ಬಿಜೆಪಿಯಲ್ಲಿ ತಾಕತ್ತು ಇರುವುದು ನಿತಿನ್​ ಗಡ್ಕರಿಯವರಿಗೆ ಮಾತ್ರ: ಹೊಗಳಿ ಟ್ವೀಟ್​ ಮಾಡಿದ ರಾಹುಲ್ ಗಾಂಧಿ

ನವದೆಹಲಿ: ಯಾರು ತಮ್ಮ ಮನೆಯ ಬಗ್ಗೆ ಕಾಳಜಿ ವಹಿಸುವುದಿಲ್ಲವೋ ಅವರಿಗೆ ದೇಶವನ್ನು ನಿಭಾಯಿಸುವುದು ಸಾಧ್ಯವಿಲ್ಲ ಎಂದಿದ್ದ ನಿತಿನ್​ ಗಡ್ಕರಿಯವರನ್ನು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಶ್ಲಾಘಿಸಿದ್ದಾರೆ.

ಗಡ್ಕರಿ ಜೀ ನಿಮಗೆ ಅಭಿನಂದನೆಗಳು. ಬಿಜೆಪಿಯಲ್ಲಿ ನಿಮಗೊಬ್ಬರಿಗೇ ಸತ್ಯ ಹೇಳುವ ತಾಕತ್ತು​ ಇರುವುದು. ದಯವಿಟ್ಟು ರಫೇಲ್​ ಹಗರಣ, ಅನಿಲ್​ ಅಂಬಾನಿ, ರೈತರು ಅನುಭವಿಸುತ್ತಿರುವ ಸಂಕಷ್ಟಗಳು ಹಾಗೂ ಸಂಸ್ಥೆಗಳು ನಶಿಸುತ್ತಿರುವ ಬಗ್ಗೆಯೂ ಪ್ರತಿಕ್ರಿಯೆ ನೀಡಿ ಎಂದು ಟ್ವೀಟ್​ ಮಾಡಿದ್ದಾರೆ.

ನಿತಿನ್​ ಗಡ್ಕರಿ ಶನಿವಾರ ನಾಗಪುರದಲ್ಲಿ ನಡೆದ ಎಬಿವಿಪಿ ಕಾರ್ಯಕ್ರಮದಲ್ಲಿ ಮಾತನಾಡಿ,”ಯಾರು ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸುವುದಿಲ್ಲವೋ ಅವರಿಗೆ ದೇಶವನ್ನು ಮುನ್ನಡೆಸುವುದು ಸಾಧ್ಯವಿಲ್ಲ” ಎಂಬ ಹೇಳಿಕೆ ನೀಡಿದ್ದರು. ನಿತಿನ್​ ಗಡ್ಕರಿ ಪದೇಪದೆ ಪ್ರಧಾನಿ ಮೋದಿ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಅವರು ಪ್ರಧಾನಿ ಹುದ್ದೆಗೇರಲು ಕಸರತ್ತು ಮಾಡುತ್ತಿದ್ದಾರೆ ಎಂಬಂಥ ಮಾತುಗಳು ಕಾಂಗ್ರೆಸ್​ ವಲಯದಿಂದ ಬಂದಿವೆ.