Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಆಸ್ಕರ್​ಗೆ ಲಗ್ಗೆಯಿಟ್ಟ ಗಿಟಾರ್​ ಸ್ಟೋರಿ ಸಿನಿಮಾ ‘ವಿಲೇಜ್​ ರಾಕ್​ಸ್ಟಾರ್ಸ್​’

Saturday, 22.09.2018, 2:48 PM       No Comments

ನವದೆಹಲಿ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಸ್ಸಾಮಿ ಚಲನಚಿತ್ರ ‘ವಿಲೇಜ್​ ರಾಕ್​ಸ್ಟಾರ್ಸ್​’ ಈ ಬಾರಿಯ ಆಸ್ಕರ್​ ಅವಾರ್ಡ್​ಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ಆಸ್ಕರ್ ಪ್ರವೇಶ ಆಯ್ಕೆ ಸಮಿತಿ ಅಧ್ಯಕ್ಷ , ಕನ್ನಡಿಗ ಎಸ್​. ವಿ.ರಾಜೇಂದ್ರ ಸಿಂಗ್​ ಬಾಬು ಘೋಷಿಸಿದ್ದಾರೆ.

ವಿಲೇಜ್​ ರಾಕ್​ಸ್ಟಾರ್ಸ್​ ಸಿನಿಮಾವನ್ನು ರಿಮಾ ದಾಸ್ ನಿರ್ದೇಶನ ಮಾಡಿದ್ದಾರೆ. ಸಣ್ಣ ಹಳ್ಳಿಯ ಬಡ ಕುಟುಂಬದ 10 ವರ್ಷದ ಬಾಲಕಿ ಧನು ಎಂಬಾಕೆ ಗಿಟಾರ್​ ಕೊಂಡುಕೊಳ್ಳಬೇಕು. ತನ್ನದೇ ಒಂದು ಸಂಗೀತದ ತಂಡ ಕಟ್ಟಬೇಕು ಎಂದು ಕನಸು ಕಾಣುವ ಕಥಾವಸ್ತು ಚಿತ್ರದಲ್ಲಿದೆ. ರಾಷ್ಟ್ರ ಪ್ರಶಸ್ತಿ ಪಡೆದ ಈ ಚಲನಚಿತ್ರ ಕಳೆದ ವರ್ಷ ಟೊರಾಂಟೋದಲ್ಲಿ ನಡೆದ ಚಲನಚಿತ್ರ ಉತ್ಸವದಲ್ಲಿ ಪ್ರದರ್ಶನಗೊಂಡಿತ್ತು.

ಚಿತ್ರದಲ್ಲಿ ಬಡ ಬಾಲಕಿಯ ಪಾತ್ರದಲ್ಲಿ ಭನಿತಾ ದಾಸ್​ ನಟಿಸಿದ್ದು ಈಕೆ ರಿಮಾ ದಾಸ್​ ಅಕ್ಕನ ಮಗಳು. ಅತ್ಯುತ್ತಮ ಬಾಲ ನಟಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಜಗತ್ತಿನ ಹಲವು ಕಡೆ ನಡೆದ ಫಿಲ್ಮ್​ ಫೆಸ್ಟಿವಲ್​ಗಳಲ್ಲಿ ಪ್ರದರ್ಶನಗೊಂಡು, ಚಿತ್ರದ ಎಡಿಟಿಂಗ್​, ಧ್ವನಿ ಮುದ್ರಣ ಸೇರಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಸಂಜಯ್​ಲೀಲಾ ಬನ್ಸಾಲಿಯವರ ಪದ್ಮಾವತ್​, ಅಲಿಯಾ ಭಟ್​ ಅವರ ರಾಝಿ, ರಾಣಿ ಮುಖರ್ಜಿಯವರ ಹಿಚ್ಕಿ, ವರುಣ್​ ಧವನ್​ರವರ ಅಕ್ಟೋಬರ್​, ಮಾಂಟೋ, ಲವ್​ ಸೋನಿಯಾ ಸಿನಿಮಾಗಳು ಈ ಬಾರಿಯ ಆಸ್ಕರ್​ ರೇಸ್​ನಲ್ಲಿದ್ದವು. ಅವುಗಳನ್ನೆಲ್ಲ ಹಿಂದಿಕ್ಕಿ ವಿಲೇಜ್ ರಾಕ್​ಸ್ಟಾರ್ಸ್​ ಆಯ್ಕೆಯಾಗಿದೆ. ಎಸ್​. ವಿ.ರಾಜೇಂದ್ರ ಸಿಂಗ್​ ಬಾಬು ಅವರು ಭಾರತ ಫಿಲ್ಮ್ ಫೆಡರೇಶನ್​ನಿಂದ ಸಮಿತಿಗೆ ನೇಮಕಗೊಂಡಿದ್ದಾರೆ.

Leave a Reply

Your email address will not be published. Required fields are marked *

Back To Top