Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ನೀರಾವರಿ ಯೋಜನೆಗಳಿಗೆ ಆದ್ಯತೆ ಕೊಡಿ

Thursday, 12.07.2018, 3:03 AM       No Comments

ಬೆಂಗಳೂರು: ದಶಕದಿಂದ ನನೆಗುದಿಗೆ ಬಿದ್ದಿರುವ ಕೃಷ್ಣಾ ಕಣಿವೆ ಸೇರಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ಅದಕ್ಕಾಗಿ ಆರ್ಥಿಕ ಸಂಪನ್ಮೂಲ ಸಂಗ್ರಹಿಸಲು ಕ್ರಮಕೈಗೊಳ್ಳಬೇಕು ಎಂದು ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಗೋವಿಂದ ಕಾರಜೋಳ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಬುಧವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಕೃಷ್ಣಾ ಮೇಲ್ಡಂಡೆ ಮೂರನೇ ಹಂತದ ಯೋಜನೆ ಆರಂಭಗೊಂಡು ನಾಲ್ಕು ದಶಕಗಳೇ ಕಳೆದರೂ ಯೋಜನೆ ಅನುಷ್ಠಾನ ತೃಪ್ತಿಕರವಾಗಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರಕಾರ 50 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ 2013ರ ಚುನಾವಣೆ ವೇಳೆ ಘೊಷಿಸಿತ್ತಾದರೂ, ಐದು ವರ್ಷದಲ್ಲಿ ಕೇವಲ 8 ಸಾವಿರ ಕೋಟಿ ರೂ. ಮಾತ್ರ ಖರ್ಚು ಮಾಡಿದೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಡಿ.ಕೆ.ಶಿವಕುಮಾರ್, ಯಾವ ಮೂಲದಿಂದ ಕೃಷ್ಣಾ ಯೋಜನೆಗೆ 75 ಸಾವಿರ ಕೋಟಿ ರೂ. ಅನುದಾನ ಒದಗಿಸಬಹುದು ಹೇಳಿ ಎಂದು ಪ್ರಶ್ನಿಸಿದರು. ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಒಂದೇ ಹಂತದಲ್ಲಿ ಅನುದಾನ ಒದಗಿಸಲು ಯಾವುದೇ ಸರಕಾರಕ್ಕೂ ಕಷ್ಟವೇ. ವಿವಿಧ ಯೋಜನೆಗಳ ನೆರವು ಪಡೆದು, ‘ವಾಟರ್ ಬಾಂಡ್’ನಿಂದಲೂ ಅನುದಾನ ಸಂಗ್ರಹಿಸಬಹುದು ಎಂದು ಸಲಹೆ ಮಾಡಿದರು.

ಸಂಪನ್ಮೂಲಕ್ಕಾಗಿ ಬಾಂಡ್ ಹೊರತನ್ನಿ

ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಸಾಕಷ್ಟು ಆರ್ಥಿಕ ಸಂಪನ್ಮೂಲ ಬೇಕಾಗುವುದ ರಿಂದ ನೀರಾವರಿ ಬಾಂಡ್​ಗಳನ್ನು ಹೊರತನ್ನಿ. ಇದಕ್ಕೆ ನಾವೂ ಸಹಕಾರ ನೀಡುತ್ತೇವೆ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಸರಕಾರಕ್ಕೆ ಸಲಹೆ ನೀಡಿದರು. ಬಜೆಟ್ ಮೇಲಿನ ಚರ್ಚೆ ವೇಳೆ ಕಾರಜೋಳ ಮಾತನಾಡುವಾಗ ಮಧ್ಯ ಪ್ರವೇಶಿಸಿದ ಬಿಎಸ್​ವೈ,

ಯುಕೆಪಿ ಪೂರ್ಣಗೊಳಿಸಲು 50 ಸಾವಿರ ಕೋಟಿ ರೂ. ಬೇಕಾಗುತ್ತದೆ. ನೆರೆಯ ಆಂಧ್ರಪ್ರದೇಶ ಕೃಷ್ಣಾ ನದಿ ನೀರಿನ ಸಂಪೂರ್ಣ ಉಪಯೋಗ ಮಾಡಿಕೊಳ್ಳುತ್ತಿದೆ. ಆದರೆ ಅಣೆಕಟ್ಟೆ ನಿರ್ವಣಕ್ಕೆ ತ್ಯಾಗ ಮಾಡಿದ ರಾಜ್ಯದ ರೈತರಿಗೆ ಅದರ ಲಾಭ ದಕ್ಕುತ್ತಿಲ್ಲ. ಆದ್ದರಿಂದ ಸರ್ಕಾರ ನೀರಾವರಿ ಬಾಂಡ್ ಮೂಲಕ ಹಣ ಸಂಗ್ರಹಿಸಿ ಯೋಜನೆ ಕಾರ್ಯಗತಗೊಳಿಸಬೇಕು ಎಂದು ಒತ್ತಾಯಿಸಿದರು. ಶಾಸಕ ಬೊಮ್ಮಾಯಿ ಇದಕ್ಕೆ ದನಿಗೂಡಿಸಿದರು.

ಮನಗೂಳಿ ಕಾಲೆಳೆದ ಕಾರಜೋಳ

1996ರಲ್ಲಿ ಎಂ.ಸಿ. ಮನಗೂಳಿ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಜಾರಿಗೊಳಿಸುವ ತನಕ ಚಪ್ಪಲಿ ಹಾಕುವುದಿಲ್ಲವೆಂದು ಪಣತೊಟ್ಟಿದ್ದರು. ಅವರು ಚಪ್ಪಲಿ ತೊಡುವಂತೆ ಮಾಡಲು ಅಂದಿನ ಪ್ರಧಾನಿ ಎಚ್.ಡಿ ದೇವೇಗೌಡರೇ ಬರಬೇಕಾಯಿತು ಎಂದು ಗೋವಿಂದ ಕಾರಜೋಳ ಸಚಿವ ಮನಗೂಳಿ ಕಾಲೆಳೆದರು. ಈಗ ಆಡಳಿತ ಪಕ್ಷದಲ್ಲಿದ್ದು, ಸಚಿವರಾಗಿರುವುದರಿಂದ ಮನಗೂಳಿ ಉತ್ತರ ಕರ್ನಾಟಕದ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಅನುದಾನ ತಂದು ಯೋಜನೆ ಪೂರ್ಣಗೊಳಿಸಿದರೆ, ರೇಷ್ಮೆ ಪೇಟ ತೊಡಿಸಿ ಮೆರವಣಿಗೆ ಮಾಡಿಸುತ್ತೇನೆ ಎಂದು ಕಿಚಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮನಗೂಳಿ, ಯಾವ ಪೇಟನೂ ಬೇಡ. ಮುಂದಿನ ದಿನದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

Back To Top