂಲಂಕಶವಾಗಿ ಯೋಚಿಸಬೇಕು. ಜನರ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಚಿಂತಿಸಬೇಕು. ಈ ಕೂಡಲೇ ರಾಜ್ಯ ಸರ್ಕಾರ ತೈಲ ಬೆಲೆ ಇಳಿಸದಿದ್ದರೆ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಯುತ್ತದೆ ಎಂದು ಎಚ್ಚರಿಸಿದರು.

  See also  ನ್ಯಾಯದೇವತೆ | ಅಜ್ಜ-ಅಜ್ಜಿಯ ಆಸ್ತಿಯಲ್ಲಿ ನನಗೆ ಪಾಲಿಲ್ಲವೇ?

  ಪ್ರತಿಭಟನೆಯಲ್ಲಿ 2 ಕ್ಕೂ ಹೆಚ್ಚು ಆಟೋಗಳು ಹಾಗೂ ಟ್ರಾೃಕ್ಟರ್‌ಗಳು ಪಾಲ್ಗೊಂಡಿದ್ದವು. ತಳ್ಳುಗಾಡಿ ಮೇಲೆ ದ್ವಿಚಕ್ರ ವಾಹನಗಳನ್ನು ಇಟ್ಟು ತಳ್ಳಿಕೊಂಡು ಹೋಗುವ ಮೂಲಕ ತೈಲ ಬೆಲೆ ಏರಿಕೆಯನ್ನು ಪ್ರತಿಭಟನಾಕಾರರು ಖಂಡಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್ ಪಾಷ, ಗೌರವಾಧ್ಯಕ್ಷ ಕೃಷ್ಣನಾಯಕ, ಉಪಾಧ್ಯಕ್ಷ ನಾಗೇಶ್ ನಾಯಕ, ವೆಂಕಟೇಶ್, ಜಿಲ್ಲಾ ಸಂಚಾಲಕ ನಿಸಾರ್ ಅಹಮ್ಮದ್, ಮಣಿ ನಾಯಕ, ಸ್ವಾಮಿ ನಾಯಕ್, ತಾಲೂಕು ಅಧ್ಯಕ್ಷ ಅಯಾಜ್ ಕನ್ನಡಿಗ, ಕೊಳ್ಳೇಗಾಲ ಟೌನ್ ಅಧ್ಯಕ್ಷ ಜಗದೀಶ್ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಉಗನಿಯ ಕುಮಾರ್, ರಾಜ್ಯ ರೈತ ಸಂಘದ ರಾಮಕೃಷ್ಣ, ದಶರಥ್, ವೀರಭದ್ರಸ್ವಾಮಿ, ಅಶ್ವಥ್, ನಾಗರಾಜು ಅರೇಪಾಳ್ಯ, ಚಂದ್ರಪ್ಪ, ವೆಂಕಟರಾಜು, ಷಣ್ಮುಖ, ನಾಗರಾಜು ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts