1 ಕಪ್​ ಟೀಗೆ ಕೇವಲ 5 ರೂ. ತಿಂಗಳಿಗೆ 2.5 ಲಕ್ಷ ಸಂಪಾದನೆ! ಸಿಂಪಲ್​ ಆಗಿದೆ ಈ ಟೀ ವ್ಯಾಪಾರಿಯ ಬಿಜಿನೆಸ್​ ಟ್ರಿಕ್ಸ್​​

Chaiwala, Business trick,

ಚಹಾವು ಭಾರತೀಯರ ನೆಚ್ಚಿನ ಪಾನೀಯಗಳಲ್ಲಿ ಒಂದಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಚಹಾ ಕುಡಿಯುವ ಮಂದಿ ನಮ್ಮ ದೇಶದಲ್ಲಿದ್ದಾರೆ. ಬಹುತೇಕರ ದಿನದ ಆರಂಭ ಟೀನಿಂದಲೇ ಶುರುವಾಗುತ್ತದೆ. ಒಂದು ಹೊತ್ತು ಊಟ ಬೇಕಾದರೂ ಬಿಡುತ್ತೇನೆ ಆದರೆ, ಟೀ ಬಿಡುವುದಿಲ್ಲ ಎಂದು ಹೇಳುವ ಜನರು ಕೂಡ ನಮ್ಮ ನಡುವೆ ಇದ್ದಾರೆ. ಅಷ್ಟೊಂದು ಜನಪ್ರಿಯವಾಗಿದೆ ಈ ಪಾನೀಯ.

ಕೆಲಸದ ಸಮಯದಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಚಹಾ ವಿರಾಮವನ್ನು ಯಾರು ತಾನೇ ಇಷ್ಟಪಡುವುದಿಲ್ಲ? ಅದರಲ್ಲೂ ಚಳಿಯಲ್ಲಿ ಟೀ ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು ಅಂತಾರೆ! ಆದರೆ, ನಾವೀಗ ಹೇಳ ಹೊರಟಿರುವುದು ಚಹಾದ ವಿಶೇಷತೆ ಬಗ್ಗೆ ಅಲ್ಲ, ಇದು ಚಹಾ ವ್ಯಾಪಾರಿಯೊಬ್ಬರ ಆದಾಯದ ಬಗ್ಗೆ.

ಟೀ ಅಂಗಡಿ ಎಲ್ಲಿ ಬೇಕಾದರೂ ಸಿಗುತ್ತದೆ. ಆದರೆ, ಎಲ್ಲರಿಗೂ ಯಶಸ್ಸು ಸಿಗುವುದಿಲ್ಲ. ಕೆಲವರು ತೆರೆದಷ್ಟೇ ವೇಗವಾಗಿ ಅಂಗಡಿಯನ್ನು ಮುಚ್ಚುತ್ತಾರೆ. ಆದರೆ, ಕೆಲವರು ತಮ್ಮ ವಿನೂತನ ಬಿಜಿನೆಸ್​ ಟ್ರಿಕ್ಸ್​ ಮೂಲಕ ಒಳ್ಳೆಯ ಯಶಸ್ಸು ಗಳಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಟೀ ವ್ಯಾಪಾರಿ ತನ್ನ ವಿಶಿಷ್ಟ ಚಿಂತನೆಯ ಮೂಲಕ ಅದ್ಧೂರಿ ಯಶಸ್ಸು ಸಾಧಿಸಿದ ಕತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಮಹಾರಾಷ್ಟ್ರದ ಮಹದೇವ್ ಮಾಲಿ ಎಂಬುವರು ಟೀ ವ್ಯಾಪಾರದ ಮೇಲೆ ಪೂರ್ಣ ಗಮನಹರಿಸಿದ್ದಾರೆ. ಇಡೀ ಕುಟುಂಬ ಟೀ ಅಂಗಡಿಯನ್ನೇ ನಂಬಿ ಬದುಕುತ್ತಿದೆ. ಅದಕ್ಕೆ ತಕ್ಕಂತೆಯೇ ಆದಾಯವೂ ಬರುತ್ತಿದೆ. ಮೂರನೇ ತರಗತಿವರೆಗೆ ಓದಿರುವ ಮಹದೇವ್ ಕಳೆದ 20 ವರ್ಷಗಳಿಂದ ಟೀ ಅಂಗಡಿ ನಡೆಸುತ್ತಿದ್ದಾರೆ.

