24.9 C
Bangalore
Wednesday, December 11, 2019

ಪಬ್ಲಿಕ್ ಸೆಕ್ಟರ್ ನ ಗ್ರೂಪ್​ ಬಿ, ಸಿ ನೇಮಕಾತಿಗೆ ಒಂದೇ ಸಿಇಟಿ-ಒಂದೇ ಏಜೆನ್ಸಿ : ಕೇಂದ್ರದಿಂದ ಮಹತ್ವದ ಪ್ರಸ್ತಾವನೆ

Latest News

ಮೈಸೂರಿನ ಬನುಮಯ್ಯ ಸಂಸ್ಥೆಯ ಶತಮಾನೋತ್ಸವಕ್ಕೆ ಚಾಲನೆ

ಮೈಸೂರು: ಧರ್ಮಪ್ರಕಾಶ ಡಿ.ಬನುಮಯ್ಯ ವಿದ್ಯಾಸಂಸ್ಥೆ ಶತಮಾನೋತ್ಸವ ಸಮಾರಂಭವನ್ನು ಶಾಸಕ ಎಸ್.ಎ.ರಾಮದಾಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಂತವೀರ...

ಮೊದಲ ಪತ್ನಿ, ಮೂವರು ಮಕ್ಕಳನ್ನು ಮನೆಯಿಂದ ಹೊರದಬ್ಬಿದ ಪತಿ: ಚಳಿಯಲ್ಲೇ ಇಡೀ ರಾತ್ರಿ ಕಳೆದ ಪತ್ನಿ, ಮಕ್ಕಳು

ಬೆಳಗಾವಿ: ಮೊದಲ ಪತ್ನಿ ಹಾಗೂ ಮೂವರು ಮಕ್ಕಳನ್ನು ವ್ಯಕ್ತಿಯೊಬ್ಬ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ಬೆಳಗಾವಿಯ ವೀರಭದ್ರ ನಗರದಲ್ಲಿ ನಡೆದಿದೆ. ರಾಜಾಸಾಬ್ ಕೊಲ್ಲಾಪುರೆ, ಮೊದಲ...

ಚಿತ್ರದುರ್ಗ: ಆರ್ ಒಗಳ ನಿರ್ವಣೆ ಇನ್ನು ಮುಂದೆ ಇಲಾಖೆ ಹೊಣೆ

ಚಿತ್ರದುರ್ಗ: ಶುದ್ಧ ಕುಡಿವ ನೀರು ಘಟಕಗಳ ಹೊಣೆ ಇನ್ನು ಮುಂದೆ ಕುಡಿವ ನೀರು ‌ಮತ್ತು ನೈರ್ಮಲ್ಯ ಇಲಾಖೆಯದ್ದಾಗಿದೆ ಎಂದು ಜಿಪಂ ಸಿಇಒ ಸಿ.ಸತ್ಯಭಾಮ ಹೇಳಿದರು. ಜಿಪಂ ಮಾಸಿಕ...

ಪೌರತ್ವ ತಿದ್ದುಪಡಿ ಮಸೂದೆ ದೇಶದ ಈಶಾನ್ಯ ಭಾಗದ ಜನರ ಮೇಲಿನ ಕ್ರಿಮಿನಲ್​ ದಾಳಿ: ರಾಹುಲ್​ ಗಾಂಧಿ ಟೀಕೆ

ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆ ಹುಟ್ಟು ಹಾಕಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಟೀಕಿಸಿದ್ದು, ದೇಶದ...

ಹುಣಸೂರು ಚುನಾವಣೆಯಲ್ಲಿ ತಟಸ್ಥನಾಗಿರುತ್ತೇನೆ ಎಂದು ಮೊದಲೇ ಘೋಷಿಸಿದ್ದೆ : ಶಾಸಕ ಜಿ.ಟಿ.ದೇವೇಗೌಡ

ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್​.ವಿಶ್ವನಾಥ್​ ಅವರನ್ನು ಬೆಂಬಲಿಸುತ್ತೇನೆ ಎಂದು ನಾನು ಎಲ್ಲಿಯೂ ಹೇಳಿರಲಿಲ್ಲ ಎಂದು ಶಾಸಕ...

