ನಮ್ಮ ಜೀವನ‌ ಪ್ರಕೃತಿಯನ್ನು ಅವಲಂಬಿಸಿದೆ: ಮಾತಾ ಅಮೃತಾನಂದಮಯಿ ಅಮ್ಮ

ಮಂಗಳೂರು: ನಗರದ ಬೋಳೂರು ಅಮೃತ ವಿದ್ಯಾಲಯದಲ್ಲಿ ಮಾತಾ ಅಮೃತಾನಂದಮಯಿ ಅಮ್ಮನವರ ದೇವಿಯವರ ಅಮೃತ ಸಂಗಮ‌ 2019 ಮೊದಲ ದಿನದ ಕಾರ್ಯಕ್ರಮ ಶುಕ್ರವಾರ ಆರಂಭಗೊಂಡಿತು.

ಅಮ್ಮನ ಉಪಸ್ಥಿತಿಯಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಈ ವೇಳೆ ಪ್ರವಚನ ನೀಡಿದ ಅಮ್ಮ ನಮ್ಮ ಜೀವನ‌ ಪ್ರಕೃತಿಯನ್ನು ಅವಲಂಬಿಸಿದೆ. ಪ್ರಕೃತಿ ನಿಯಮ‌ ಪಾಲಿಸದಿದ್ದರೆ ಬದುಕಿನಲ್ಲಿ ಶಾಂತಿ ನೆಮ್ಮದಿ ಸಾಧ್ಯವಿಲ್ಲ. ಪ್ರಕೃತಿಯಿಂದ ಕಲಿಯಲು ಬಹಳಷ್ಟಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಮಾಜಿ ಶಾಸಕ ಕೃಷ್ಣ ಜೆ.ಪಾಲೆಮಾರ್, ಕಾರ್ಪೊರೇಷನ್ ಬ್ಯಾಂಕ್ ಜನರಲ್ ಮ್ಯಾನೇಜರ್ ಭಾರತಿ ಪಿ.ವಿ., ಪತ್ರಕರ್ತೆ ಸಂಧ್ಯಾ ಎಸ್.ಪೈ, ಎಂಆರ್ ಪಿಎಲ್ ಜಿಎಂ ಬಿಎಚ್‌ವಿ ಪ್ರಸಾದ್ ಮೊದಲಾದವರಿದ್ದರು.

Leave a Reply

Your email address will not be published. Required fields are marked *