19.4 C
Bangalore
Friday, December 13, 2019

ಹಳೇ ಕೋರ್ಸ್​ಗಳಿಗೆ ಮಾನ್ಯತೆ ನಿಶ್ಚಿತ

Latest News

FACT CHECK|ತೆಲಂಗಾಣದಲ್ಲಿ ಮೂವರು ಮಹಿಳೆಯರಿಂದ ಯುವಕನ ಮೇಲೆ ಅತ್ಯಾಚಾರ ಸುದ್ದಿ ಎಷ್ಟು ಸತ್ಯ? ಫ್ಯಾಕ್ಟ್​ಚೆಕ್​ ಹೇಳಿದ್ದೇನು?

ಹೈದ್ರಾಬಾದ್​: ತೆಲಂಗಾಣ ಅತ್ಯಾಚಾರ ಪ್ರಕರಣ ನಡೆದ ಬೆನ್ನಲ್ಲೇ ಮೇದಕ್​ ಜಿಲ್ಲೆಯಲ್ಲಿ ಮೂವರು ಮಹಿಳೆಯರು ಯುವಕನೊಬ್ಬನನ್ನು ಅಪಹರಣ ಮಾಡಿ ಆತನ ಮೇಲೆ ಅತ್ಯಾಚಾರ ಎಸಗಿದ್ದಾರೆ...

ರೈತರನ್ನು ಚಿಂತೆಗೀಡುಮಾಡಿದ ಹಕ್ಕಂಡಿ ಗ್ರಾಮದ ಮೈಲಾರಲಿಂಗೇಶ್ವರನ ಕಾರ್ಣಿಕ!

ಬಳ್ಳಾರಿ: ಹೂವಿನಹಡಗಲಿ ತಾಲೂಕಿನ ಹಕ್ಕಂಡಿ ಗ್ರಾಮದಲ್ಲಿ ಈ ಬಾರಿ ಮೈಲಾರಲಿಂಗೇಶ್ವರನ ಕಾರ್ಣಿಕವು ರೈತರಲ್ಲಿ ಆತಂಕ ಸೃಷ್ಟಿಸಿದೆ."ಜೋಡೆತ್ತಿನ ಕೂರಿಗಿ ಮುಗ್ಗರಿಸಿತಲೇ ಪರಾಕ್" ಎಂದು ಗೊರವಯ್ಯ...

ನಾಳೆಯಿಂದ ವೈಪಿಎಸ್ ಛಾಯಾಚಿತ್ರ ಪ್ರದರ್ಶನ

ಬೆಂಗಳೂರು: ಯೂಥ್ ಫೋಟೋಗ್ರಾಫಿಕ್ ಸೊಸೈಟಿ,ಡಿ.14 ರಿಂದ ಎರಡು ದಿನ ಕರ್ನಾಟಕ ಚಿತ್ರಕಲಾ ಪರಿಷತ್​ನಲ್ಲಿ ‘ಬೆಸ್ಟ್ ಆಫ್ ದಿ ಬೆಸ್ಟ್ ’ಶೀರ್ಷಿಕೆಯ ಕಲಾತ್ಮಕ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿದೆ. ಕಳೆದ ಎರಡು...

FACT CHECK| ವಿಶ್ವದ ಅತ್ಯಂತ ಎತ್ತರ ಕಟ್ಟಡ “ಬುರ್ಜ್​ ಖಲೀಫಾ”ದಿಂದ ವ್ಯಕ್ತಿಯ ಲೈವ್​ ಸೂಸೈಡ್​ ಸುದ್ದಿ ನಿಜವೇ?

ನವದೆಹಲಿ: ದುಬೈನಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ "ಬುರ್ಜ್​ ಖಲೀಫಾ" ದಿಂದ ವ್ಯಕ್ತಿಯೊಬ್ಬ ಕೆಳಗಿ ಬೀಳುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು,...

ಮೆಡಿಕಲ್ ಸೀಟ್ ಆಮಿಷವೊಡ್ಡಿ 16.5 ಲಕ್ಷ ರೂ. ವಂಚನೆ!