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರವು, ಪಬ್ಲಿಕ್ ಸೆಕ್ಟರ್​ನ ಎಲ್ಲ ಸಂಸ್ಥೆಗಳ ಗ್ರೂಪ್​ ಬಿ ಮತ್ತು ಸಿ ವೃಂದದ ನೇಮಕಾತಿಗೆ ಒಂದೇ ಪರೀಕ್ಷೆ – ಕಾಮನ್ ಎಂಟ್ರನ್ಸ್ ಟೆಸ್ಟ್​ (ಸಿಇಟಿ) ನಡೆಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಈ ಪರೀಕ್ಷೆಯನ್ನು ಒಂದೇ ಸಂಸ್ಥೆ ನಡೆಸಲಿದೆ ಎಂಬ ಅಂಶವೂ ಅದರಲ್ಲಿದೆ.

ಪ್ರಸ್ತಾವನೆಯಲ್ಲಿರುವಂತೆ, ಹೊಸ ಸಂಸ್ಥೆಯು ಸಿಇಟಿ ನಡೆಸಿ, ಗ್ರೂಪ್ ಬಿಯ ನಾನ್ ಗಜೆಟೆಡ್ ಪೋಸ್ಟ್​ ಮತ್ತು ಕೆಲವು ನಿರ್ದಿಷ್ಟ ಬಿ ದರ್ಜೆಯ ಗಜೆಟೆಡ್ ಪೋಸ್ಟ್, ಸರ್ಕಾರ ಮತ್ತು ಸರ್ಕಾರದ ಇತರೆ ಸಂಸ್ಥೆಗಳ ಗ್ರೂಪ್ ಸಿ ಹುದ್ದೆಗಳಿಗೆ ಸರಿಸಮನಾದ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳನ್ನು ಶಾರ್ಟ್​ ಲಿಸ್ಟ್ ಮಾಡಿ ನೇಮಕ ಪ್ರಕ್ರಿಯೆ ನಡೆಸಲಿದೆ. ಈ ಸಂಸ್ಥೆಯು ಆನ್​ಲೈನ್ ಮೂಲಕ ಸಿಇಟಿಯನ್ನು ನಡೆಸಲಿದೆ ಎಂದು ಸಿಬ್ಬಂದಿ ಸಚಿವಾಲಯ ತಿಳಿಸಿದೆ. ಈ ಪ್ರಸ್ತಾವನೆ ಸಂಬಂಧ ಎಲ್ಲ ಸಚಿವಾಲಯಗಳು, ಇಲಾಖೆಗಳು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ, ಸಾರ್ವಜನಿಕ ಸಂಸ್ಥೆಗಳ ಪ್ರತಿಕ್ರಿಯೆಯನ್ನು ಸಿಬ್ಬಂದಿ ಸಚಿವಾಲಯ ಕೋರಿದೆ.

ಒಂದೇ ಸಿಇಟಿ, ಒಂದೇ ಏಜೆನ್ಸಿ: ಅಭ್ಯರ್ಥಿಗಳ ಆಯ್ಕೆಗಾಗಿ ಜಿಲ್ಲೆಗೊಂದು ಪರೀಕ್ಷಾ ಕೇಂದ್ರ ಇರಲಿದೆ. ಅಲ್ಲದೆ ಅಭ್ಯರ್ಥಿಗಳ ನೋಂದಣಿಗೆ ಏಕಗವಾಕ್ಷಿ ವ್ಯವಸ್ಥೆ ಇರಲಿದ್ದು, ಒಂದೇ ಅಂತರ್ಜಾಲ ತಾಣ ಇರಲಿದೆ. ಉದ್ಯೋಗ ಸೃಜನೆ ಮತ್ತು ನೇಮಕ ಪ್ರಕ್ರಿಯೆ ತ್ವರಿತಗೊಳಿಸಲು ಈ ಹೊಸ ವ್ಯವಸ್ಥೆ ನೆರವಾಗಲಿದೆ.

