ವಿಜಯಪುರ, ಡಾ. ಸಂಗಮೇಶ ಮೇತ್ರಿ, ಪೂರ್ವಭಾವಿ ಸಭೆ, ಕಂದಗಲ್ಲ ಹಣಮಂತರಾಯ ರಂಗಮಂದಿರ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಸರ್ವಾಧ್ಯಕ್ಷರ ಆಯ್ಕೆಗೆ ಮುಕ್ತ ಚರ್ಚೆ,
ವಿಜಯಪುರ: ನಗರದ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ಫೆ.24 ಮತ್ತು 25ರಂದು ಹಮ್ಮಿಕೊಂಡಿರುವ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆಗೆ ಮುಕ್ತ ಚರ್ಚೆಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಡಾ. ಸಂಗಮೇಶ ಮೇತ್ರಿ ತಿಳಿಸಿದ್ದಾರೆ.
ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಲಾಂಛನವನ್ನು ಅಂತಿಮಗೊಳಿಸಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರನ್ನು ಜಿಲ್ಲೆಯ ಹಿರಿಯ ಸಾಹಿತಿಗಳು ಹಾಗೂ ಜಿಲ್ಲಾ ಕಾರ್ಯಕಾರಣಿ ಸದಸ್ಯರು ಮುಕ್ತವಾಗಿ ಚರ್ಚಿಸಿ ಆಯ್ಕೆ ಮಾಡಲಾಗುವದು. ಈಗಾಗಲೇ ಐದು ಹೆಸರುಗಳು ಅಂತಿಮ ಹಂತದಲ್ಲಿವೆ. ಮುಂದಿನ ಸಭೆಯಲ್ಲಿ ಸರ್ವರ ಸಲಹೆ ಹಾಗೂ ಮಾರ್ಗದರ್ಶನ ಪಡೆದು ಆಯ್ಕೆ ಮಾಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಪಾರದರ್ಶಕವಾಗಿ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನದ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡುತ್ತ ಬಂದಿರುವುದು ಹೆಮ್ಮೆಯ ಸಂಗತಿ. ಮೂರು ದಿನಗಳಲ್ಲಿ ಸರ್ವಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದ ಅವರು, ಹಲವು ತಾಲೂಕಿನ ಕಸಾಪ ಅಧ್ಯಕ್ಷರು ಇದುವರಿಗೆ ತಾಲೂಕು ಸಮ್ಮೇಳನ ಏರ್ಪಡಿಸದಿರುವುದು ನೋವಿನ ವಿಚಾರ ಎಂದರು.
ಜಿಲ್ಲಾ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಜಿಲ್ಲೆಯ ಸಾಹಿತಿಗಳು, ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು, ಶಿಕ್ಷಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಸಾಪ ಪದಾಧಿಕಾರಿಗಳಾದ ಅಭಿಷೇಕ ಚಕ್ರವರ್ತಿ, ಸುರೇಶ ಜತ್ತಿ, ಕಮಲಾ ಮುರಾಳ, ಸುಖದೇವಿ ಅಲಬಾಳಮಠ, ಜಯಶ್ರೀ ಹಿರೇಮಠ, ಸಿದ್ರಾಮಯ್ಯ ಲಕ್ಕುಂಡಿಮಠ, ರಾಜೇಸಾಬ ಶಿವನಗುತ್ತಿ, ಶಿಲ್ಪಾ ಭಸ್ಮೆ, ಅರ್ಜುನ ಶಿರೂರ, ಅಲ್ಲಮಪ್ರಭು, ಮಲ್ಲಿಕಾರ್ಜುನಮಠ, ವಿಜಯಲಕ್ಷ್ಮ್ಮಿ ಹಳಕಟ್ಟಿ, ರಾಜೇಶ್ವರಿ ಮೋಪಗಾರ, ಎಸ್.ಎಲ್. ಇಂಗಳೇಶ್ವರ, ಮಹಾದೇವಪ್ಪ ಮೋಪಗಾರ, ಡಾ. ಸುರೇಶ ಕಾಗಲಕರ, ಡಾ. ಎಂ.ಎಸ್. ಮಾಗಣಗೇರಿ, ಭಾಗೀರಥಿ ಸಿಂಧೆ ಸಭೆಯಲ್ಲಿ ಪಾಲ್ಗೊಂಡಿದ್ದರು.