ಬೆಂಗಳೂರು: ಕಿಮ್ಸ್​  ಕಾಲೇಜಿನಲ್ಲಿ ಸೀಟು ಕೊಡಿಸುವು ದಾಗಿ ನಂಬಿಸಿ 16.5 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ನಾಗರಬಾವಿ ನಿವಾಸಿ ಶಿವರಾಮ...

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 2013-14 ಮತ್ತು 2014-15ನೇ ಸಾಲಿನ ನೇರ ವಿದ್ಯಾರ್ಥಿಗಳ ಕೋರ್ಸ್​ಗಳಿಗೆ ನಿಶ್ಚಿತವಾಗಿ ಮರು ಮಾನ್ಯತೆ ಪಡೆದುಕೊಳ್ಳಲಾಗುವುದು. ಇದರಲ್ಲಿ ಅನುಮಾನ ಬೇಡ. ಇದಕ್ಕಾಗಿ ಕಾನೂನು ಹೋರಾಟಕ್ಕೂ ಹಿಂಜರಿಯಲ್ಲ. ಒಟ್ಟಿನಲ್ಲಿ ಶತಾಯಗತಾಯ ಶ್ರಮಿಸಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ನ್ಯಾಯ ಕಲ್ಪಿಸಲಾಗುವುದು.

ಇದು ಮುಕ್ತ ವಿವಿಯ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅಭಯ. ಮೈಸೂರಿನ ‘ವಿಜಯವಾಣಿ’ ಪತ್ರಿಕಾ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಅವರು ಮುಕ್ತ ವಿವಿ ವಿದ್ಯಮಾನಗಳ ಕುರಿತು ಮುಕ್ತವಾಗಿ ಮಾತನಾಡಿದರು. ಮೂರು ವರ್ಷಗಳಿಂದ ಸ್ತಬ್ಧವಾಗಿದ್ದ ಮುಕ್ತ ವಿವಿಗೆ 2018ರಿಂದ ಮುಂದಿನ ಐದು ವರ್ಷಗಳವರೆಗೆ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ಮಾನ್ಯತೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರವೇಶ ಪ್ರಕ್ರಿಯೆಯಲ್ಲಿ ಲೋಪರಹಿತ ವ್ಯವಸ್ಥೆ ಜಾರಿಯೊಂದಿಗೆ ರದ್ದಾಗಿರುವ ಹಳೇ

ಕೋರ್ಸ್​ಗಳಿಗೂ ಮರುಮಾನ್ಯತೆಗಾಗಿ ಶಕ್ತಿಮೀರಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಈ ಉಭಯ ಶೈಕ್ಷಣಿಕ ಸಾಲಿನಲ್ಲಿ ಕೋರ್ಸ್​ಗಳಿಗೆ ಮಾನ್ಯತೆ ಇಲ್ಲ. ಇದರ ಗತಿ ಏನು? ಈ ವಿಷಯವಾಗಿ ಮುಕ್ತ ವಿವಿ ಏನು ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಗಳೆ ಹೆಚ್ಚು ಮಾರ್ದನಿಸಿದವು. ಹೈದರಾಬಾದ್, ಗೋವಾ, ಉತ್ತರ ಕರ್ನಾಟಕ, ಹೈದರಾಬಾದ್-ಕರ್ನಾಟಕದಿಂದ ಕರೆ ಮಾಡಿದ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಮಂಡಿಸಿ, ಉತ್ತರ ಪಡೆದುಕೊಂಡರು.

ಸ್ವಲ್ಪ ಕಾಯಿರಿ: 2013-14ನೇ ಸಾಲಿನಿಂದ ಮುಕ್ತ ವಿವಿ ಕೋರ್ಸ್​ಗಳ ಮಾನ್ಯತೆಯನ್ನು ಯುಜಿಸಿ ಹಿಂಪಡೆದಿದೆ. ಇದರಿಂದಾಗಿ 2013-14ನೇ ಸಾಲಿನಲ್ಲಿ 49,675 ಮತ್ತು 2014-15ನೇ ಸಾಲಿನಲ್ಲಿ 46,178 ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿಕೊಂಡಿದ್ದಾರೆ. ವಿದ್ಯಾರ್ಥಿಗಳು ಕಲಿತ ಕೋರ್ಸ್​ಗಳಿಗೆ ಯುಜಿಸಿ ಮಾನ್ಯತೆ ಪಡೆದುಕೊಳ್ಳಲು ಎಲ್ಲ ರೀತಿ ಕ್ರಮ ವಹಿಸಲಾಗಿದೆ. 15 ಸಲ ಪತ್ರ ವ್ಯವಹಾರ ಮಾಡಲಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಅಲ್ಲಿವರೆಗೆ ವಿದ್ಯಾರ್ಥಿಗಳು ತಾಳ್ಮೆಯಿಂದ ಕಾಯಲೇಬೇಕು. ಈ ಸಾಲಿನ ಇನ್​ಹೌಸ್ ಕೋರ್ಸ್​ಗಳು ಯುಜಿಸಿ ಮಾರ್ಗಸೂಚಿ ಪ್ರಕಾರವೇ ಇವೆ. ಇವುಗಳಿಗೆ ಮಾನ್ಯತೆ ಪಡೆದುಕೊಳ್ಳಲು ಸಮಸ್ಯೆ ಆಗಲ್ಲ ಎಂದರು.

ಹಳೇ ವಿದ್ಯಾರ್ಥಿ ಹೊಸ ಪ್ರವೇಶ

ಮಾನ್ಯತೆ ಸಮಸ್ಯೆಯಿಂದ ಕೆಲ ವಿದ್ಯಾರ್ಥಿಗಳ ಪದವಿ ಅಪೂರ್ಣವಾಗಿದೆ. ಇನ್ನು ಕೆಲವರ ಪದವಿಗೆ ಮಾನ್ಯತೆ ಇಲ್ಲ. ಹೊಸದಾಗಿ ಪ್ರವೇಶ ಪಡೆಯಲು ಅವರಿಗೆ ಅವಕಾಶ ಕಲ್ಪಿಸಲು ಚಿಂತಿಸಲಾಗಿದೆ. ಅವರಿಗೆ ಶುಲ್ಕದಲ್ಲಿ ರಿಯಾಯಿತಿ ಇರಲಿದೆ. ಆಸಕ್ತರು ಇದನ್ನು ಸದ್ಬಳಕೆ ಮಾಡಿಕೊಳ್ಳಬಹುದು. ಈ ಕುರಿತು 2-3 ದಿನಗಳಲ್ಲಿ ಆದೇಶ ಹೊರಬೀಳಲಿದೆ ಎಂದು ಶಿವಲಿಂಗಯ್ಯ ತಿಳಿಸಿದರು.

ಸಿಬ್ಬಂದಿಗೆ ನೀತಿ ಜಾರಿ

ಮುಕ್ತ ವಿವಿ ಸಿಬ್ಬಂದಿಗೆ ಸಂಬಂಧಿಸಿ ನೀತಿಯೊಂದನ್ನು ಜಾರಿಗೆ ತರಲಾಗುವುದು. ಈವರೆಗೆ ನಿರ್ದಿಷ್ಟ ಮಾರ್ಗಸೂಚಿಗಳಿಲ್ಲ. ಹೀಗಾಗಿ ಸ್ಪಷ್ಟ ನೀತಿ ರೂಪಿಸಿ ಸಿಬ್ಬಂದಿ ವರ್ಗಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು. ಎಲ್ಲ ಪ್ರಾದೇಶಿಕ ಕೇಂದ್ರ ಸೇರಿಸಿ 4-5 ವಿಭಾಗವಾಗಿ ವಿಂಗಡಿಸಿ ಅಂತರ ವರ್ಗಾವಣೆ ಕ್ರಮ ವಹಿಸಲಾಗುವುದು. ಇಲ್ಲಿ ಹುದ್ದೆಗಳಿಗಿಂತ ಹೆಚ್ಚಿನ ನೌಕರರಿದ್ದಾರೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅದು ನೀಡುವ ಸೂಚನೆ ಪಾಲನೆ ಮಾಡಲಾಗುವುದು. ಜತೆಗೆ ವಿವಿಯಲ್ಲಿ 10-15 ವರ್ಷದಿಂದ ಕಾರ್ಯನಿರ್ವಹಿಸಿರುವ ಗುತ್ತಿಗೆ ನೌಕರರನ್ನು ಕಾಯಂಗೊಳಿಸಲು ಕ್ರಮ ವಹಿಸಲಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಕುಲಪತಿ ಮಾಹಿತಿ ನೀಡಿದರು.

ಅಂಕಪಟ್ಟಿ ಪ್ರಮಾಣಪತ್ರ ಪಡೆದುಕೊಳ್ಳಿ

2012-13ಕ್ಕೂ ಹಿಂದಿನ ಎಲ್ಲ ಕೋರ್ಸ್ ಗಳಿಗೂ ಮಾನ್ಯತೆ ಇದೆ. ಈ ವಿದ್ಯಾರ್ಥಿಗಳು ಭಯಪಡಬೇಕಿಲ್ಲ. ಅವರು ನಿಸ್ಸಂಕೋಚವಾಗಿ ಈ ಪದವಿ ಪ್ರಮಾಣದ ಮೂಲಕ ಭವಿಷ್ಯ ರೂಪಿಸಿಕೊಳ್ಳಬಹುದು. ಅಂಕಪಟ್ಟಿ, ಪ್ರಮಾಣಪತ್ರವನ್ನು ವಿವಿಯಿಂದ ಪಡೆದುಕೊಳ್ಳಬಹುದು ಎಂದು ಶಿರಾದ ಉಮಾಭಾರತಿ ಅವರ ಆತಂಕವನ್ನು ಕುಲಪತಿ ನಿವಾರಿಸಿದರು.

ತಾಂತ್ರಿಕ ಕೋರ್ಸ್​ಗಳ ಭವಿಷ್ಯ ಸುಪ್ರೀಂ ಕೈಯಲ್ಲಿ

ತಾಂತ್ರಿಕ ಕೋರ್ಸ್​ಗಳ ಭವಿಷ್ಯ ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಆಧರಿಸಿದೆ. ಪಾಲುದಾರ ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಕೋರ್ಸ್​ಗಳು ನಡೆದಿವೆ. ಇವುಗಳ ಮಾನ್ಯತೆ ರದ್ದಿನಿಂದ 2 ಲಕ್ಷ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿಕೊಂಡಿದ್ದಾರೆ ಎಂದು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ವಿವರಿಸಿದರು.