ನಾನ್ ಟೆಕ್ನಿಕಲ್ ಪೋಸ್ಟ್​ಗಳಿಗೆ ಹೈಯರ್ ಸೆಕೆಂಡರಿ(12ನೇ ತರಗತಿ), ಮೆಟ್ರಿಕ್ಯುಲೇಟ್​(10ನೇ ತರಗತಿ) ಮತ್ತು ಪದವೀಧರ ಅಭ್ಯರ್ಥಿಗಳಿಗೆ ಪ್ರತ್ಯೇಕ ಸಿಇಟಿ ನಡೆಯಲಿದೆ. ಎಸ್​ಎಸ್​ಸಿ, ಆರ್​ಆರ್​ಬಿಗಳು, ಐಬಿಪಿಎಸ್ ನಡೆಸುವ ಪ್ರವೇಶ ಪರೀಕ್ಷೆಗೆ ಇದು ಪೂರಕವಾಗಿರುತ್ತದೆ.

ಇಲ್ಲಿ ಅಭ್ಯರ್ಥಿಗಳಿಗೆ ತಾವು ಗಳಿಸಿದ ಅಂಕವನ್ನು ಸುಧಾರಣೆ ಮಾಡಿಕೊಳ್ಳಲು ಎರಡು ಹೆಚ್ಚುವರಿ ಅವಕಾಶ ಸಿಗಲಿದೆ. ಈ ಅಂಕ ಫಲಿತಾಂಶ ಘೋಷಣೆ ಆದ ದಿನಾಂಕದಿಂದ ಮೂರು ವರ್ಷದ ಅವಧಿಗೆ ಸೀಮಿತವಾಗಿರುತ್ತದೆ. ಅಂತಿಮ ಆಯ್ಕೆ ವಿಶೇಷ ಪರೀಕ್ಷೆ ಮೂಲಕ ನಡೆಯಲಿದ್ದು, ಅವುಗಳನ್ನು ಆಯಾ ನೇಮಕ ಮಂಡಳಿಗಳೇ ಮಾಡುತ್ತವೆ.

ಪ್ರಯೋಜನ ಏನು?: ವಿವಿಧ ಇಲಾಖೆಗಳು, ಸರ್ಕಾರಿ ಸಂಸ್ಥೆಗಳು ನಡೆಸುವ ವಿವಿಧ ಪರೀಕ್ಷೆಗಳಿಗೆ ಹಾಜರಾಗುವುದು ತಪ್ಪುತ್ತದೆ. ಹಲವು ಸಲ ಇದಕ್ಕಾಗಿ ಸಿದ್ಧತೆ ನಡೆಸುವುದು ಕೂಡ ತಪ್ಪುತ್ತದೆ. ಅಲ್ಲದೆ, ಅಭ್ಯರ್ಥಿಗಳಿಗೆ ಹಲವು ಸಲ ಪರೀಕ್ಷಾ ಶುಲ್ಕ ಪಾವತಿಸುವುದು, ಪ್ರಯಾಣ ವೆಚ್ಚ, ವಸತಿ ವೆಚ್ಚ ಇತ್ಯಾದಿಗಳ ಉಳಿತಾಯವಾಗುತ್ತದೆ. ಇಂತಹ ಪರೀಕ್ಷೆಯಿಂದ ಗ್ರಾಮೀಣ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗ ಸೇರುವುದು ಸುಲಭವಾಗಲಿದೆ. ಪ್ರಸ್ತಾವಿತ ಹೊಸ ಸಂಸ್ಥೆಯು ಈಗಾಗಲೇ ಇರುವ ಸ್ಟಾಫ್ ಸೆಲೆಕ್ಷನ್ ಕಮಿಷನ್​(ಎಸ್​ಎಸ್​ಸಿ)ಗೆ ಹೊರತಾದುದು. ಎಸ್​ಎಸ್​ಸಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಮುಖ್ಯವಾಗಿ ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಗಮನಿಸುತ್ತದೆ.

