ಸಮಾಜ ಸದೃಢವಾಗಲು ಸಂಘಟನೆ ಬಹುಮುಖ್ಯ

ಶಿಕಾರಿಪುರ: ವೀರಶೈವ ಸಮಾಜ ತನ್ನದೇ ಸಿದ್ಧಾಂತ ಮತ್ತು ಸಮಾಜಮುಖಿ ಕಾರ್ಯಗಳಿಂದ ಧರ್ಮೋತ್ಥಾನ ಕಾರ್ಯ ಮಾಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ವೀರಶೈವ ಸಮಾಜದ ರಾಷ್ಟ್ರೀಯ ಕಾರ್ಯಕಾರಿಣಿಗೆ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದ ಗೃಹ ಕಚೇರಿಯಲ್ಲಿ ತಾಲೂಕು ಘಟಕ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜ ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಸಮಾಜದ ಕೆಲಸ ಮಾಡಲು ಇದೊಂದು ಒಳ್ಳೆಯ ಅವಕಾಶ ಎಂದೇ ಭಾವಿಸುತ್ತೇನೆ ಎಂದರು.
ಯಾವುದೇ ಸಮಾಜ ಸದೃಢವಾಗಲು ಸಂಘಟನೆ ಬಹಳ ಮುಖ್ಯ. ಸಂಘ ಶಕ್ತಿ ಬಹುದೊಡ್ಡ ಶಕ್ತಿ ಎಂಬುದನ್ನು ಮನಗಂಡ ಹಾನಗಲ್ ಲಿಂ. ಶ್ರೀ ಕುಮಾರ ಸ್ವಾಮಿಗಳು ಶತಮಾನದ ಹಿಂದೆ ಅಖಿಲಭಾರತ ವೀರಶೈವ ಮಹಾಸಭಾ ಸ್ಥಾಪಿಸುವ ಮೂಲಕ ಹರಿದು ಹಂಚಿಹೋಗಿದ್ದ ವೀರಶೈವ ಸಮಾಜವನ್ನು ಒಗ್ಗೂಡಿಸಿದ್ದರು ಎಂದರು.
ಪದಾಧಿಕಾರಿಗಳಾದ ನಾವು ಸಮಾಜೋತ್ಥಾನಕ್ಕಾಗಿ ಹೆಚ್ಚು ಶ್ರಮಿಸಬೇಕು. ತಾಲೂಕಿನ ಸಮಾಜದ ಹಿಂದುಳಿದವರ ಸಂಕಷ್ಟಗಳಿಗೆ ಸ್ಪಂದಿಸಬೇಕು ಮತ್ತು ಅವರ ದನಿಯಾಗಿ ಕೆಲಸ ಮಾಡಬೇಕು. ಸದಸ್ಯತ್ವ ಹೆಚ್ಚು ಮಾಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇರಲಿ. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದಿಂದ ಸಾಮಾಜಿಕ ಕಾರ್ಯಗಳು ಇನ್ನಷ್ಟು ಆಗಲಿ ಎಂದು ಆಶಿಸಿದರು.
ವೀರಶೈವ ಲಿಂಗಾಯತ ಸಮಾಜದ ಮಠಗಳು ಧರ್ಮೋತ್ಥಾನ ಕಾರ್ಯದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಕೆಲಸ ಮಾಡುತ್ತಿವೆ. ಕಾಯಕ, ದಾಸೋಹ, ಸಹಬಾಳ್ವೆಯ ಮಂತ್ರಗಳು, ಬಸವಾದಿ ಶರಣರ ಚಿಂತನೆಗಳು, ಜಗದ್ಗುರುಗಳ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುವ ಮಹತ್ಕಾರ್ಯ ಮಾಡುತ್ತಿವೆ ಎಂದರು.
ಸಮಾಜ ಕಟ್ಟುವ ಕಾಯಕವನ್ನು ನಿಮಗೆ ಮತ್ತು ನಮಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಬರುವ ಯಾವುದೇ ಹೊಗಳಿಕೆ, ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸಿ ಕೆಲಸ ಮಾಡೋಣ. ಅಧಿಕಾರದ ಅವಧಿಯನ್ನು ವ್ಯರ್ಥ ಮಾಡದೆ ಸಮಾಜದ ಒಳಿತು ಮತ್ತು ಸಂಘಟನೆಗಾಗಿ ವಿನಿಯೋಗಿಸೋಣ. ಇದೊಂದು ಸೇವೆಯ ಪರ್ವಕಾಲ ಮತ್ತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸದೃಢ ಸಮಾಜವನ್ನು ಕಟ್ಟಿ ಎಂದು ಹೇಳಿದರು.
ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಸುಧೀರ್ ಮಾರವಳ್ಳಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನವೀರಪ್ಪ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಶಶಿಧರ್, ಡಿ.ಎಲ್.ಬಸವರಾಜ್, ರುದ್ರೇಶ್, ಪ್ರೇಮಾ, ಸುರೇಶ್, ಭರತ್, ಮಾಜಿ ರಾಘವೇಂದ್ರ, ಅನೂಪ್ ಇತರರಿದ್ದರು.

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