ಪುಲ್ವಾಮ ಉಗ್ರ ದಾಳಿ: ಕೇವಲ ಆವೇಶದ ಭಾಷಣ ಮಾಡಿದರೆ ಸಮಸ್ಯೆ ಬಗೆಹರಿಯಲ್ಲ

ಹಾಸನ: ಪುಲ್ವಾಮದಲ್ಲಿ ಉಗ್ರರ ದಾಳಿಗೆ ಇಡೀ ದೇಶವೇ ಪಕ್ಷಬೇಧ ಮರೆತು ಘಟನೆಯನ್ನು ಖಂಡಿಸುತ್ತಿದ್ದರೆ ಇತ್ತ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಅವರು ಕೇವಲ ಆವೇಶದ ಭಾಷಣ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನ ಭಯೋತ್ಪಾದಕ ದೇಶ ಎಂದು ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೇವಲ ವೇದಿಕೆ ಮೇಲೆ ಆವೇಶದ ಭಾಷಣ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಎಚ್‌.ಡಿ. ದೇವೇಗೌಡ ಅವರು ಪ್ರಧಾನ ಮಂತ್ರಿ ಆಗಿದ್ದಾಗ ರಕ್ತದೋಕುಳಿ ಏಕೆ ಹರಿಯಲಿಲ್ಲ? ಆಗಿದ್ದ ಅನ್ಯೋನ್ಯತೆ ಈಗ ಯಾಕಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ಎಸ್‌ಐಟಿಯಲ್ಲಿ ಆಡಿಯೋ ಪ್ರಕರಣ ನಿಧಾನಗತಿ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿ, ಆಡಿಯೋ ವಿಚಾರ ಇಟ್ಟುಕೊಂಡು ವಿರೋಧಿಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವ ಜಾಯಮಾನ ನನ್ನದಲ್ಲ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಜೆಡಿಎಸ್ ನಡುವೆ ಹೊಂದಾಣಿಕೆ ವಿಚಾರವನ್ನು ರಾಷ್ಟ ನಾಯಕರು ತೀರ್ಮಾನಿಸುತ್ತಾರೆ. ಹಾಸನದಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಅಂತಿಮವಾಗಿ ಜನ ತೀರ್ಮಾನಿಸುತ್ತಾರೆ. ಅದನ್ನು ಹೇಳಲು ಇವರಿಗೆ ಅಧಿಕಾರ ಇಲ್ಲ ಎಂದರು.

ಹಾಸನದಲ್ಲಿ ರೈತರ ಸಾಲ ಋಣಮುಕ್ತ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಚಿವರಾದ ಎಚ್.ಡಿ. ರೇವಣ್ಣ, ಬಂಡೆಪ್ಪ ಕಾಷೆಂಪುರ, ಜಿ.ಟಿ. ದೇವೇಗೌಡ, ಸಿಎಸ್ ಪುಟ್ಟರಾಜು, ಸಾರಾ ಮಹೇಶ್ ಭಾಗಿಯಾಗಿದ್ದರು. (ದಿಗ್ವಿಜಯ ನ್ಯೂಸ್)

2 Replies to “ಪುಲ್ವಾಮ ಉಗ್ರ ದಾಳಿ: ಕೇವಲ ಆವೇಶದ ಭಾಷಣ ಮಾಡಿದರೆ ಸಮಸ್ಯೆ ಬಗೆಹರಿಯಲ್ಲ”

  1. ರೈತರ ಸಾಲ ಮನ್ನಾ :ಕೇವಲ ಆವೇಶದ ಭಾಷಣ ಮಾಡಿದರೆ ರೈತರ ಸಮಸ್ಯೆ ಬಗೆಹರಿಯಲ್ಲ…..
    ಮೊದ್ಲು ಇದನ್ನ ನೋಡು ಕುಮಾರಣ್ಣ ….😀

Comments are closed.