ಮಹದೇವ್​ ಅವರು ಫೋನ್ ಮೂಲಕವೂ ಟೀ ಆರ್ಡರ್ ತೆಗೆದುಕೊಳ್ಳುವ ತಂತ್ರವನ್ನು ಬಳಸುತ್ತಿದ್ದಾರೆ. ಆರ್ಡರ್​ಗಳನ್ನು ತೆಗೆದುಕೊಳ್ಳುವುದಲ್ಲದೆ, ಅವುಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸಲಾಗುತ್ತದೆ. ಮಹಾದೇವ್ ಅವರು ತಮ್ಮ ಪ್ರದೇಶದಲ್ಲಿ ಸುಮಾರು 15,000 ಜನರಿಂದ ಆರ್ಡರ್ ತೆಗೆದುಕೊಳ್ಳುತ್ತಾರೆ.

ಮಹದೇವ್​ ಅವರು ದಿನಕ್ಕೆ 50 ರಿಂದ 60 ಲೀಟರ್ ಹಾಲನ್ನು ಚಹಾ ಮಾಡಲು ಬಳಸುತ್ತಾರೆ. ಮಹದೇವ್ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ನಿತ್ಯವೂ ಸಹಾಯ ಮಾಡುತ್ತಾರೆ. ಒಂದು ಕಪ್ ಟೀಗೆ ಐದು ರೂಪಾಯಿ ಮಾತ್ರ ತೆಗೆದುಕೊಳ್ಳುತ್ತಾರೆ. ಮಹಾದೇವ್ ಅವರು ಪ್ರತಿದಿನ 1,500 ರಿಂದ 2,000 ಕಪ್ ಚಹಾವನ್ನು ಮಾರಾಟ ಮಾಡುತ್ತಾರೆ ಮತ್ತು ದಿನಕ್ಕೆ ಸುಮಾರು 7,000 ರಿಂದ 10,000 ರೂಪಾಯಿಗಳನ್ನು ಗಳಿಸುತ್ತಾರೆ. ತಿಂಗಳ ಆದಾಯ ಲೆಕ್ಕ ಹಾಕಿದರೆ ಲಕ್ಷಗಟ್ಟಲೆ ಬರಲಿದೆ. ಅದೇನೇ ಇರಲಿ, ಮಹದೇವ್ ಅವರ ಈ ಐಡಿಯಾ ಹಿಟ್ ಆಗಿದ್ದು, ಉತ್ತಮ ಆದಾಯ ಗಳಿಸುತ್ತಿದ್ದಾರೆ. (ಏಜೆನ್ಸೀಸ್​)

RRR ಚಿತ್ರದ ಈ ಪುಟ್ಟ ಹುಡುಗಿ ನಿಮಗೆ ನೆನಪಿದೆಯಾ? ಈಗ ಎಷ್ಟು ಬದಲಾಗಿದ್ದಾರೆ ನೋಡಿ…

ನಾಳೆ ಇರುತ್ತೋ ಇಲ್ಲವೋ ಗೊತ್ತಿಲ್ಲ! ಅಪಘಾತದ ಬೆನ್ನಲ್ಲೇ ನಟಿ ರಶ್ಮಿಕಾ ಪೋಸ್ಟ್​ ವೈರಲ್​

Share This Article

ಒಂದು ಬಾರಿ ಇದನ್ನು ಕುಡಿದರೆ ಸಾಕು ನಿಮ್ಮ ಹೊಟ್ಟೆ ಫುಲ್​ ಕ್ಲೀನ್ ಆಗಿಬಿಡುತ್ತೆ! Stomach problems

ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಆ ನೋವು ( Stomach problems ) ಅಥವಾ ಕಿರಿಕಿರಿ…

Health Tips : ಸಕ್ಕರೆ ಕಾಯಿಲೆಯಿಂದ ಬಳಲುತ್ತೀದ್ದೀರಾ? ಬೆಳ್ಳಂಬೆಳಗ್ಗೆ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ ಸಾಕು

ಬೆಂಗಳೂರು: ಕರಿಬೇವು ಕೇವಲ ಬೆಳಗಿನ ತಿಂಡಿಗೆ ರುಚಿ ಕೊಡಲು ಒಗ್ಗರಣೆಗೆ ಮಾತ್ರ ಮೀಸಲಾಗಿಲ್ಲ. ಕರಿಬೇವಿನ ಎಲೆಗಳು…

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…