ಯುಜಿಸಿ, ಇತರ ನಿಯಂತ್ರಕ ಪ್ರಾಧಿಕಾರಗಳ ನಿಯಮ ಉಲ್ಲಂಘಿಸಿ ತಾಂತ್ರಿಕ, ವೈದ್ಯಕೀಯ, ಅರೆ-ವೈದ್ಯಕೀಯ, ನರ್ಸಿಂಗ್, ಆಯುಷ್ ಸೇರಿ ಇತರೆ ತಾಂತ್ರಿಕ ಕೋರ್ಸ್ ಗಳನ್ನು ರಾಜ್ಯ, ಹೊರರಾಜ್ಯ ಮತ್ತು ವಿದೇಶಗಳಲ್ಲಿ 205ಕ್ಕೂ ಹೆಚ್ಚು ಖಾಸಗಿ ಪಾಲುದಾರ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಿದ್ದವು. ಸುಪ್ರೀಂಕೋರ್ಟ್ ತೀರ್ಪ, ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಈ ಪಾಲುದಾರಿಕೆ ಸಂಸ್ಥೆಗಳೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಕಾನೂನು ರೀತ್ಯ ರದ್ದುಪಡಿಸಲಾಗಿದೆ ಎಂದರು. ಈಗ ಮುಕ್ತ ವಿವಿಗೂ ಈ ಸಂಸ್ಥೆಗಳಿಗೂ ಯಾವುದೇ ಸಂಬಂಧವಿಲ್ಲ. ಅಂತಹ ಸಂಸ್ಥೆಗಳ ಕಡೆ ವಿದ್ಯಾರ್ಥಿಗಳು ಹೋಗಬಾರದು. ಅವುಗಳಿಂದ ಆಗುವ ತೊಂದರೆಗೆ ವಿವಿ ಹೊಣೆಯಲ್ಲ ಎಂದು ಸ್ಪಷ್ಟಪಡಿಸಿದರು. ಹಲವಾರು ಶೈಕ್ಷಣಿಕ ಪಾಲುದಾರ ಸಂಸ್ಥೆಗಳಲ್ಲಿ 2015ರವರೆಗೆ ತಾಂತ್ರಿಕ ಮತ್ತು ತಾಂತ್ರಿಕೇತರ ಕೋರ್ಸ್​ಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಕೇರಳ ಹೈಕೋರ್ಟ್​ನಲ್ಲಿ ದಾವೆ ಹೂಡಿದ್ದು, ಪ್ರತಿ ವಿದ್ಯಾರ್ಥಿಗೆ 3 ಲಕ್ಷ ರೂ. ಪರಿಹಾರ ನೀಡಬೇಕು. ಇಲ್ಲವೆ ಮರುಪರೀಕ್ಷೆ ನಡೆಸಬೇಕೆಂದು ತೀರ್ಪು ನೀಡಿದೆ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲಾಗಿದೆ. ಕೇರಳ ಹೈಕೋರ್ಟ್ ಪ್ರಕಾರ ವಿದ್ಯಾರ್ಥಿಗಳಿಗೆ ಪರಿಹಾರ ನೀಡಿದರೆ ಮುಕ್ತ ವಿವಿ ಮುಚ್ಚುವ ಸ್ಥಿತಿ ಬರಲಿದೆ. ಏಕೆಂದರೆ, ವಿದ್ಯಾರ್ಥಿ ಪ್ರವೇಶ ಶುಲ್ಕದಲ್ಲಿ ಶೇ.25 ವಿವಿಗೆ ಬಂದಿದ್ದು, ಉಳಿದ ಶೇ.75 ಹಣ ಶೈಕ್ಷಣಿಕ ಪಾಲುದಾರ ಸಂಸ್ಥೆಗೆ ಹೋಗಿದೆ. ಹೀಗಾಗಿ, ಒಬ್ಬ ವಿದ್ಯಾರ್ಥಿಗೆ 3 ಲಕ್ಷ ರೂ. ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಅವರು ಖಡಕ್ ಆಗಿ ಹೇಳಿದರು. ಈ ವಿಷಯ ಸುಪ್ರೀಂಕೋರ್ಟ್ ನಲ್ಲಿ ಮುಂದಿನ ತಿಂಗಳು ವಿಚಾರಣೆಗೆ ಬರಲಿದೆ. ಅದು ನೀಡುವ ತೀರ್ಪಿನನ್ವಯ ಕ್ರಮ ತೆಗೆದುಕೊಳ್ಳುತ್ತೇವೆ. ಮರುಪರೀಕ್ಷೆ ನಡೆಸುವುದಾದರೂ ರಾಜ್ಯದ ಒಳಗೆ ನಮ್ಮ ನಿಯಂತ್ರಣದಲ್ಲೇ ಪರೀಕ್ಷೆ ನಡೆಸಲಾಗುವುದು ಎಂದು ತುಮಕೂರಿನ ಶ್ರೀವತ್ಸಾ ಪ್ರಶ್ನೆಗೆ ಉತ್ತರಿಸಿದರು.

ಬಾಕಿ 15 ಕೋರ್ಸ್​ಗಳಿಗೂ ಮಾನ್ಯತೆ ಸಿಗಲಿ?

32 ಕೋರ್ಸ್​ಗಳ ಪೈಕಿ 17 ಕೋರ್ಸ್​ಗಳಿಗೆ ಮುಂದಿನ 5 ವರ್ಷದವರೆಗೆ ಮಾನ್ಯತೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಬಿಎ, ಬಿಕಾಂ, ಬಿಎಎಲ್​ಎಲ್​ಬಿ, ಎಂಎ(ಕನ್ನಡ), ಎಂಎ(ಇಂಗ್ಲಿಷ್), ಎಂಎ(ಹಿಂದಿ), ಎಂಎ(ಉರ್ದು), ಎಂಎ (ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ), ಎಂಎ(ಇತಿಹಾಸ), ಎಂಎ(ಅರ್ಥಶಾಸ್ತ್ರ), ಎಂಎ(ರಾಜ್ಯಶಾಸ್ತ್ರ), ಎಂಎ(ಸಾರ್ವಜನಿಕ ಆಡಳಿತ), ಎಂಎ(ಸಮಾಜಶಾಸ್ತ್ರ), ಎಂಎ(ಪತ್ರಿಕೋದ್ಯಮ), ಎಂಕಾಂ, ಎಂಎಎಲ್​ಎಲ್​ಬಿ, ಎಂಎಸ್ಸಿ(ಪರಿಸರ ವಿಜ್ಞಾನ) ಪ್ರವೇಶ ಪ್ರಕ್ರಿಯೆ ಶುರುವಾಗಿದೆ. ಉಳಿದ 15 ಕೋರ್ಸ್​ಗಳಿಗೂ ಮಾನ್ಯತೆ ತಿರಸ್ಕರಿಸಿಲ್ಲ, ಮೊದಲ ಹಂತದಲ್ಲಿ ಪರಿಗಣನೆ ಮಾಡಿಲ್ಲ ಅಷ್ಟೇ. ಮುಂದಿನ ದಿನಗಳಲ್ಲಿ ಇವುಗಳಿಗೂ ಮಾನ್ಯತೆ ಸಿಗುವ ವಿಶ್ವಾಸವಿದೆ. ಅದಕ್ಕಾಗಿ ಯುಜಿಸಿಗೆ ಸೆ.9ರೊಳಗೆ ಪೂರಕ ವರದಿ ಸಲ್ಲಿಸಿ, ಮನವರಿಕೆ ಮಾಡಿಕೊಡಲಾಗುವುದು ಎಂದು ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದರು.

ಎಲ್ಲ ಪ್ರಕ್ರಿಯೆ ಆನ್​ಲೈನ್​ನಲ್ಲಿ

ಇನ್ಮುಂದೆ ಪ್ರವೇಶಾತಿ, ಪರೀಕ್ಷೆ ಪದ್ಧತಿ, ಪದವಿ ಪ್ರಮಾಣಪತ್ರ, ಪರಿಶೀಲನೆ, ವರ್ಗಾವಣೆ ಎಲ್ಲ ಪ್ರಕ್ರಿಯೆಗಳು ಸಂಪೂರ್ಣ ಆನ್​ಲೈನ್​ನಲ್ಲೇ ಆಗಲಿದೆ. ವಿದ್ಯಾರ್ಥಿಗಳಿಗೆ ತ್ವರಿತವಾಗಿ ಸೇವೆ ಒದಗಿಸುವ ನಿಟ್ಟಿನಲ್ಲಿ ಅಗತ್ಯ ದಾಖಲೆಗಳನ್ನು ಆನ್​ಲೈನ್ ಮೂಲಕ ವಿತರಿಸಲಾಗುವುದು. ಕೇಂದ್ರ ಸರ್ಕಾರದ ಆನ್​ಲೈನ್ ಸಂಗ್ರಹ ಜಾಲವಾದ ಎನ್​ಎಡಿ ಸಂಸ್ಥೆ ಜತೆ ಒಪ್ಪಂದವಾಗಿದೆ. ಇದರಲ್ಲಿ ಮುಕ್ತ ವಿವಿ ಅಂಕಪಟ್ಟಿಗಳು, ಪದವಿ ಪ್ರಮಾಣಪತ್ರ, ವಲಸೆ ಪ್ರಮಾಣಪತ್ರ, ಪಿಪಿಸಿ ಮುಂತಾದ ದಾಖಲೆಗಳ ಡಿಜಿಟಲ್ ಮಾದರಿ ದೊರೆಯಲಿದ್ದು, ಇದನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು. ಆಯಾ ಸರ್ಕಾರಿ ಸಂಸ್ಥೆಗಳು ಇವುಗಳನ್ನು ಅಲ್ಲೇ ಪರಿಶೀಲನೆಗೆ ಒಳಪಡಿಸಬಹುದು ಎಂದು ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದರು. ವಿದ್ಯಾರ್ಥಿಗಳ ಪ್ರವೇಶಾತಿ ಕೂಡ ಆನ್​ಲೈನ್​ಗೊಳಿಸಲಾಗಿದೆ. ವಿವಿ ಅಧಿಕೃತ ವೆಬ್​ಸೈಟ್ (ಡಿಡಿಡಿ.kಠಟ್ಠಞಢಠಟ್ಟಛಿ.kಚ್ಟ್ಞಠಿಚkಚ.ಜಟಡ.ಜ್ಞಿ)ನಲ್ಲಿ ವಿವರಣಾ ಪುಸ್ತಕ, ಪ್ರವೇಶಾತಿ ಅರ್ಜಿ ನಮೂನೆ ಮತ್ತು ಶುಲ್ಕ ಪಾವತಿಗಾಗಿ ಚಲನ್​ಗಳ ಡೌನ್​ಲೋಡ್ ಮತ್ತು ಅಪ್​ಲೋಡ್ ಮಾಡಿಕೊಳ್ಳಬಹುದು. ಎಸ್​ಬಿಐ ಬ್ಯಾಂಕ್ ಶಾಖೆಯಲ್ಲಿ ಶುಲ್ಕ ಪಾವತಿಸಿ ಅಗತ್ಯ ದಾಖಲೆಯೊಂದಿಗೆ ವಿವಿ ಪ್ರಾದೇಶಿಕ ಕೇಂದ್ರ ಸಲ್ಲಿಸಬಹುದಾಗಿದೆ ಎಂದು ಗೊಂದಲ ನಿವಾರಿಸಿದರು.

ಬ್ರಿಡ್ಜ್ ಕೋರ್ಸ್​ಗೆ ಮಾನ್ಯತೆ ಇಲ್ಲ

ಪಿಯುಸಿ ಬ್ರಿಡ್ಜ್ ಕೋರ್ಸ್​ಗೆ ಮಾನ್ಯತೆ ಇಲ್ಲ. ಇದು ಪಿಯುಸಿಗೆ ತತ್ಸಮಾನ ಕೋರ್ಸ್ ಅಲ್ಲ. ಈ ಕುರಿತು ಪದವಿ ಪೂರ್ವ ಶಿಕ್ಷಣ ಮಂಡಳಿಗೂ ವರದಿ ನೀಡಲಾಗಿದೆ. ಈ ಕೋರ್ಸ್ ಯುಜಿಸಿ ನಿಯಮಾವಳಿಗೆ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

30 ಸಾವಿರದಲ್ಲಿ ಬಂದವರು 2 ಸಾವಿರ

ಫ್ರಾಂಚೈಸಿಯೊಂದು 30 ಸಾವಿರ ಬಿಇ ಕೋರ್ಸ್ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸಬೇಕೆಂದು ಮದ್ರಾಸ್ ಹೈಕೋರ್ಟ್​ನಲ್ಲಿ ದಾವೆ ಹೂಡಿತ್ತು. ಕೋರ್ಟ್​ನ ಸೂಚನೆ ಪ್ರಕಾರ, ನಿಖರ ಮಾಹಿತಿ ನೀಡಿದಾಗ ವಿದ್ಯಾರ್ಥಿಗಳ ಸಂಖ್ಯೆ 17 ಸಾವಿರಕ್ಕೆ ಇಳಿಯಿತು. ಹೈಕೋರ್ಟ್ ತೀರ್ಪಿನನ್ವಯ ಬೆಂಗಳೂರಿನಲ್ಲಿ ಪರೀಕ್ಷೆ ನಡೆಸಲಾಯಿತು. ಆಗ ಹಾಜರಾದವರು ಬರೀ 2 ಸಾವಿರ. ಅದರಲ್ಲೂ ಅರ್ಧಗಂಟೆಯಲ್ಲೇ ಬಹುತೇಕರು ಉತ್ತರಪತ್ರಿಕೆ ಕೊಟ್ಟು ಹೊರಹೋದರು ಎಂದು ವಿಸಿ ತಾಂತ್ರಿಕ ಕೋರ್ಸ್ ಹಿಂದಿನ ರಹಸ್ಯವನ್ನು ಕುಲಪತಿ ಸೂಕ್ಷ್ಮವಾಗಿ ಬಿಚ್ಚಿಟ್ಟರು.

ಕುಲಪತಿ ಹೇಳಿದ್ದು

# ಎಂಎ (ಇಂಗ್ಲಿಷ್) ಪ್ರವೇಶಕ್ಕೆ ಅಭ್ಯರ್ಥಿಯು ಪದವಿ ಇಂಗ್ಲಿಷ್ ವಿಷಯದಲ್ಲಿ ಕನಿಷ್ಠ 50 ಅಂಕ ಪಡೆಯುವುದು ಕಡ್ಡಾಯ. ಇದು ಯುಜಿಸಿ ನಿಯಮ. ಇದನ್ನು ಸರಳೀಕರಣ ಮಾಡಲು ಬರಲ್ಲ.

