More

    ವಿರೋಧಿಗಳಿಗೆ ಅಭಿವೃದ್ಧಿಯಿಂದಲೇ ತಕ್ಕ ಉತ್ತರ

    ಘಟಪ್ರಭಾ: ಉಪಚುನಾವಣೆಯಲ್ಲಿ ನನ್ನ ಭವಿಷ್ಯಕ್ಕಿತ ಮುಖ್ಯವಾಗಿ ರಾಜ್ಯ ಬಿಜೆಪಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭವಿಷ್ಯ ಅಡಗಿತ್ತು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.

    ಮಲ್ಲಾಪುರ ಪಿಜಿ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ತುಂಬ ಜನ ಪ್ರಯತ್ನಪಟ್ಟರು. ಆದರೆ ಸಾಧ್ಯವಾಗಲಿಲ್ಲ ಎಂದರು.

    ಸತೀಶ ಜಾರಕಿಹೊಳಿ ಮಾತು ಕೇಳಿ ಮುಸ್ಲಿಮರು ಕಾಂಗ್ರೆಸ್ ಕಡೆ ವಾಲಿಕೊಂಡರು. ಮುಂದಿನ ದಿನದಲ್ಲಿ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ವಿರೋಧಿಗಳಿಗೆ ತಕ್ಕ ಉತ್ತರ ನೀಡುತ್ತೇನೆ ಎಂದರು.

    ತಕ್ಷಣ ಮಾಸ್ಟರ ಪ್ಲಾನ್: ಘಟಪ್ರಭಾದಲ್ಲಿ ರಸ್ತೆಯನ್ನು ಸಾರ್ವಜನಿಕರು ಅತಿಕ್ರಮಣ ಮಾಡಿಕೊಂಡಿದ್ದರಿಂದ ರಸ್ತೆಯಲ್ಲಿ ತಿರುಗಾಡಲು ಭಯವಾಗುತ್ತಿದೆ. ಆದ್ದರಿಂದ ಸೋಮವಾರದಿಂದಲೆ ಸರ್ವೇ ಮಾಡಿ ಕೆಲಸ ಪ್ರಾರಂಭಿಸಬೇಕು. ಇಲ್ಲದಿದ್ದರೆ ಪಟ್ಟಣ ಪಂಚಾಯಿತಿಯಿಂದ ಜಾಗ ಖಾಲಿ ಮಾಡಬೇಕೆಂದು ಮುಖ್ಯಾಧಿಕಾರಿ ಕೆ.ಬಿ.ಪಾಟೀಲಗೆ ಎಚ್ಚರಿಕೆ ನೀಡಿದರು. ಸುರೇಶ ಕಾಡದವರ, ಸುಭಾಸ ಹುಕ್ಕೇರಿ, ಗಂಗಾಧರ ಬಡಕುಂದ್ರಿ, ಡಿ.ಎಂ.ದಳವಾಯಿ, ರಾಮಣ್ಣ ಹುಕ್ಕೇರಿ, ಈರಣ್ಣ ಕಲಕುಟಗಿ, ಎಂ.ಬಿ.ಮುಚ್ಚಳಂಬಿ, ಶಿವಪುತ್ರ ಕೊಗನೂರ, ಸುರೇಶ ಪೂಜೇರಿ, ಈಶ್ವರ ಮಟಗಾರ, ಮಲ್ಲು ಕೋಳಿ, ಸಲೀಮ ಕಬ್ಬೂರ, ಕಾಡಪ್ಪ ಕರೋಶಿ ಇತರರು ಇದ್ದರು.

    ಗೊಂದಲದಿಂದ ಗೆಲುವಿನ ಅಂತರ ಕಡಿಮೆ

    ಗೋಕಾಕ: ವಿರೋಧಿಗಳು ಕುತಂತ್ರ, ಅಪಪ್ರಚಾರ ಮಾಡಿದರೂ ಮತದಾರರು ನನ್ನನ್ನು ಕೈಬಿಡಲಿಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ. ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮತದಾರರ ಅಭಿನಂಧನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ವ್ಯವಸ್ಥಿತ ಪಿತೂರಿ, ಕುತಂತ್ರ ಹಾಗೂ ಮತದಾರರ ಗೊಂದಲದಿಂದ ಗೆಲುವಿನ ಅಂತರ ಸ್ವಲ್ಪ ಕಡಿಮೆಯಾಗಿದೆ ಎಂದರು. ಮುಸ್ಲಿಮರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ಅಥವಾ ಹೆದರುವ ಅವಶ್ಯಕತೆ ಇಲ್ಲ. ಸ್ಥಳೀಯ ಮುಸಲ್ಮಾನರು ಹಿಂದುಸ್ಥಾನದ ನಿವಾಸಿಗಳಾಗಿದ್ದು, ಕಾಯ್ದೆ ವಿರೋಧಿಸುವಂತೆ ವಿಪಕ್ಷಗಳು ತಪ್ಪು ಸಂದೇಶ ರವಾನಿಸುತ್ತಿದ್ದು, ಅದಕ್ಕೆ ಕಿವಿಗೊಡದಂತೆ ಮನವಿ ಮಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಆರ್. ಕಾಗಲ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ವಿರೂಪಾಕ್ಷ ಯಲಿಗಾರ, ಎಚ್.ಡಿ. ಮುಲ್ಲಾ, ಎ.ಜೆ.ಪಾಟೀಲ, ನಂದಾ ಗಣಾಚಾರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts