ಕೋಲಾರ: ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ಕಪು$್ಪ ಪಟ್ಟಿ ಧರಿಸಿ, ನಗರದ ಗಾಂಧಿ ವನದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ವೇದಿಕೆಯ ಮೇಡಿಹಾಳ ರಾಘವೇಂದ್ರ ಮಾತನಾಡಿ, ಹಿಂದಿಯೊಂದೇ ದೇಶವನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ ಎಂದು ದೆಹಲಿಯಲ್ಲಿ ಕುಳಿತು ಆಳುತ್ತಿರುವ ರಾಜಕಾರಣಿಗಳು ಹೇಳುತ್ತಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ ಭಾಷೆಗಳು ದೇಶವನ್ನು ಒಡೆಯುತ್ತವೆಯೇ ಎಂದು ಪ್ರಶ್ನಿಸಿದರು.
ಹಿಂದಿಯನ್ನು ದೇಶಪ್ರೇಮದ ಪ್ರತಿಕವೆಂಬಂತೆ ಕೇಂದ್ರ ಸರ್ಕಾರ ಬಿಂಬಿಸುತ್ತಿದೆ. ಹಾಗಿದ್ದರೆ ಈ ನೆಲದ ಭಾಷೆಗಳು ದೇಶವಿರೋಧಿಗಳೇ..?, ದೇಶವೆಂದರೆ ಹಲವು ಭಾಷಿಕ ರಾಜ್ಯಗಳಿಂದ ಆದದ್ದಲ್ಲ, ಹೀಗಿದ್ದ ಮೇಲೆ ಹಿಂದಿಯೊಂದನ್ನೇ ದೇಶದ ಭಾಷೆಯನ್ನಾಗಿ ಬಿಂಬಿಸುವುದೇ ದೇಶವಿರೋಧಿ ಎಂದರು.
ದೇಶದಲ್ಲಿ ಭೌಗೋಳಿಕ, ಸಾಮಾಜಿಕ, ಸಾಂಸತಿ, ಧಾರ್ಮಿಕ, ಭಾಷಿಕ ವೈವಿಧ್ಯತೆ ಅನನ್ಯವಾದದ್ದು. ವಿವಿಧತೆಯಲ್ಲಿ ಏಕತೆ ಎಂಬುದು ಸ್ವಾತಂತ್ರ್ಯ ಚಳವಳಿಗೂ ಹಿಂದಿನ ಘೋಷವಾಕ್ಯವಾಗಿತ್ತು. ಎಲ್ಲ ಭಾಷಿಕ ಸಮುದಾಯಗಳೂ ತಮ್ಮ ವೈವಿಧ್ಯತೆ ಉಳಿಸಿಕೊಂಡೇ ದೇಶ ಒಂದಾಗಿ ಉಳಿಯಲು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳು ರಾಷ್ಟ್ರೀಯ ಭಾಷೆಗಳೇ ಆಗಿವೆ. ಈ ಪರಿಚ್ಛೇದದಲ್ಲಿ ಒಳಗೊಳ್ಳದ ನೂರಾರು ಜೀವಂತ ಭಾಷೆಗಳೂ ನಮ್ಮ ನಡುವೆ ಇವೆ. ಈ ಎಲ್ಲ ಭಾಷೆಗಳು ಉಳಿದು, ಬೆಳೆಯುವ ಹಕ್ಕನ್ನೂ ಒಳಗೊಂಡಿವೆ ಎಂದು ಹೇಳಿದರು.
ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡುವ ಪ್ರಸ್ತಾಪವನ್ನು ಸಂವಿಧಾನ ಕರಡು ರಚನೆಯ ಸಂದರ್ಭದಲ್ಲೇ ತಿರಸ್ಕರಿಸಲಾಗಿದೆ. ಹಿಂದಿಯೂ ಕನ್ನಡದ ಹಾಗೆಯೇ ಒಂದು ಭಾಷೆ ಹೊರತು ಅದನ್ನು ಬಿಂಬಿಸುವ ಅವಶ್ಯವಿಲ್ಲ, ಕೇಂದ್ರ ಸರ್ಕಾರವು ಹಿಂದಿಯನ್ನು ಬೆಂಬಲಿಸುವುದು ಬಿಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಸರ್ಕಾರ ತನ್ನ ಆಡಳಿತಕ್ಕಾಗಿ ಇಂಗ್ಲಿಷ್ ಮತ್ತು ಹಿಂದಿ ಭಾಷೆ ಬಳಸಿಕೊಳ್ಳುತ್ತಿದೆ. ಇಂಗ್ಲಿಷನ್ನು ಬಿಟ್ಟು ಹಿಂದಿ ಮಾತ್ರ ಆಡಳಿತ ಭಾಷೆಯನ್ನಾಗಿ ಮಾಡಿಕೊಳ್ಳಲು ಹುನ್ನಾರ ನಡೆಸುತ್ತಿದೆ. ದಶಕದ ಹಿಂದಿವಿರೋಧಿ ಹೋರಾಟ ವಿಫಲಗೊಳಿಸಿದೆ ಎಂದು ಹೇಳಿದರು.
ಕೆಜಿಎ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಜಿಎಂಲ್ನಲ್ಲಿ ಹಿಂದಿ ಪ್ರಭಾವವನ್ನು ಹೇರಲು ಹೊರ ರಾಜ್ಯಗಳ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಇನ್ನಾದರು ಎಚ್ಚೆತ್ತುಕೊಂಡು ಸ್ಥಳಿಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಕಂಪನಿಯ ಮುಂದೆ ಅರ್ನಿಧಿಷ್ಟಾವಧಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಹಿಳಾ ಅಧ್ಯೆ ಲತಾಬಾಯಿ ಮಾಡಿಕರ್, ಪ್ರಧಾನ ಕಾರ್ಯದರ್ಶಿ ಮುನಿರಾಜು, ಎಂ.ಎಸ್.ಶ್ರೀನಿವಾಸ್, ಶಶಿಕುಮಾರ್, ರಾಮ ಪ್ರಸಾದ್, ಯುಸೇನ್, ಮುರಳಿಧರ್, ಎನ್.ವಿ.ಮಂಜುನಾಥ್, ಲೋಕೇಶ್, ಮೇಹಬೂಬ್, ಗಣೇಶ್, ಸಂತೋಷ್, ಸುಮಾ, ನಾಗೇಶ್, ರಾಮಕೃಷ್ಣಪ್ಪ ಇತರರಿದ್ದರು.