ಈ ಹಿಂದೆ ಕರೊನಾವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿ, ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊಗಳಿಸಿಕೊಂಡಿದ್ದ ಕೇರಳದಲ್ಲಿ ಇದೀಗ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಕರೊನಾ ನಿಯಂತ್ರಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸುತ್ತಿದೆ.
ಲಾಕ್ಡೌನ್ ಮಾರ್ಗಸೂಚಿಯಲ್ಲಿ ಇಂದು ಕೆಲವು ಬದಲಾವಣೆಗಳನ್ನು ಕೇರಳ ಸರ್ಕಾರ ಘೋಷಿಸಿದೆ. ಇನ್ನು ಮುಂದೆ ರಾಜ್ಯದಲ್ಲಿ ಮದುವೆ ಸಮಾರಂಭದಲ್ಲಾಗಲಿ…ಅಂತ್ಯಕ್ರಿಯೆಯಲ್ಲಾಗಲಿ 20 ಜನರು ಮಾತ್ರ ಭಾಗವಹಿಸಲು ಅವಕಾಶ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಅದಕ್ಕಿಂತ ಹೆಚ್ಚಿನ ಜನರು ಪಾಲ್ಗೊಂಡರೆ ಪ್ರಕರಣ ದಾಖಲಾಗುತ್ತದೆ. ಈ ಮೊದಲು 50 ಜನರಿಗೆ ಭಾಗವಹಿಸಲು ಅವಕಾಶ ಇಡಲಾಗಿತ್ತು. ಆದರೆ ಕರೊನಾ ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾಗಿ ಸರ್ಕಾರ ತಿಳಿಸಿದೆ. ಇದನ್ನೂ ಓದಿ: ರಾಮಮಂದಿರ ನಿರ್ಮಾಣವಾದ ತಕ್ಷಣ ಕರೊನಾ ನಾಶವಾಗುತ್ತದೆ ಎಂದ ಬಿಜೆಪಿ ಎಂಪಿ
ಕೋಳಿಕ್ಕೋಡ್ ಮತ್ತು ವಯಾನಾಡು ಜಿಲ್ಲೆಗಳಲ್ಲಿ ಈ ಹಿಂದಿನ ಲಾಕ್ಡೌನ್ ನಿಯಮಗಳನ್ನು ಮೀರಿ ಮದುವೆ ಮಾಡಲಾಗಿತ್ತು. ಅಲ್ಲದೆ ಅಂತ್ಯಕ್ರಿಯೆಯೊಂದರಲ್ಲೂ 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಇದರಿಂದಾಗಿ 70ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿತ್ತು. ಇವೆರಡೆ ಪ್ರದೇಶಗಳಲ್ಲದೆ ಇನ್ನೂ ಕೆಲವು ಕಡೆ ನಿಯಮಗಳ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ, ಲಾಕ್ಡೌನ್ನ್ನು ಇನ್ನಷ್ಟು ಬಿಗಿಗೊಳಿಸಲು ನಿರ್ಧರಿಸಿದ್ದಾಗಿ ಕೇರಳ ಸರ್ಕಾರ ಹೇಳಿದೆ.
ಕೇರಳದಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಕರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕಳೆದ 24 ಗಂಟೆಯಲ್ಲಿ 1,167 ಮಂದಿಯಲ್ಲಿ ಸೋಂಕು ದೃಢವಾಗಿದ್ದು, ಸೋಂಕಿತರ ಸಂಖ್ಯೆ 20,896ಕ್ಕೆ ಏರಿದೆ. (ಏಜೆನ್ಸೀಸ್)
ದೇಶದಲ್ಲಿ 15 ಲಕ್ಷದ ಗಡಿದಾಟಿದ ಕರೊನಾ ಸೋಂಕಿತರ ಸಂಖ್ಯೆ; ಚೇತರಿಕೆ ಪ್ರಮಾಣದಲ್ಲಿ ಏರಿಕೆ