ಅಫೀಮು ಕಾನೂನು ಬದ್ಧ ಹೋರಾಟಕ್ಕೆ ಸಿಧು ಬೆಂಬಲ

<< ನನ್ನ ಅಂಕಲ್​ ಔಷಧದಂತೆ ಅಫೀಮು ಸೇವಿಸುತ್ತಿದ್ದರು ಎಂದ ಸಚಿವ >>

ಪಂಜಾಬ್​: ಅಫೀಮು ಹಾಗೂ ಅದರ ಉಪ ಉತ್ಪನ್ನಗಳಾದ ಗಸಗಸೆ ಪುಡಿಗಳನ್ನು ರಾಜ್ಯದಲ್ಲಿ ಬೆಳೆಯುವುದನ್ನು, ಮಾರಾಟ ಮಾಡುವುದನ್ನು ಹಾಗೂ ಸೇವಿಸುವುದನ್ನು ಕಾನೂನುಬದ್ಧಗೊಳಿಸಬೇಕು ಎಂದು ಬೇಡಿಕೆ ಇಟ್ಟಿರುವ ಆಮ್​ ಆದ್ಮಿ ಪಾರ್ಟಿಯ ಮಾಜಿ ಸಂಸದ ಧರ್ಮವೀರ್​ ಗಾಂಧಿಗೆ ಪಂಜಾಬ್​ ಸಚಿವ ನವಜೋತ್​ ಸಿಂಗ್​ ಸಿಧು ಬೆಂಬಲ ನೀಡಿದ್ದಾರೆ.

ಅಫೀಮು ಬೆಳೆಯಲು ಕಾನೂನಿನಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಧ್ವನಿ ಎತ್ತಿರುವ ಗಾಂಧಿಯನ್ನು ಬೆಂಬಲಿಸುತ್ತೇನೆ. ನನ್ನ ಅಂಕಲ್​ ಅಫೀಮನ್ನು ಔಷಧದಂತೆ ಬಳಸುತ್ತಿದ್ದರು. ಅಫೀಮು ಹೆರಾಯಿನ್​ಗಿಂತ ಒಳ್ಳೆಯದು ಎಂದು ಎನ್​ಜಿಒ ಭಾನುವಾರ ಏರ್ಪಡಿಸಿದ್ದ ನೊಬೆಲ್​ ಫೌಂಡೇಶನ್​ ಕಾರ್ಯಕ್ರಮದಲ್ಲಿ ಸಿಧು ಹೇಳಿದರು.

ಮುಕ್ತಸರ್​ ಮಾರುಕಟ್ಟೆಯಲ್ಲಿ ಶನಿವಾರ ನಡೆದ ರ‍್ಯಾಲಿಯಲ್ಲಿ ಮಾಜಿ ಸಂಸದ ಧರ್ಮವೀರ್​ ಗಾಂಧಿ ಮತ್ತೊಮ್ಮೆ ಅಫೀಮು, ಅದರ ಉತ್ಪನ್ನಗಳನ್ನು ಬೆಳೆಯುವುದು, ಮಾರಾಟ ಮಾಡುವುದನ್ನು ಕಾನೂನಾತ್ಮಕ ಗೊಳಿಸಬೇಕು ಎಂದು ಆಗ್ರಹಿಸಿದ್ದರು. ಅವರು ಈ ಮೊದಲು ಜುಲೈನಲ್ಲಿ ಒಂದು ಮನವಿಯನ್ನು ಕೇಂದ್ರ ಗೃಹಸಚಿವ ರಾಜನಾಥ್​ ಸಿಂಗ್​ ಅವರಿಗೆ ಸಲ್ಲಿಸಿದ್ದರು.