ಬಿಜೆಪಿಯಿಂದ ಮಾತ್ರ ರಾಷ್ಟ್ರದ ರಕ್ಷಣೆ ಸಾಧ್ಯ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ

ದಾವಣಗೆರೆ: ಕಲಬೆರಕೆ ಮಹಾಘಟ ಬಂಧನ್‌ನಿಂದ ಪ್ರಧಾನಿ ಅಭ್ಯರ್ಥಿ ಯಾರೆಂಬುದೇ ಸ್ಪಷ್ಟವಾಗಿಲ್ಲ. ಇಂತವರಿಂದ ದೇಶ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಅಮಿತ್ ಷಾ ಹೇಳಿದರು.

ಹೊನ್ನಾಳಿಯ ಪ್ರಚಾರ ಸಭೆಯಲ್ಲಿ ಮಾತನಾಡಿ, ಸೋನಿಯಾ ಮತ್ತು ರಾಹುಲ್ ಗಾಂಧಿಯಿಂದ ಮುಖ್ಯಮಂತ್ರಿಯಾಗಿದ್ದೇನೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಆದರೆ ಜನರು ಆಯ್ಕೆ ಮಾಡಿದ್ದನ್ನು ಮರೆತು ಮತದಾರಿಗೆ ಅನ್ಯಾಯ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಅಭಿವೃದ್ಧಿ ಬೇಕಾಗಿಲ್ಲ. ಕರ್ನಾಟಕವನ್ನು ಭ್ರಷ್ಟಾಚಾರದ ಎಟಿಎಂ ಮಾಡಿಕೊಂಡಿದ್ದಾರೆ. ಭಯೋತ್ಪಾದಕರಿಗೆ ದಿಟ್ಟ ಉತ್ತರ ನೀಡಿ ದೇಶವನ್ನು ರಕ್ಷಿಸಿದ್ದು ಪ್ರಧಾನಿ ಮೋದಿ. ಪಾಕಿಸ್ತಾನದ ಬಗ್ಗೆ ಕಾಂಗ್ರೆಸ್ ಮೃದು ಧೋರಣೆ ಅನುಸರಿಸುತ್ತಿದೆ. ಆದರೆ ನಮ್ಮ ಮೇಲೆ ಪಾಕ್ ಇಟ್ಟಿಗೆ ಎಸೆದರೆ ಕಲ್ಲೇಟಿನ ಉತ್ತರ ನೀಡುತ್ತೇವೆ. ಆ ಕಡೆಯಿಂದ ಗುಂಡು ಬಂದರೆ ಬೆಂಕಿ ಚೆಂಡು ಕಳಿಸುತ್ತೇವೆ ಎಂದು ಷಾ ಗುಡುಗಿದರು.

ಉಮರ್ ಅಬ್ದುಲ್ಲ ಕಾಶ್ಮೀರ ಕ್ಕೆ ಬೇರೆ ಪ್ರಧಾನ ಮಂತ್ರಿ ಬೇಕೆಂದು ಹೇಳುತ್ತಾರೆ. ಆದರೆ ಒಂದೇ ದೇಶಕ್ಕೆ ಇಬ್ಬರು ಪ್ರಧಾನ ಮಂತ್ರಿಗಳು ಬೇಕೇ? ಕಾಶ್ಮೀರ ಎಂದಿಗೂ ಭಾರತದ ಅವಿಭಾಜ್ಯ ಅಂಗ ಎಂದರು.

ಭಾಷಣದುದ್ದಕ್ಕೂ ರಾಹುಲ್ ಗಾಂಧಿಯನ್ನು ರಾಹುಲ್ ಬಾಬಾ ಎಂದು ಅಮಿತ್ ಷಾ ಕರೆದರು.