ಆನ್‌ಲೈನ್ ಮೊಬೈಲ್ ಗೇಮ್ ವಿರುದ್ಧ ಪ್ರತಿಭಟನೆ

ಬೆಳಗಾವಿ: ಆನ್‌ಲೈನ್ ಮೊಬೈಲ್ ಗೇಮ್ ರದ್ದುಪಡಿಸುವಂತೆ ಆಗ್ರಹಿಸಿ ಸಿದ್ದೇಶ್ವರಿ ಮಹಿಳಾ ಮಂಡಳ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.

ಕಳೆದ ತಿಂಗಳು ಕಾಕತಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನು ಮೊಬೈಲ್ ಗೇಮ್ ವಿರೋಧಿಸಿದ್ದಕ್ಕೆ ತಂದೆಯನ್ನು ಹತ್ಯೆ ಗೈದಿದ್ದನು. ಮೊಬೈಲ್ ಗೇಮ್‌ಗಳಿಂದ ಯುವ ಸಮುದಾಯ ದಾರಿ ತಪ್ಪುತ್ತಿದ್ದು, ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಮಾನಸಿಕ, ದೈಹಿಕವಾಗಿ ದುರ್ಬಲವಾಗುತ್ತಿದ್ದಾರೆ. ಇದರಿಂದ ಕಲಿಕೆ ಹಂತದಲ್ಲಿರುವ ವಿದ್ಯಾರ್ಥಿಗಳು ಶಾಲೆ ಕಾಲೇಜು ಮೊಟಗೊಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಗಳು, ಪೊಲೀಸ್ ಅಧಿಕಾರಿಗಳು ಆನ್‌ಲೈನ್ ಗೇಮಗಳನ್ನು ಸಂಪೂರ್ಣ ನಿಷೇಧಿಸಲು ಕ್ರಮ ವಹಿಸಬೇಕು. ಜತೆಗೆ ಆನ್‌ಲೈನ್‌ನಲ್ಲಿ ಗೇಮ್ ಆ್ಯಪ್‌ಗಳು ಸಿಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕು ಎಂದು ಮನವಿ ಮೂಲಕ ವಿನಂತಿಸಿದರು.

ಮಂಡಳ ಅಧ್ಯಕ್ಷೆ ಇಂದುಮತಿ ಪಾಟೀಲ, ಮೇಘಾ ಶಿಂಧೆ, ಪ್ರವೀಣ ಪಾಟೀಲ, ರಮೇಶ ಡಿ., ಅನಿತಾ ಕಾಸರಕರ್, ಐ.ಬಿ. ಪಾಟೀಲ, ಅಶ್ವಿನಿ ಪಾಟೀಲ, ಪೂರ್ಣಿಮಾ ಎಚ್. ಇನ್ನಿತರರು ಇದ್ದರು.

Leave a Reply

Your email address will not be published. Required fields are marked *