ಗುಳೇದಗುಡ್ಡ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸದಲ್ಲಿದ್ದ ಜನರ ಧರ್ಮ ಕೇಳಿ ಕೊಲೆ ಮಾಡಿದ್ದು ಹೇಯ ಕೃತ್ಯ. ಅದರ ಪ್ರತೀಕಾರವಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆಪರೇಷನ್ ಸಿಂಧೂರ ಹೆಸರಿನಲ್ಲಿ ದಿಟ್ಟ ಕಾರ್ಯಾಚರಣೆ ಕೈಗೊಂಡಿದೆ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.

ಪಟ್ಟಣದ ಭಾರತೀಯ ಜನತಾ ಪಕ್ಷದ ವತಿಯಿಂದ ಸ್ಥಳೀಯ ಬನ್ನಿಕಟ್ಟಿಯಲ್ಲಿರುವ ತ್ರೈಂಭಕೇಶ್ವರ ದೇವಸ್ಥಾದಲ್ಲಿ ಯೋಧರ ಯೋಗ ಕ್ಷೇಮಕ್ಕಾಗಿ ಪೂಜೆ, ಅಭಿಷೇಕ ಸಲ್ಲಿದ ಬಳಿಕ ಮಾತನಾಡಿದ ಅವರು, ನಮ್ಮ ಸೈನ್ಯ ಜಗತ್ತಿನಲ್ಲೇ ಬಲಿಷ್ಠವಾಗಿದೆ ಎಂದರು.
ಸಂಪತ್ತಕುಮಾರ ರಾಠಿ, ಕಮಲಕಿಶೋರ ಮಾಲಪಾಣಿ, ಪ್ರಶಾಂತ ಜವಳಿ, ಶ್ರೀಕಾಂತ ಭಾವಿ, ವಿಜಯ ಕವಿಶೆಟ್ಟಿ, ಮುತ್ತು ಚಿಕ್ಕನರಗುಂದ, ಸಿಂಧೂರ ತೋಳಮಟ್ಟಿ, ಫೀರಪ್ಪ ಕಂಠಿಗೌಡ್ರ, ಮಹಾಂತೇಶ ಹಿರೇಮಠ, ಅಶೋಕ ಚಾರಕಾಣಿ ಮತ್ತಿತರರು ಇದ್ದರು.