ಕಂದಾಯ,ವ್ಯಾಪಾರ ನವೀಕರಣ ಶುಲ್ಕ ಹೆಚ್ಚಳಕ್ಕೆ ವಿರೋಧ

blank

ಶೃಂಗೇರಿ: ಪಪಂ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತರದೇ ಕಂದಾಯ ಮತ್ತು ವ್ಯಾಪಾರ ನವೀಕರಣ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಪಪಂ ಆಡಳಿತಾಧಿಕಾರಿ ಗೌರಮ್ಮಗೆ ಪಪಂ ಚುನಾಯಿತ ಸದಸ್ಯರು ತಾಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಪಪಂ ಮಾಜಿ ಅಧ್ಯಕ್ಷ ಹರೀಶ್.ವಿ.ಶೆಟ್ಟಿ ಮಾತನಾಡಿದ ಅವರು, 2022-23ನೇ ಸಾಲಿನಲ್ಲಿ ಕಂದಾಯವನ್ನು ಹೆಚ್ಚಳ ಮಾಡಲಾಗಿದೆ. 2024-25ನೇ ಸಾಲಿನ ಬಜೆಟ್‌ನ ಪೂರ್ವಭಾವಿ ಸಭೆ ನಡೆಸಿ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ಬಾರದೇ ಕೆಲವು ಅಧಿಕಾರಿಗಳು ಮಾತ್ರ ಸಭೆಯಲ್ಲಿ ಭಾಗವಹಿಸಿ ಕಂದಾಯ ಹಾಗೂ ವ್ಯಾಪಾರ ಶುಲ್ಕವನ್ನು ದುಪ್ಪಟ್ಟು ಹೆಚ್ಚಿಸಲಾಗಿದೆ. ಈ ಕುರಿತು ನಾವು ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ವ್ಯಾಪಾರ ಪರವಾನಗಿ ದರ ಹೆಚ್ಚಿಸಬೇಕು ಎಂದು ಸರ್ಕಾರದ ಆದೇಶದ ಬಗ್ಗೆ ಅಧಿಕಾರಿಗಳು ನೀಡಬೇಕು. ಪ್ರಸ್ತುತ ಪಪಂನಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು , ಸಾಮಾನ್ಯ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪಪಂ ಮಾಜಿ ಉಪಾಧ್ಯಕ್ಷ ಎಂ.ಎಲ್. ಪ್ರಕಾಶ್ ಮಾತನಾಡಿ, ಪಟ್ಟಣದ ನಾಗರಿಕರ ಅವಶ್ಯಕತೆ ಹಾಗೂ ಸಮಸ್ಯೆಗಳಿಗೆ ನಾವು ಸದಾ ಸ್ಪಂದಿಸುತ್ತಿದ್ದು, ಪ್ರಸ್ತುತ ಪಪಂನಲ್ಲಿ ಮೂಲಸೌಕರ್ಯಗಳು ನಾಗರಿಕರನ್ನು ತಲುಪುತ್ತಿಲ್ಲ. ಮೀಸಲಾತಿ ಘೋಷಣೆಯಾಗದ ಹಿನ್ನೆಲೆಯಲ್ಲಿ ಅಧಿಕಾರಿ ವರ್ಗದವರು ಕಂದಾಯ,ವ್ಯಾಪಾರ ನವೀಕರಣ ಶುಲ್ಕ ಹೆಚ್ಚಳ ಮಾಡಿರುವುದು ಸರಿಯಲ್ಲ ಈ ಕುರಿತು ಪಪಂ ಆಡಳಿತಾಧಿಕಾರಿ ಗೌರಮ್ಮ ಅವರು ಪುನರ್ ಪರಿಶೀಲನೆ ಮಾಡಿ ಶುಲ್ಕ ದರ ಏರಿಕೆ ಬಗ್ಗೆ ಸೂಕ್ತ ಕ್ರಮ ವಹಿಸಿ ಪಟ್ಟಣದ ನಾಗರಿಕರಿಗೆ ನ್ಯಾಯ ಒದಗಿಸಬೇಕು ಎಂದರು.
ಪಪಂ ಚುನಾಯಿತ ಪ್ರತಿನಿಧಿಗಳಾದ ರಾಧಿಕಾ ಜಯಕುಮಾರ್, ಎಚ್.ಎಸ್.ಮೇಣುಗೋಪಾಲ್ ಶ್ರೀ ವಿದ್ಯಾ ಇದ್ದರು.

Share This Article

ಜಿಮ್​ಗೆ ಹೋಗದೇ, ಹಸಿವಿನಿಂದ ಬಳಲದೇ ಸುಲಭವಾಗಿ 18 ಕೆಜಿ ತೂಕ ಇಳಿಸಿದ ಯುವತಿ! ಹೇಗೆ ಗೊತ್ತಾ? Weight loss

Weight loss : ತೂಕ ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ದೃಢಸಂಕಲ್ಪ ಬೇಕು ಮತ್ತು ಇಷ್ಟದ…

ನಿದ್ರೆಯಲ್ಲಿದ್ದಾಗ ಎದೆ ಮೇಲೆ ಕೂತು ಯಾರೋ ಕತ್ತು ಹಿಸುಕಿದಂತೆ ಅನುಭವ ಆಗಿದೆಯೇ? ಕಾರಣವೇನು? ಇಲ್ಲಿದೆ ಮಾಹಿತಿ… Sleep Paralysis

Sleep Paralysis: ರಾತ್ರಿ ಮಲಗಿರುವಾಗ ದುಃಸ್ವಪ್ನಗಳು ಬರುವುದು ಸಾಮಾನ್ಯ. ಕೆಲವೊಮ್ಮೆ ಯಾರೋ ನಿಮ್ಮ ಎದೆಯ ಮೇಲೆ…