ಕೆರೂರ: ಆಪರೇಷನ್ ಸಿಂಧೂರ ಯಶಸ್ವಿಯಾದ ಪ್ರಯುಕ್ತ ಪಟ್ಟಣದ ರಾಚೋಟೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬಿಜೆಪಿ ಮುಖಂಡರು ವಿಶೇಷ ಪೂಜೆ ಸಲ್ಲಿಸಿದರು.

ಬಿಜೆಪಿ ಯುವ ಮುಖಂಡ ಶರಣಬಸವ ಸಜ್ಜನ ಮಾತನಾಡಿ, ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ನಮ್ಮ ಸೈನಿಕರು ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಉಗ್ರ ತಾಣಗಳ ಮೇಲೆ ದಾಳಿ ನಡೆಸಿದ್ದಾರೆ. ಸೈನಿಕರ ಈ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಬೇಕು. ದೇಶದ ರಕ್ಷಣೆಗೆ ಹಾಗೂ ಭಯೋತ್ಪಾದಕರ ಮಟ್ಟ ಹಾಕಲು ಸೈನಿಕರಿಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥೀಸೋಣ ಎಂದರು.
ಬಿಎಸ್‌ಎ್ ನಿವೃತ್ತ ಸೈನಿಕ ಯಲ್ಲಪ್ಪ ಚೂರಿ ಮಾತನಾಡಿ, ದೇಶದ ರಕ್ಷಣೆಗೆ ಸೇನೆಯಿಂದ ಕರೆ ಬಂದರೆ, ಈಗಲೂ ಯುದ್ಧಕ್ಕೆ ಹೋಗಲು ನಾವು ಸಿದ್ಧರಿದ್ದೇವೆ ಎಂದರು.
ಸೈನಿಕ ಭೀಮಪ್ಪ ವಡ್ಡರ, ಪಪಂ ಸದಸ್ಯ ಕುಮಾರ ಐಹೊಳ್ಳಿ, ಬಿಜೆಪಿ ಮುಖಂಡರಾದ ನಾಗೇಶ ಚತ್ರಭಾನು, ಗುಂಡಣ್ಣ ಬೋರಣ್ಣವರ, ವಿನಾಯಕ ಮಾನ್ವಿ, ಜಯಶ್ರೀ ದಾಸಮನಿ, ರಾಚಣ್ಣ ಹಂಚಿನಮಠ ಮತ್ತಿತರರಿದ್ದಾರೆ.