20.4 C
Bangalore
Monday, December 9, 2019

ಮಂತ್ರಿಗಳೇ ಸರ್ಕಾರಿ ಹಾಸ್ಟೆಲ್​ಗಳ ಬಗ್ಗೆ ನಿಮ್ಮ ನಿಲುವೇನು?

Latest News

ವಿಜಯನಗರ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ ಬಿಜೆಪಿಯ ಆನಂದ್ ಸಿಂಗ್​…

ಬಳ್ಳಾರಿ: ಗಣಿನಾಡಿನ ವಿಜಯನಗರ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಮೊದಲ ಸುತ್ತಿನ ಮತ ಎಣಿಕೆ ಮುಗಿದಾಗ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ...

ಮೊದಲ ಸುತ್ತಿನ ಮತಎಣಿಕೆ: ಹೊಸಕೋಟೆಯಲ್ಲಿ ಪಕ್ಷೇತರ ಶರತ್​ ಬಚ್ಚೇಗೌಡ, ಯಶವಂತಪುರದಲ್ಲಿ ಜೆಡಿಎಸ್​ ಜವರಾಯಿಗೌಡ ಮುನ್ನಡೆ

ಬೆಂಗಳೂರು: ಹೊಸಕೋಟೆ ವಿಧಾನಸಭಾ ಹಾಗೂ ಯಶವಂತಪುರ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತಎಣಿಕೆ ಪಕ್ರಿಯೆ ಮುಗಿದಿದೆ. ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ವಿರುದ್ಧ ಪಕ್ಷೇತರ...

ಬೈ ಎಲೆಕ್ಷನ್ ರಿಸಲ್ಟ್​| ಯಲ್ಲಾಪುರದಲ್ಲಿ ಮೂರನೇ ಸುತ್ತು ಮತ ಎಣಿಕೆ ಅಂತ್ಯ

ಕಾರವಾರ: ರಾಜ್ಯದ ಉಪಚುನಾವಣಾ ಸಮರದಲ್ಲಿ ಗಮನಸೆಳೆದಿರುವ ಯಲ್ಲಾಪುರ ಕ್ಷೇತ್ರದ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಮೂರನೇ ಸುತ್ತು ಮುಕ್ತಾಯವಾದಾಗ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ...

ರಾಣೇಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಮುನ್ನಡೆ

ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ 417 ಮತಗಳ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ...

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

| ಕೋಟ ಶ್ರೀನಿವಾಸ ಪೂಜಾರಿ 

ತ್ತೀಚೆಗೆ ನಾನು ರಾಜ್ಯ ಪ್ರವಾಸದ ವೇಳೆ, ಗದಗ ಜಿಲ್ಲೆಯ ಹಾಸ್ಟೆಲ್ ಒಂದಕ್ಕೆ ಭೇಟಿ ನೀಡಿ ಬಡವರ ಮಕ್ಕಳು ನರಕಸದೃಶ ವಾತಾವರಣದಲ್ಲಿ ಕಲಿಯುತ್ತಿರುವುದು ಕಂಡೆ. ‘ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಮಂತ್ರಿ ಪ್ರಿಯಾಂಕ ಖರ್ಗೆಯವರು ಸರ್ಕಾರಿ ಹಾಸ್ಟೆಲ್ ಸುಧಾರಣೆಯತ್ತ ಗಮನ ಕೊಡಬೇಕು’ ಎಂದು ನಂತರ ಮಾಧ್ಯಮಗಳಲ್ಲಿ ಆಗ್ರಹಿಸುವಾಗ ಕಡುಬಡತನದಲ್ಲಿ ಬೆಳೆದು ಶಿಕ್ಷಣಕ್ಕಾಗಿ ಹಾಸ್ಟೆಲ್​ನಲ್ಲಿ ಉಳಿದುಕೊಂಡಿರುವ ಹಿಂದುಳಿದ ವರ್ಗ ಮತ್ತು ದಲಿತ ಜನಾಂಗದ ಮಕ್ಕಳಿಗೆ ಹೊತ್ತಿನ ಊಟ, ಕುಡಿಯಲು ನೀರು, ಹೊದೆಯಲು ವಸ್ತ್ರ, ಚೊಕ್ಕವಾದ ಶೌಚಗೃಹ, ಪುಸ್ತಕವಿರುವ ಗ್ರಂಥಾಲಯ, ಓದಲು ಬೆಳಕಿಗಾಗಿ ವಿದ್ಯುತ್, ಇವುಗಳನ್ನು ಸಮರ್ಪಕವಾಗಿ ಕೊಡಲಾಗದಿದ್ದರೆ ನಿಮ್ಮ ಇಲಾಖೆಗೆ ಅರ್ಥವೇನು? ಎಂದು ಪ್ರಶ್ನಿಸಿದ್ದೆ. ಹಾಸ್ಟೆಲ್​ನಲ್ಲಿ ಕಲಿಯುವ ದಲಿತ ಮಕ್ಕಳ ಕನಿಷ್ಠ ಬೇಡಿಕೆಯನ್ನು ಪೂರೈಸಿ ಎಂದು ಆಗ್ರಹಿಸಿ ಮಾತು ಮುಗಿಸುವಾಗ ಹಾಸ್ಟೆಲ್​ಗಳಲ್ಲಿ ಇಷ್ಟೆಲ್ಲ ಮಕ್ಕಳು ಕಷ್ಟ ಪಡುತ್ತಿದ್ದಾರೆ, ಸರಿಪಡಿಸಲಾಗದಿದ್ದರೆ ನಿಮ್ಮ ರಾಜೀನಾಮೆ ಕೇಳಬೇಕಾಗುತ್ತದೆ ಎಂದಿದ್ದೆ. ಅಂದರೆ ಬಡವರ ಮಕ್ಕಳಿಗೆ ಬದುಕುವ ಹಕ್ಕು ನೀಡದಿದ್ದರೆ ಇಲಾಖೆ ಮತ್ತು ಅದರ ಮಂತ್ರಿಯ ಅವಶ್ಯಕತೆಯೇನು? ಎಂದು ಪ್ರಶ್ನಿಸಿದ್ದು ಹೌದು. ನನ್ನ ಮಾತನ್ನು ಈಗಲೂ ಸಮರ್ಥಿಸುತ್ತೇನೆ. ಸಮಾಜ ಕಲ್ಯಾಣ ಮಂತ್ರಿ ಪ್ರಿಯಾಂಕ ಖರ್ಗೆ ತಕ್ಷಣ ಸಂಬಂಧಿತ ಹಾಸ್ಟೆಲ್​ಗಳಿಗೆ ಧಾವಿಸಿ ಅವ್ಯವಸ್ಥೆಗಳನ್ನು ಕಣ್ಣಾರೆ ಕಂಡು, ಬಡವರ ಮಕ್ಕಳಿಗೆ ನ್ಯಾಯ ಕೊಡಬಹುದು ಎಂದು ನಾನಂದುಕೊಂಡಿದ್ದರೆ, ಆದದ್ದೆ ಬೇರೆ. ನಾನು ಸಾರ್ವಜನಿಕ ಜೀವನದಲ್ಲಿ ಗೌರವಿಸುವ ರಾಜ್ಯದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯವರ ಮಗ ಪ್ರಿಯಾಂಕ ಖರ್ಗೆ ನನಗೆ ಪ್ರತಿಕ್ರಿಯಿಸಿ ಸವಾಲು ಹಾಕುವ ಭರದಲ್ಲಿ ಅವರ ಇಲಾಖೆಯ ಬಡವರ ಮಕ್ಕಳ ಕಣ್ಣೀರು ಒರೆಸುವ ತನ್ನ ಜವಾಬ್ದಾರಿ ಮರೆತೇ ಬಿಟ್ಟರು. ಅಷ್ಟೇ ಅಲ್ಲ, ಸಮಾಜದ ವಂಚಿತ ಜನಾಂಗದ ಮಕ್ಕಳ ಬದುಕಿಗೆ ಬಲ ನೀಡುವ ಇಚ್ಛಾಶಕ್ತಿ ಮೆರೆಯುವ ಬದಲು ‘ಪರಿಶಿಷ್ಟ ಜಾತಿಯ ಹಾಸ್ಟೆಲ್​ಗಳಿಗೆ ನಿಮ್ಮ ಶಾಸಕರ ನಿಧಿಯಿಂದ ಎಷ್ಟು ಹಣ ಕೊಟ್ಟಿದ್ದೀರಿ?’ ಎಂದು ನನ್ನನ್ನು ಪ್ರಶ್ನಿಸುವಾಗ, ಹಾಸ್ಟೆಲ್​ಗಳಿಗೆ ಶಾಸಕರ ನಿಧಿಯಿಂದ ಹಣ ಕೊಡುವ ಅಧಿಕಾರ ಸರ್ಕಾರ ಸುತ್ತೋಲೆ ಮೂಲಕ ಕೊಟ್ಟಿಲ್ಲ ಎಂಬುದರತ್ತ ಗಮನವನ್ನೇ ಕೊಡಲಿಲ್ಲ ಅಥವಾ ‘ದುರ್ಬಲರ ಮಕ್ಕಳು ಕಲಿಯುವ ಹಾಸ್ಟೆಲ್​ಗಳಿಗೆ ಇಲಾಖೆಯಲ್ಲಿ ಅನುದಾನದ ಕೊರತೆಯಿಲ್ಲ. ಬದಲಾಗಿ ಆಡಳಿತಾತ್ಮಕ ಇಚ್ಛಾಶಕ್ತಿಯ ಕೊರತೆಯಿದ್ದು ನಾನದನ್ನು ಸರಿಪಡಿಸುತ್ತೇನೆ’ ಎಂಬ ಕನಿಷ್ಠ ಮಂತ್ರಿಯಾಡುವ ಪರಿಜ್ಞಾನದ ಮಾತನ್ನಾದರೂ ಆಡಿಲ್ಲವೆಂಬುದೇ ಅಚ್ಚರಿ.

ಪ್ರಿಯಾಂಕ ಖರ್ಗೆಯವರು ಮರೆತಿರಬಹುದು. ಅವರದ್ದೇ ಸರ್ಕಾರವಿದ್ದಾಗ ವಿಧಾನ ಪರಿಷತ್ತಿನಲ್ಲಿ ವಿಪಕ್ಷದ ನಾವೆಲ್ಲ, ಸರ್ಕಾರಿ ಹಾಸ್ಟೆಲ್​ಗಳು ವಿದ್ಯಾರ್ಥಿಗಳ ಪಾಲಿಗೆ ನರಕವಾಗಿದೆ, ಮಕ್ಕಳು ಉಣ್ಣುವ ಅನ್ನವನ್ನೂ ಕೊಡುವಲ್ಲಿ ಹಾಸ್ಟೆಲ್​ಗಳು ವಿಫಲವಾಗಿವೆ, ದಿಂಬು ಹಾಸಿಗೆಯಲ್ಲೂ ಭ್ರಷ್ಟಾಚಾರದ ಆರೋಪವಿದೆ, ವಿದ್ಯಾರ್ಥಿಗಳಿಗೆ ಕೊಡುವ ಸವಲತ್ತುಗಳು ಮಧ್ಯವರ್ತಿಗಳ ಪಾಲಾಗುತ್ತಿದೆ, ಈ ಬಗ್ಗೆ ಸದನ ಸಮಿತಿಯೊಂದನ್ನು ರಚಿಸಿ ತನಿಖೆ ಮಾಡಬೇಕೆಂದು ಆಗ್ರಹಿಸಿದ್ದೆವು. ವಾದ-ವಿವಾದಗಳೆಷ್ಟೇ ನಡೆದರೂ ಸರ್ಕಾರ ಪರಿಶೀಲಿಸುವ ಭರವಸೆ ನೀಡಿ ಜಾರಿಕೊಂಡಿದ್ದಂತೂ ಸತ್ಯ. ವಿಪಕ್ಷವಾದ ನಾವು ಅಷ್ಟಕ್ಕೆ ಬಿಡಲಿಲ್ಲ. ಬದಲಾಗಿ, ಸತ್ಯಶೋಧನೆ ಮಾಡಬೇಕಾದ ಸರ್ಕಾರ ಅದರದ್ದೆ ಕಾರಣಕ್ಕೆ ಹಿಂಜರಿಯಬಹುದು. ಆದರೆ ಹಾಸ್ಟೆಲ್ ಸಮೀಕ್ಷೆಯನ್ನು ಪ್ರತಿಪಕ್ಷವಾದ ಬಿಜೆಪಿಯಿಂದ ಮಾಡುತ್ತೇವೆ ಎಂದು ಘೊಷಿಸಿ ಹೊರ ಬಂದೆವು. ಗೆಳೆಯ ಖರ್ಗೆ ರಾಜಕಾರಣವೆಂಬ ಆಕ್ರೋಶದ ಕುದುರೆಯಿಂದ ಕೆಳಗಿಳಿದು, ನಿರ್ಲಿಪ್ತ ಮನೋಭಾವದಿಂದ ಒಮ್ಮೆ ಆ ಸಮೀಕ್ಷೆಯನ್ನು ನೋಡಬೇಕು. ರಾಜ್ಯದಲ್ಲಿ ಹಾಸ್ಟೆಲ್ ಸಂದರ್ಶನದ ಸಂದರ್ಭ ನಮಗರ್ಥವಾದ ವಿಚಾರವೆಂದರೆ ವಿದ್ಯಾರ್ಥಿಗಳ ಪಾಲಿಗೆ ಪ್ರತ್ಯಕ್ಷ ನರಕವೊಂದಿದ್ದರೆ ಅದು ಸರ್ಕಾರಿ ಹಾಸ್ಟೆಲ್!

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳನ್ನೂ ತೆಗೆದುಕೊಂಡರೆ, ರಾಜ್ಯದಲ್ಲಿ ಒಟ್ಟಾರೆ 3,165 ಸರ್ಕಾರಿ ಬಾಲಕರ ಹಾಸ್ಟೆಲ್​ಗಳಿದ್ದು ಅವುಗಳಲ್ಲಿ 2,38,707 ವಿದ್ಯಾರ್ಥಿಗಳು ವಸತಿ ಸೌಲಭ್ಯ ಪಡೆದಿದ್ದಾರೆ. 1,699 ವಿಧ್ಯಾರ್ಥಿನಿಯರ ಹಾಸ್ಟೆಲ್​ಗಳಲ್ಲಿ 1,41,440 ಹೆಣ್ಣು ಮಕ್ಕಳಿದ್ದಾರೆ. ಒಟ್ಟಾರೆ 4,864 ಹಾಸ್ಟೆಲ್​ಗಳಲ್ಲಿ 3,80,147 ಅಂದರೆ ಕೆಲವು ಕಡೆ ಹೆಚ್ಚಾಗಿ ಮಕ್ಕಳು ಬೇಡಿಕೆ ಇಟ್ಟರೆ ಬರೋಬ್ಬರಿ 4 ಲಕ್ಷ ಮಕ್ಕಳಿಗಿಂದು ಹಾಸ್ಟೆಲ್​ಗಳು ಆಶ್ರಯ ಕೊಟ್ಟಿವೆ,

ಒಟ್ಟು ಇರುವ ಎಸ್.ಸಿ. ಎಸ್.ಟಿ ಹಾಸ್ಟೆಲ್​ಗಳ ಪೈಕಿ 250 ಹಾಸ್ಟೆಲ್​ಗಳಲ್ಲಿ ವಾರ್ಡನ್​ಗಳೇ ಇಲ್ಲ. 381 ಪ.ಜಾತಿ ಮತ್ತು ಒ.ಬಿ.ಸಿ. ಹಾಸ್ಟೆಲ್​ಗಳಲ್ಲಿ ನರಮನುಷ್ಯರು ಶೌಚಗೃಹ ಉಪಯೋಗಿಸಲು ಸಾಧ್ಯವಿಲ್ಲ. ನಿಖರವಾದ ಅಂಕಿ-ಅಂಶಗಳ ಪ್ರಕಾರ 336 ಹಾಸ್ಟೆಲ್​ಗಳಲ್ಲಿ ಸ್ನಾನಗೃಹಗಳಿಗೆ ಬಾಗಿಲುಗಳೇ ತೋರುತ್ತಿಲ್ಲ. ಬಹುತೇಕ ಹಾಸ್ಟೆಲ್​ಗಳಲ್ಲಿ ಬಿಸಿನೀರಿನ ಸೌಲಭ್ಯವಿಲ್ಲ. 500ಕ್ಕೂ ಮಿಕ್ಕಿ ಹಾಸ್ಟೆಲ್​ಗಳಲ್ಲಿ ಶುದ್ಧ ಕುಡಿಯುವ ನೀರಿಲ್ಲ. 650 ಹಾಸ್ಟೆಲ್​ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ತುಂಬಿಸಿ ಅಕ್ಷರಶಃ ಕುರಿ ದೊಡ್ಡಿಗಳ ಬದುಕಾಗಿ ಪರಿವರ್ತಿಸಿದ್ದಾರೆ. ಕೆಲವು ಹಾಸ್ಟೆಲ್​ಗಳಲ್ಲಿ ಬೆಳಗ್ಗೆ ಮಕ್ಕಳಿಗೆ ಉಪಾಹಾರವನ್ನೆ ನೀಡುತ್ತಿಲ್ಲ. ನಮಗೆ ಸಿಕ್ಕಿರುವ ಮಾಹಿತಿಯ ಪ್ರಕಾರ 350ಕ್ಕೂ ಹಾಸ್ಟೆಲ್​ಗಳು ಮಧ್ಯಾಹ್ನದ ಊಟ ಸಮರ್ಪಕವಾಗಿ ನೀಡುತ್ತಿಲ್ಲ. ಕೆಲವು ಹಾಸ್ಟೆಲ್​ಗಳಲ್ಲಿ ರಾತ್ರಿ ಊಟಕ್ಕೆ ಗತಿ ಇಲ್ಲ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶೇ.50ಕ್ಕೂ ಮೀರಿ ಹಾಸ್ಟೆಲ್​ಗಳು ಬಾಡಿಗೆ ಕಟ್ಟಡದಲ್ಲಿವೆ. ತಿಂಗಳಿಗೆ 40 ಸಾವಿರ ಬಾಡಿಗೆ ಕೊಡುವಂಥ ಬಾಡಿಗೆ ಕಟ್ಟಡವನ್ನು ಕಾಣಬಹುದು, ಆದರೆ 4 ವರ್ಷ ಮೀರಿದರೂ ಸ್ವಂತ ಕಟ್ಟಡವೇ ತಲೆಯೆತ್ತಿಲ್ಲ. ಕಳೆದ ಸಾಲಿನಲ್ಲಿ ಸರ್ಕಾರ 5 ವರ್ಷದ ಅವಧಿಯಲ್ಲಿ ಬಾಡಿಗೆ ಕೊಟ್ಟ ಮೊತ್ತ 130 ಕೋಟಿ ರೂಪಾಯಿ. ಇದರ ಹಿಂದೆ ಯಾವ್ಯಾವ ತಿಮಿಂಗಿಲಗಳು ಎಷ್ಟೆಷ್ಟು ಸೂರೆ ಮಾಡಿದವೆಂದು ಮಂತ್ರಿಗಳಾದ ನೀವು ಅರ್ಥ ಮಾಡಿಕೊಳ್ಳಬೇಕು. ನಿಮ್ಮದೇ ಕಲಬುರಗಿ ಜಿಲ್ಲೆಯಲ್ಲಿ ಓದಲು ಮೇಜು ಕುರ್ಚಿ ಇಲ್ಲದ ಹಾಸ್ಟೇಲ್​ಗಳ ಸಂಖ್ಯೆ ರಾಜ್ಯದಲ್ಲಿ ಗರಿಷ್ಠ ಮಟ್ಟದಲ್ಲಿದೆ. ಚಾಮರಾಜನಗರ ಮತ್ತು ಕಲಬುರಗಿ ನಗರ ಜಿಲ್ಲೆಗಳಲ್ಲಿ ಕುಡಿಯಲು ನೀರಿಲ್ಲದ ಹಾಸ್ಟೇಲ್​ಗಳ ಸಂಖ್ಯೆ ಅತೀ ಹೆಚ್ಚು.

ನಮ್ಮ ಸಮೀಕ್ಷೆ ಪ್ರಕಾರ ಈಗಿರುವ ಹಾಸ್ಟೆಲ್​ಗಳ ಪೈಕಿ 400 ಹಾಸ್ಟೆಲ್​ಗಳಲ್ಲಿ ಗ್ರಂಥಾಲಯವೇ ಇಲ್ಲ. ಕಂಪ್ಯೂಟರ್, ಯು.ಪಿ.ಎಸ್, ಟಿ.ವಿ, ದಿನಪತ್ರಿಕೆಗಳ ಸೌಲಭ್ಯವಿಲ್ಲದಿರುವ ಹಾಸ್ಟೆಲ್​ಗಳ ಸಂಖ್ಯೆ ಶೇ.35 ಮೀರಿದೆ. ಇಷ್ಟಾಗಿಯೂ ಬಡವರ ಮಕ್ಕಳ ಹಾಸ್ಟೆಲ್​ಗಳಲ್ಲಿ ಭ್ರಷ್ಟಾಚಾರ ಯಾವ ಮಟ್ಟದಲ್ಲಿದೆಯೆಂದರೆ, ಸರ್ಕಾರ ಕೊಡುವ ಹಣವಾಗಲಿ, ಬಟ್ಟೆ ಬರೆಗಳಲ್ಲಾಗಲಿ, ಚಪ್ಪಲಿ ಶೂಗಳಲ್ಲಾಗಲಿ, ಊಟವಾಗಲಿ ಊಹಿಸಲಾಗದಷ್ಟು ಸೋರಿ ಹೋಗುತ್ತಿದೆ. ಹೆಣ್ಣುಮಕ್ಕಳ 740 ಹಾಸ್ಟೆಲ್​ಗಳ ಪೈಕಿ, 585 ಹಾಸ್ಟೆಲ್​ಗಳಲ್ಲಿ ಸಿ.ಸಿ ಕ್ಯಾಮರಾಗಳಿಲ್ಲ. 162 ಹಾಸ್ಟೆಲ್​ಗಳಲ್ಲಿ ಕಂಪೌಂಡ್ ಗೋಡೆಗಳಿಲ್ಲ. 500ಕ್ಕೂ ಹೆಚ್ಚು ಹಾಸ್ಟೆಲ್​ಗಳಲ್ಲಿ ಸ್ಯಾನಿಟರಿ ಪ್ಯಾಡ್​ಗಳನ್ನು ಸಮರ್ಪಕವಾಗಿ ಕೊಡುತ್ತಿಲ್ಲ. ಪ್ರತಿ ಹೆಣ್ಣು ಮಕ್ಕಳ ಹಾಸ್ಟೆಲ್​ಗೆ ಇಬ್ಬರು ರಕ್ಷಣಾ ಸಿಬ್ಬಂದಿ, ಕಾಯಂ ವಾರ್ಡನ್​ಗಳಿರಬೇಕೆಂದು ನಿಯಮವಿತ್ತಾದರೂ ಶೇ.50 ಹಾಸ್ಟೆಲ್​ಗಳಿಗೆ ಕಾವಲುಗಾರರಿಲ್ಲ. ಒಟ್ಟಾರೆ, ಹೆಣ್ಣುಮಕ್ಕಳ ಹಾಸ್ಟೆಲ್ ನೋಡಿದಾಗ ಶಿಕ್ಷಣದ ಬದಲು, ಇದೊಂದು ನಿರ್ವಸತಿಗರ ತಾಣವೆಂಬಂತೆ ಭಾಸವಾಗುತ್ತಿದೆ. ಇಲ್ಲಿರುವ ಮಕ್ಕಳು ಕಲಿಯುತ್ತಿಲ್ಲ, ಬದಲಾಗಿ ನರಳುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ, ಒಂದೇ ವರ್ಷದಲ್ಲಿ 600 ಕೋಟಿಗಿಂತಲೂ ಹೆಚ್ಚು ರೂಪಾಯಿ ಬಡವರ ಮಕ್ಕಳ ಹೊಟ್ಟೆಗೆ ಹೋಗದೆ ಮಧ್ಯವರ್ತಿಗಳು ಲಪಟಾಯಿಸಿದ್ದಾರೆ. ಇದು ದಲಿತರಿಗೆ, ಹಿಂದುಳಿದವರಿಗೆ ಆದ ಅನ್ಯಾಯವಲ್ಲವೇನು?

