ಅಕ್ಷರ ಜಾತ್ರೆ 2019 | ಕೊನೆ ದಿನ ಒಒಡಿ ನೀಡುವ ನೂತನ ಸಂಪ್ರದಾಯಕ್ಕೆ ಸಿಗಲಿಲ್ಲ ಮನ್ನಣೆ

ಧಾರವಾಡ: ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಮ್ಮೇಳನದ ಕೊನೆಯಲ್ಲಿ ಒಒಡಿ (On Official Duty) ನೀಡಲು ಆಯೋಜಕರು ನಿರ್ಧರಿಸಿದ್ದರಾದರೂ, ಸರ್ಕಾರಿ ನೌಕರರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದೇ ಒಒಡಿ ನೀಡಲು ನಿರ್ಧರಿಸಲಾಗಿದೆ.

ಸಮ್ಮೇಳದನ ವೇದಿಕೆ ಬಳಿ ಸಂಘಟಕರ ವಿರುದ್ಧ ಪ್ರತಿಭಟನೆ ನಡೆಸಿದ ಸರ್ಕಾರಿ ನೌಕರರು ಮೊದಲ ದಿನವೇ ನೋಂದಣಿ ಮಾಡಿಕೊಂಡು ಒಒಡಿ ಕೊಡುವಂತೆ ಪಟ್ಟು ಹಿಡಿದರು. ಅಲ್ಲದೆ, ಕೊಡುವುದಾದರೆ ಇಂದೇ ಒಒಡಿ ಕೊಡಿ ಎಂದು ಪಟ್ಟು ಹಿಡಿದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್​, ಪ್ರತಿಭಟನೆಗೆ ಮಣಿದು ಇಂದೇ ಒಒಡಿ ಕೊಡುವುದಾಗಿ ಭರವಸೆ ನೀಡಿದರು.

ಮೊದಲ ದಿನವೇ ಒಒಡಿ ಕೊಟ್ಟರೇ ಸಮ್ಮೇಳನಕ್ಕೆ ಹಾಜರಾತಿ ಕಡಿಮೆ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೊನೆಯ ದಿನ ಒಒಡಿ ಕೊಡಲು ಸಂಘಟಕರು ನಿರ್ಧರಿಸಿದ್ದರು. ಆದರೆ, ಈ ಪರಂಪರೆ ಆರಂಭಿಸಲು ಸರ್ಕಾರಿ ನೌಕರರು ಬಿಡಗೊಡಲಿಲ್ಲ.