More

  ಬೇಧವಿಲ್ಲದೆ ಬಯಸಿದ ಶಿಕ್ಷಣ ಪಡೆಯಲು ಅವಕಾಶ

  ಹೊನ್ನಾವರ: ಶಾಲೆಯು ದೇವಸ್ಥಾನವಿದ್ದಂತೆ. ಬಡವ, ಶ್ರೀಮಂತ ಎಂಬ ಬೇಧವಿಲ್ಲದೆ ಎಲ್ಲರೂ ಬಯಸಿದ ಶಿಕ್ಷಣ ಪಡೆಯಲು ಅವಕಾಶವಿದೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.

  ತಾಲೂಕಿನ ಮೂರುಕಟ್ಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಮೂರುಕಟ್ಟೆ ಶಾಲೆಯ ರಜತ ಮಹೋತ್ಸವವು ಎಲ್ಲ ಶಾಲೆಗಳಿಗೆ ಮಾದರಿಯಾಗಿದೆ ಎಂದರು.

  ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಮಾತನಾಡಿ, ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಸರ್ಕಾರ ಶಾಲೆಗಳಿಗೆ ಸೌಲಭ್ಯ ನೀಡುತ್ತಿದೆ. ಮೂರುಕಟ್ಟೆ ಶಾಲೆಯ ರಜತ ಮಹೋತ್ಸವ ಸ್ಥಳೀಯರ ಶ್ರಮದಿಂದ ಇತಿಹಾಸವನ್ನು ಸೃಷ್ಟಿಸಿದೆ. ಮಕ್ಕಳನ್ನು ಈ ಶಾಲೆಗೆ ಸೇರಿಸುವ ಮೂಲಕ ಶಾಲೆಯು ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸುವಂತೆ ಮಾಡಬೇಕು ಎಂದರು.

  ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರು, ಎಸ್​ಡಿಎಂಸಿ ಅಧ್ಯಕ್ಷರು, ಗ್ರಾಮದ ಹಿರಿಯರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

  ಗ್ರಾ.ಪಂ. ಅಧ್ಯಕ್ಷ ಐ.ವಿ. ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವಿದ್ಯಾ ಉದಯ ಮೇಸ್ತ, ಸದಸ್ಯರಾದ ಕಿರಣ ದೇಶಭಂಡಾರಿ, ರೀಟಾ ಲೋಪಿಸ್, ಜಿ.ಪಂ. ಮಾಜಿ ಸದಸ್ಯೆ ಶ್ರೀಕಲಾ ಶಾಸ್ತ್ರಿ, ನಗರಬಸ್ತಕೇರಿ ವಿಎಸ್​ಎಸ್ ಸಂಘದ ಅಧ್ಯಕ್ಷ ಗೋವಿಂದ ನಾಯ್ಕ, ಸಮನ್ವಯಾಧಿಕಾರಿ ಎಸ್. .ಎಂ. ಹೆಗಡೆ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ಸುಧೀಶ ನಾಯ್ಕ, ಇಸಿಒ ಪ್ರಮೋದ ನಾಯ್ಕ, ಸಿಆರ್​ಪಿ ಪ್ರಮೀಳಾ ಕೆ.ಎಸ್., ಪುಂಡಲೀಕ ದೇಶಭಂಡಾರಿ ಎಸ್​ಡಿಎಂಸಿ ಅಧ್ಯಕ್ಷ ಉದಯ ದೇಶಭಂಡಾರಿ, ಉಪಾಧ್ಯಕ್ಷೆ ಮಲ್ಲಿಕಾ ಮೇಸ್ತ ಉಪಸ್ಥಿತರಿದ್ದರು.

  ಮುಖ್ಯಾಧ್ಯಾಪಕಿ ಶಾರದಾ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ನಿರ್ಮಲಾ ನಾಯ್ಕ ವರದಿ ವಾಚಿಸಿದರು. ಇಂಚರ ನಾಯ್ಕ ಸ್ಪರ್ಧಾ ವಿಜೇತರ ಯಾದಿ ವಾಚಿಸಿದರು. ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಮೇಸ್ತ ಧನ್ಯವಾದ ಸಮರ್ಪಿಸಿದರು. ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ‘ಚಂದ್ರಹಾಸ ಚರಿತ್ರೆ’ ಯಕ್ಷಗಾನ ಪ್ರದರ್ಶನ ಜನಮನ ಸೆಳೆಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts