‘ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಾರೆ’: ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕುರಿತಾಗಿ ಸದನದಲ್ಲಿ ಚರ್ಚಿಸಲು ಬೆಳಗ್ಗೆಯೇ ನಿಲುವಳಿ ಸೂಚನೆ ಮಂಡನೆ ಮಾಡಿದ್ದೆವು. ಆದರೆ ಸ್ಪೀಕರ್ ಇದಕ್ಕೆ ಅವಕಾಶ ನೀಡಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಅಧಿವೇಶನದ ಬಳಿಕ ಮಾತನಾಡಿದ ಅವರು, ನಾವು ನಿಲುವಳಿ ಸೂಚನೆ ಮಂಡನೆ ಮಾಡಿದ್ದು ಸ್ಪೀಕರ್ ಗಮನಕ್ಕೂ ತರಲಾಗಿತ್ತು. ಆದರೆ ಪ್ರಿಲಿಮಿನರಿ ಸಬ್​​ಮಿಷನ್​ಗೆ ಅವಕಾಶ ಕೊಡಲಿಲ್ಲ. ಸ್ಪೀಕರ್ ಸರ್ಕಾರದ ಕೈಗೊಂಬೆಯಂತೆ ನಡೆದುಕೊಂಡಿದ್ದಾರೆ. ಅವರಿಗೆ ಯಾರು ಡಿಕ್ಟೇಟ್ ಮಾಡ್ತಿದ್ದರೋ ಗೊತ್ತಿಲ್ಲ ಎಂದು ಕುಟುಕಿದರು.

ಸರ್ಕಾರ ಹೇಳುವುದನ್ನೇ ಸ್ಪೀಕರ್​ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ಹಣಕಾಸು ವಿಧೇಯಕ ಪಾಸ್ ಮಾಡಿದ ಕೂಡಲೇ ಸಂತ್ರಸ್ತರ ಸ್ಥಳಗಳಿಗೆ ಭೇಟಿ ಕೊಡಲು ಹೋಗಬೇಕು ಎಂದು ಸ್ಪೀಕರ್​ ಹೊಸ ರಾಗ ಹಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಸದನದಲ್ಲಿ ಏನು ಚರ್ಚೆ ನಡೆಯುತ್ತಿದೆ ಎಂದು ಜನತೆಗೆ ತೋರಿಸಲು ಮಾಧ್ಯಮಗಳಿಗೂ ಅವಕಾಶ ನೀಡಿಲ್ಲ. ದೂರದರ್ಶನದಲ್ಲಿ ಬರೀ ಸಿಎಂ ಯಡಿಯೂರಪ್ಪ, ಸ್ಪೀಕರ್ ಮಾತನಾಡುವುದನ್ನೇ ತೋರಿಸುತ್ತಾರೆ. ನಮ್ಮ ಧ್ವನಿ ಜನರಿಗೆ ತಲುಪುವ ಅವಕಾಶ ಇಲ್ಲದಂತೆ ಮಾಡಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವ ಕೊಲೆ ಮಾಡಲು ಹೊರಟಿದ್ದಾರೆ ಎಂದು ಹರಿಹಾಯ್ದರು.

 

Leave a Reply

Your email address will not be published. Required fields are marked *