ಒಂದೇ ಯೋಜನೆಯಡಿ ದಲಿತ ಮಕ್ಕಳಿಗೆ ವಿವಿಧ ಸೌಲಭ್ಯಗಳನ್ನೊಳಗೊಂಡ ಕಿಟ್ ಕೊಡುವ 8 ಕೋಟಿ ರೂಪಾಯಿ ಲೂಟಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸದನ ಸಮಿತಿ ಮಾಡಿದ್ದರೆ, ಇದೆಲ್ಲ ಹೊರ ಬರುತಿತ್ತು ಎಂಬ ಸತ್ಯ ನಿಮಗೆ ಗೊತ್ತಿತ್ತು. ಈ ಬಗ್ಗೆ ಅನುಸೂಚಿತ ಜಾತಿ ಮತ್ತು ಹಿಂದುಳಿದ ಕಲ್ಯಾಣ ಸಮಿತಿ ಕೊಟ್ಟಿರುವ ವರದಿಯನ್ನಾದರೂ ಸರ್ಕಾರ ಗಮನಿಸಿದ್ದರೆ, ಹಲವರ ಮೇಲೆ ಭ್ರಷ್ಟಾಚಾರದ ಆರೋಪದಲ್ಲಿ ಕ್ರಮ ಕೈಗೊಳ್ಳಬಹುದಿತ್ತು, ಅದೆಲ್ಲವೂ ನೀರಲ್ಲಿ ಮಾಡಿದ ಹೋಮವಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಶೋಷಿತ ಸಮಾಜಕ್ಕೆ ನ್ಯಾಯ ಕೊಡಲು ವಿಫಲವಾದಾಗ, ಪ್ರತಿಪಕ್ಷ ಮಾತುಗಳ ಮೂಲಕ ಖಂಡಿಸುತ್ತದೆ, ಮಾತ್ರವಲ್ಲ ಜನಾಭಿಪ್ರಾಯದ ಮೂಲಕ ದಂಡಿಸುತ್ತದೆ, ಟೀಕಿಸುತ್ತದೆ. ಆಡಳಿತ ವ್ಯವಸ್ಥೆಯನ್ನು ಸರಿದಾರಿಗೆ ತರುವುದಕೆ್ಕೆ ಯತ್ನಿಸುತ್ತದೆ. ಆದರೆ ಪ್ರಿಯಾಂಕ ಖರ್ಗೆ ಮಟ್ಟಿಗೆ ನನ್ನ ನಂಬಿಕೆ ತಲೆಕೆಳಗಾಯಿತು. ನನ್ನ ಮತ್ತು ಖರ್ಗೆಯವರ ಮಾತುಗಳ ಮತ್ತು ಟ್ವೀಟ್​ಗಳ ಸಮರವಾದ ನಂತರ ಹಾಸ್ಟೇಲ್​ಗಳ ವಿಷಯದಲ್ಲಿ ಸರ್ಕಾರ ಮಾಡಿದ ಒಂದೇ ಒಂದು ಕೆಲಸವೆಂದರೆ, ಹೊಸದಾಗಿ ಕಾಲ್ ಸೆಂಟರ್ ರಚನೆ ಮಾಡಿದ್ದು!

ಕುಡಿಯುವ ನೀರಿಲ್ಲವೆಂಬ ಕೂಗು, ಶೌಚಗೃಹದ ದುರ್ವಾಸನೆಯ ಕೊರಗು, ಅನ್ನ ಕಡಿಮೆಯಾಗುತ್ತದೆಯೆಂಬ ನೋವು, ಸ್ನಾನಗೃಹಕ್ಕೆ ಬಾಗಿಲುಗಳಿಲ್ಲ ಎಂಬ ಆಕ್ಷೇಪ, ಇವೆಲ್ಲಕ್ಕೂ ನಿಮ್ಮ ಹೆಲ್ಪ್​ಲೈನ್ ಪರಿಹಾರ ಕೊಡಬಹುದೇ? ಸಿಟ್ಟು ಸಿಡುಕು ಬಿಟ್ಟು ಬನ್ನಿ, ವಿಪಕ್ಷದ ಟೀಕೆಯನ್ನು ಆರೋಗ್ಯಕರ ಮನಸ್ಸಿನಿಂದ ಸ್ವೀಕರಿಸಿ, ಬಡವರ ಮಕ್ಕಳ ಬದುಕಿಗೆ ಶಕ್ತಿ ಕೊಡುವ ಮನಸ್ಸು ನಿಮಗಿದ್ದರೆ, ನೀವು ಸ್ವತಃ ಹಾಸ್ಟೇಲ್​ಗೆ ಭೇಟಿ ಕೊಡಿ. ಆರೋಗ್ಯಕರ ಸಮಾಜ ನಿರ್ವಣವಾಗುವುದು ಆಡಂಬರ ಮತ್ತು ಅಹಂಕಾರದಿಂದಲ್ಲ. ಮೊದಲಿಗೆ ಆಡಳಿತದಲ್ಲಿ ಇಚ್ಛಾಶಕ್ತಿ ಇದ್ದಾಗ ಹಾಸ್ಟೇಲ್​ಗಳನ್ನು ಸರಿಪಡಿಸುತ್ತೀರಿಯಾದರೆ ನಿಮ್ಮನ್ನು ಗೌರವಿಸುತ್ತೇನೆ, ಅಭಿನಂದಿಸುತ್ತೇನೆ. ಪ್ರತಿಷ್ಠೆಯನ್ನೇ ಮೆರೆಸುತ್ತಿರಾದರೆ, ನಿಮ್ಮ ರಾಜೀನಾಮೆ ಕೇಳುವ ಹಕ್ಕನ್ನು ಕಾದಿರಿಸಿಕೊಂಡಿದ್ದೇವೆ.

ಒಂದೋ ಕೊಳೆತು ನಾರುತ್ತಿರುವ ಬಡವರ ಮಕ್ಕಳ ಹಾಸ್ಟೆಲ್​ನ ಸಮಸ್ಯೆಗಳನ್ನು ಸರಿಪಡಿಸಿ, ಇಲ್ಲವಾದರೆ ಅಧಿಕಾರದ ಕುರ್ಚಿ ಬಿಡಿ. ಚೆಂಡು ನಿಮ್ಮ ಅಂಗಳದಲ್ಲಿದೆ…

(ಲೇಖಕರು ವಿಧಾನ ಪರಿಷತ್ ಪ್ರತಿಪಕ್ಷ ನಾಯಕರು)

(ಅನಿವಾರ್ಯ ಕಾರಣದಿಂದ ದೀಪಾ ಹಿರೇಗುತ್ತಿಯವರ ‘ನಾನು, ನೀವು ಮತ್ತು….’ ಅಂಕಣ ಪ್ರಕಟವಾಗಿಲ್ಲ)

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...