ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎಗೆ ಸರಳ ಬಹುಮತ

ನವದೆಹಲಿ: ಸದ್ಯ ಲೋಕಸಭೆ ಚುನಾವಣೆ ನಡೆದರೆ ಆಡಳಿತಾರೂಢ ಎನ್​ಡಿಎಗೆ 281 ಸೀಟುಗಳು ದೊರೆಯಲಿದ್ದು, ಸರಳ ಬಹುಮತ ಸಿಗಲಿದೆ ಎಂದು ಇಂಡಿಯಾ ಟಿವಿ ಚುನಾವಣೆ ಸಮೀಕ್ಷೆ ಹೇಳಿದೆ. ಸಮೀಕ್ಷೆ ಪ್ರಕಾರ ಬಿಜೆಪಿಗೆ 247, ಕಾಂಗ್ರೆಸ್​ಗೆ 79 ಹಾಗೂ ಇತರರಿಗೆ 217 ಸೀಟು ಸಿಗುವ ಸಾಧ್ಯತೆಯಿದೆ. 2014ರ ಚುನಾವಣೆಗೆ ಹೋಲಿಸಿದರೆ, ಬಿಜೆಪಿ ಸುಮಾರು 30 ಸೀಟು ಕಳೆದುಕೊಳ್ಳಲಿದೆ. ಅದೇ ಪ್ರಮಾಣದ ಸೀಟನ್ನು ಕಾಂಗ್ರೆಸ್ ಗಳಿಸಲಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೂರಂಕಿ ತಲುಪುವುದು ಅಸಾಧ್ಯ ಎಂದು ಸಮೀಕ್ಷೆ ಹೇಳಿದೆ. ಬಿಜೆಪಿ ನೇತೃತ್ವದ ಎನ್​ಡಿಎ ಪ್ರಾಬಲ್ಯ ದೆಹಲಿ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್​ಗಢ, ಬಿಹಾರ, ಉತ್ತರಪ್ರದೇಶದಲ್ಲಿ ಮುಂದುವರಿಯಲಿದ್ದು, ಈಶಾನ್ಯ ಭಾರತ ಹಾಗೂ ಪಶ್ಚಿಮ ಬಂಗಾಳದಲ್ಲಿ ಖಾತೆ ತೆರೆಯಲಿದೆ ಎಂದು ಸಮೀಕ್ಷೆ ಹೇಳಿದೆ.