# ಬಿಇಡಿ ಕೋರ್ಸ್​ಗೆ ಸಮಕ್ಷಮ ಪ್ರಾಧಿಕಾರದ ಅನುಮತಿ ಬೇಕಾಗಿದೆ. ಇದನ್ನು ಜನವರಿ ಹೊತ್ತಿಗೆ ಪ್ರಾರಂಭಿಸ ಲಾಗುವುದು.

# ಎಸ್ಸೆಸ್ಸೆಲ್ಸಿ- ಪಿಯುಸಿ(10+2) ಅಥವಾ ಇದಕ್ಕೆ ತತ್ಸಮಾನ ಕೋರ್ಸ್ ಕಲಿತವರಿಗೆ ಮಾತ್ರ ಸ್ನಾತಕ ಪದವಿಗೆ ಪ್ರವೇಶ. ವಯಸ್ಸು ಮತ್ತು ಇತರೆ ಕೋರ್ಸ್ ಗಳ ಆಧಾರದ ಮೇಲೆ ಪ್ರವೇಶಾತಿ ನೀಡಲ್ಲ.

ಹೊರ ರಾಜ್ಯದವರಿಗೂ ಸ್ವಾಗತ

ಮುಕ್ತ ವಿವಿಗೆ ಅನ್ಯ ರಾಜ್ಯದವರು, ವಿದೇಶಿಯವರು ಬಂದು ಪ್ರವೇಶಾತಿ ಪಡೆದುಕೊಳ್ಳಬಹುದು. ಯುಜಿಸಿಯು ವಿವಿ ಕಾರ್ಯವ್ಯಾಪ್ತಿಯನ್ನು ರಾಜ್ಯಕ್ಕೆ ಸಿಮೀತಗೊಳಿಸಿದೆ. ಇದು ವಿದ್ಯಾರ್ಥಿಗಳಿಲ್ಲ. ಹೊರರಾಜ್ಯದವರು ವಿವಿಯ ನೇರ ವಿದ್ಯಾರ್ಥಿಗಳಾಗಿ ವಿದ್ಯಾಭಾಸ್ಯ ಮಾಡಬಹುದು. ಇದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಕುಲಪತಿ ಪ್ರಶ್ನೆವೊಂದಕ್ಕೆ ಉತ್ತರಿಸಿದರು.

ಕರೆ ಮಾಡಿದವರು

# ಗೋವಾ- ರಾಜೇಶ್# ಶಿರಾ-ಉಮಾಭಾರತಿ (ಬಿಎ) # ತುಮಕೂರು-ಶ್ರೀವತ್ಸ (ಎಂಎಸ್ಸಿ), ಗಿರೀಶ್ # ಬೆಂಗಳೂರು- ನಾಗರಾಜು (ಬಿಇ), ಸುಹಾಸ್ (ಬಿಸಿಎ), ಗಿರೀಶ್ (ಬಿಟೆಕ್), ಅರುಣ್ # ಕಲಬುರಗಿ-ಸಿದ್ದಪ್ಪ ಜಮಾದಾರ # ನಂಜನಗೂಡು-ರಾಜಕುಮಾರ್ # ಮಡಿಕೇರಿ-ರವಿಚಂದ್ರ # ಬೀದರ್-ತೀರ್ಥಪ್ಪ # ಉಡುಪಿ-ರಮ್ಯಾ, ರಮೇಶ್​ಗೌಡ # ಸಿದ್ದಾಪುರ-ಲತಾ # ಚಿಕ್ಕಮಗಳೂರು-ಶ್ರೀಧರ್, ಗಿರೀಶ್ # ಚಿಕ್ಕೋಡಿ-ರವಿ # ಮಾಗಡಿ-ಬೆಸ್ಕಾಂ ನೌಕರರ ನವೀನ್​ಕುಮಾರ್ # ರಾಯಚೂರು- ನಾಗರಾಜು # ಮಂಡ್ಯ-ರಾಜು # ಅರಸಿಕೆರೆ- ರಾಘವೇಂದ್ರ # ಬೆಳಗಾವಿ-ನಾಗರಾಜು.

Stay connected

278,746FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...