ಸಂವಿಧಾನದ ಆಶಯಗಳಿಗೆ ವಿರುದ್ಧ ನಡವಳಿಕೆ

ತಿ.ನರಸೀಪುರ: ಬಿಜೆಪಿ, ಆರ್ ಎಸ್‌ಎಸ್ ಸಂಘಟನೆಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.
ತಾಲೂಕಿನ ಹುಣಸೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ, ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಎಸ್‌ಟಿ ವರ್ಗ ಸೇರ್ಪಡೆಯಿಂದ ವಂಚಿತರಾಗಿದ್ದ ತಳವಾರ, ಪರಿವಾರ ಸಮುದಾಯಗಳನ್ನು ಎಸ್‌ಟಿಗೆ ಸೇರಿಸುವಂತೆ ಶಿಫಾರಸ್ಸು ಮಾಡಿದ್ದರೂ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಇದರ ಪ್ರಸ್ತಾಪ ಮಾಡಿ ಅನುಮೋದನೆ ಕೊಡಿಸಲಿಲ್ಲ. ಶೇ.10ರಷ್ಟು ಮೀಸಲಾತಿ ತರಲು ಅನುಮೋದನೆ ಪಡೆಯುವ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ನೀಡಿದ ಶಿಫಾರಸ್ಸಿನ ಬಗ್ಗೆ ಗಮನವಿರಲಿಲ್ಲ. ಅಂಬೇಡ್ಕರ್ ನೀಡಿದ ಸಂವಿಧಾನ ಬದಲಿಸುವ ಬಗ್ಗೆ ಬಿಜೆಪಿ ಮಾತನಾಡುತ್ತಿದೆ ಎಂದರು.

ರಾಜಕೀಯ ಅಧಿಕಾರ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯದಡಿ ಅಧಿಕಾರ ನೀಡುವುದು ಕಾಂಗ್ರೆಸ್ ಪಕ್ಷದ ಪ್ರಮುಖ ಉದ್ದೇಶ. ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಿ ಹಿಂದುಳಿದ, ಅಲ್ಪಸಂಖ್ಯಾತ, ಶೋಷಿತ ಸಮುದಾಯಗಳಿಗೆ ಅಧಿಕಾರ ದೊರಕಿಸಿಕೊಡುವಲ್ಲಿ ಕಾಂಗ್ರೆಸ್ ಸಫಲವಾಗಿದೆ. ಸಂವಿಧಾನದ ಆಶಯವನ್ನು ಕಾಂಗ್ರೆಸ್ ಪಾಲಿಸುತ್ತಿದೆ ಎಂದರು.

ಇದೇ ವೇಳೆ ಮುಖಂಡರಾದ ಕೇಬಲ್ ನಾಗರಾಜು, ಮಂಡಿ ಪ್ರಕಾಶ್, ನಟರಾಜು ಮತ್ತಿತರರನ್ನು ಬಾವುಟ ನೀಡಿ ಪಕ್ಷಕ್ಕೆ ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೊನ್ನನಾಯಕ, ತಾಲೂಕು ಪಂಚಾಯಿತಿ ಸದಸ್ಯ ಎಂ. ರಮೇಶ್ ಮಾತನಾಡಿದರು. ಕಿರಗಸೂರು ಗ್ರಾಪಂ ಉಪಾಧ್ಯಕ್ಷೆ ಚಂದ್ರಮ್ಮ, ಬ್ಲಾಕ್ ಅಧ್ಯಕ್ಷ ರಮೇಶ್ ಮುದ್ದೇಗೌಡ, ಹುಣಸೂರು ಬಸವಣ್ಣ, ಮನ್ನೆಹುಂಡಿ ಮಹೇಶ್, ಡಿ.ಆರ್ ಮೂರ‌್ತಿ, ಸೋಮಣ್ಣ, ಕಾಂತರಾಜು, ವೆಂಕು, ಲಿಂಗರಾಜು, ಪುಟ್ಟಸ್ವಾಮಿ, ಚಲ್ಲನಾಯಕ, ಮನಸಿದ್ದನಾಯಕ, ರಾಜು, ಮಾದೇವು, ಓಂಕಾರ್ ಕುಮಾರ್