ಕೇಂದ್ರ ಸರ್ಕಾರ ಕೈಗೊಂಡಿರುವ ಹೊಸ ಸುಧಾರಣಾ ಕ್ರಮಗಳಲ್ಲಿ ಇದೂ ಒಂದಾಗಿದ್ದು, ವೆಚ್ಚಕಡಿತ, ಸಮಯ ಉಳಿತಾಯ, ತ್ವರಿತ ನೇಮಕ ಪ್ರಕ್ರಿಯೆ ಸೇರಿ ಹಲವು ಸ್ತರದಲ್ಲಿ ಫಲಕೊಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಆಡಳಿತ ಸರಳೀಕರಣ ಮತ್ತು ಸುಗಮ ಜೀವನಕ್ಕೆ ಅನುಕೂಲ ಕಲ್ಪಿಸಲಾಗುತ್ತದೆ.

ಜಿತೇಂದ್ರ ಸಿಂಗ್, ಸಿಬ್ಬಂದಿ ಖಾತೆಯ ರಾಜ್ಯ ಸಚಿವ

ಪ್ರಸ್ತುತ ಸ್ಥಿತಿಗತಿ: ಸರ್ಕಾರದ 2018ರ ಮಾರ್ಚ್ 1ರ ದತ್ತಾಂಶ ಪ್ರಕಾರ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 6,83,823 ಹುದ್ದೆಗಳು ಖಾಲಿ ಇವೆ. ಈ ಪೈಕಿ 5,74,289 ಹುದ್ದೆಗಳು ಗ್ರೂಪ್ ಸಿ ಆಗಿದ್ದು, 89,638 ಹುದ್ದೆ ಗ್ರೂಪ್ ಬಿ, 19,896 ಹುದ್ದೆ ಗ್ರೂಪ್ ಎ ಯಲ್ಲಿ ಇವೆ.

ಪ್ರಸ್ತುತ, ಸರ್ಕಾರಿ ಉದ್ಯೋಗ ಬಯಸುವವರು ಒಂದೇ ಅರ್ಹತೆಯ ಬೇರೆ ಬೇರೆ ಹುದ್ದೆಗಳಿಗಾಗಿ ಹಲವು ಪ್ರತ್ಯೇಕ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ. ಇದರಲ್ಲಿ, ಟೈರ್ -1, ಟೈರ್ -2, ಟೈರ್-3, ಸ್ಕಿಲ್ ಟೆಸ್ಟ್ ಹೀಗೆ ಹಲವು ಟೆಸ್ಟ್​ಗಳನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಟೈರ್ -1 ಟೆಸ್ಟ್​ನಲ್ಲಿ ಆನ್​ಲೈನ್ ಬಹು ಆಯ್ಕೆ ಮಾದರಿಯ ಟೆಸ್ಟ್ ಇರುತ್ತದೆ. ಪ್ರತಿ ವರ್ಷ ಅಂದಾಜು 1.25 ಲಕ್ಷ ಹುದ್ದೆಗಳಿಗೆ 2.5 ಕೋಟಿ ಅಭ್ಯರ್ಥಿಗಳು ಇಂತಹ ನೇಮಕ ಪರೀಕ್ಷೆಗಳಿಗೆ ದೇಶಾದ್ಯಂತ ಹಾಜರಾಗುತ್ತಾರೆ. (ಏಜೆನ್ಸೀಸ್​)

Stay connected

278,741FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...