2019ನೇ ಸಾಲಿನ ಆಸ್ಕರ್​ ಪ್ರಶಸ್ತಿಯ ನಾಮನಿರ್ದೇಶಿತರ ಪಟ್ಟಿ ಪ್ರಕಟ

ನವದೆಹಲಿ: ಅಕಾಡೆಮಿ ಆಫ್​ ಮೋಶನ್​ ಪಿಕ್ಚರ್ಸ್ ಆರ್ಟ್ಸ್​​ ಆ್ಯಂಡ್​ ಸೈನ್ಸ್ ತನ್ನ 91ನೇ ಅಕಾಡೆಮಿ ಪ್ರಶಸ್ತಿಯ ನಾಮನಿರ್ದೇಶಿತರ ಪಟ್ಟಿಯನ್ನು ಪ್ರಕಟಿಸಿದೆ.

ಮಂಗಳವಾರ ಬೆಳಗ್ಗೆ ಕ್ಯಾಲಿಪೋರ್ನಿಯಾದ ಹಾಲಿವುಡ್​ನಲ್ಲಿರುವ ಸ್ಯಾಮ್ಯುಯೆಲ್ ಗೋಲ್ಡ್ವಿನ್ ಥಿಯೇಟರ್​​ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರದರ್ಶನ ಕಲಾವಿದರಾದ ಕುಮೈಲ್ ನಾಂಜಿನಿ ಮತ್ತು ಟ್ರೇಸಿ ಎಲ್ಲಿಸ್ ರಾಸ್​ ಅವರು ಆಸ್ಕರ್​ ಪ್ರಶಸ್ತಿಯ ನಾಮ ನಿರ್ದೇಶಿತರನ್ನು ಪ್ರಕಟಿಸಿದರು. ​

ಆಲ್ಫೋನ್ಸೋ ಕೌರನ್​ ನಿರ್ದೇಶನದ ರೋಮಾ ಹಾಗೂ ಯಾರ್ಗೋಸ್​ ಲ್ಯಾಂತಿಮೋಸ್​ ನಿರ್ದೇಶನದ ದಿ ಫೇವರಿಟ್​ ಸೇರಿದಂತೆ ಬ್ಲ್ಯಾಕ್​ ಪ್ಯಾಂಥರ್ಸ್​, ಬ್ಲಾಕ್ಕೆಕ್ಲ್ಯಾನ್ಸ್ಮನ್, ಬೊಹೆಮಿಯನ್ ರಾಪ್ಸೋಡಿ, ಗ್ರೀನ್​ ಬುಕ್​, ಎ ಸ್ಟಾರ್​ ಇಸ್​ ಬಾರ್ನ್​ ಮತ್ತು ವೈಸ್​ ಸಿನಿಮಾಗಳು ಉತ್ತಮ ಚಿತ್ರಗಳ ನಾಮನಿರ್ದೇಶಿತರ ಪಟ್ಟಿಯಲ್ಲಿದೆ.

ವೈಸ್​ ಚಿತ್ರದ ನಾಯಕ ಕ್ರಿಶ್ಚಿಯನ್​ ಬಾಲೆ, ಎ ಸ್ಟಾರ್​ ಬಾರ್ನ್​​ ಚಿತ್ರದ ಬ್ರ್ಯಾಡ್​ಲೀ ಕೂಪರ್​, ಅಟ್​ ಎಟರ್ನಿಟಿಸ್​ ಗೇಟ್​ ಚಿತ್ರದ ವಿಲೆಮ್​ ಡಾಫೋ, ಬೊಹೆಮಿಯನ್ ರಾಪ್ಸೋಡಿ ಚಿತ್ರದ ರಾಮಿ ಮಲೆಕ್​ ಹಾಗೂ ಗ್ರೀನ್​ ಬುಕ್​ ಚಿತ್ರದ ವಿಗ್ಗೊ ಮಾರ್ಟೆನ್​ಸೆನ್​ ಉತ್ತಮ ನಾಯಕ ನಾಮನಿರ್ದೇಶಿತ ಪಟ್ಟಿಯಲ್ಲಿದ್ದಾರೆ.

ರೋಮನ್​ ಚಿತ್ರದ ಯಲಿಟ್ಜ ಅಪಾರಿಸಿಯೊ, ದಿ ವೈಪ್​ ಚಿತ್ರದ ಗ್ಲೆನ್​ ಕ್ಲೋಸ್​, ದಿ ಫೇವರಿಟ್​ ಚಿತ್ರದ ಒಲಿವಿಯಾ ಕೊಲ್ಮನ್​, ಎ ಸ್ಟಾರ್​ ಬಾರ್ನ್​​ ಚಿತ್ರದ ಲೇಡಿ ಗಾಗ ಮತ್ತು ಕ್ಯಾನ್​ ಯು ಎವರ್​ ಫರ್ಗಿವ್​ ಮೀ ಚಿತ್ರದ ಮೆಲಿಸ್ಸಾ ಮ್ಯಾಕ್​ಕಾರ್ತಿ ಅತ್ಯುತ್ತಮ ನಾಯಕಿ ಪಟ್ಟಿಯಲ್ಲಿದ್ದಾರೆ.

ಸ್ಪೈಕ್​ ಲೀ(ಬ್ಲಾಕ್ಕೆಕ್ಲ್ಯಾನ್ಸ್ಮನ್), ಪಾವೆಲ್ ಪಾವ್ಲಿಕೋವ್ಸ್ಕಿ(ಕೋಲ್ಡ್​ ವಾರ್​), ಯಾರ್ಗೋಸ್​​ ಲ್ಯಾಂತಿಮಸ್​(ದಿ ಫೆವರೀಟ್​)​, ಆಲ್ಫೋನ್ಸೋ ಕೌರನ್​(ರೋಮಾ) ಮತ್ತು ಆಡಮ್​ ಮ್ಯಾಕೇ(ವೈಸ್​​) ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿದ್ದಾರೆ. (ಏಜೆನ್ಸೀಸ್​)