21.5 C
Bangalore
Wednesday, December 11, 2019

ರೋಗಿಗಳ ಜೀವಕ್ಕೆ ಕುತ್ತಾಗುವ ಆನ್​ಲೈನ್ ಕನ್ಸಲ್ಟೆನ್ಸಿ!

Latest News

ಒಡವೆ ಹರಾಜಿಗೆ ರೈತರ ಆಕ್ಷೇಪ

ಚಳ್ಳಕೆರೆ: ನಲವತ್ತು ರೈತರ ಒಡವೆಗಳ ಹರಾಜಿಗೆ ಮುಂದಾಗಿದ್ದ ತಾಲೂಕಿನ ಮೀರಸಾಬಿಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎದುರು ಬುಧವಾರ ರಾಜ್ಯ ರೈತ ಸಂಘದ ಕಾರ್ಯಕರ್ತರು...

16 ಗ್ರಾಮಗಳಲ್ಲಿ ಸ್ಮಶಾನ ಅಭಿವೃದ್ಧಿ ಅಭಿಯಾನ

ಮೈಸೂರು: ಮೈಸೂರು ತಾಲೂಕಿನಲ್ಲಿ ಒತ್ತುವರಿಯಾಗಿರುವ ಹಾಗೂ ಮೂಲ ಸೌಕರ್ಯವಿಲ್ಲದೆ ಪಾಳುಬಿದ್ದಿರುವ ಸ್ಮಶಾನಗಳನ್ನು ಅಭಿವೃದ್ಧಿಗೊಳಿಸಿ ಹದ್ದುಬಸ್ತಿನಲ್ಲಿಡುವ ಆಂದೋಲನಕ್ಕೆ ಜಯಪುರದಲ್ಲಿ ಬುಧವಾರ ಚಾಲನೆ ನೀಡಲಾಯಿತು. ತಾಲೂಕಿನ 16...

ಆಲೋಚನೆ ದಾರಿ ತಪ್ಪಿದರೆ ಅನಾರೋಗ್ಯ

ಹೊಸದುರ್ಗ: ಜನರ ಆಲೋಚನೆ ಹಾಗೂ ನಡವಳಿಕೆಗಳು ದಾರಿ ತಪ್ಪಿರುವ ಕಾರಣ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹದಗೆಡುತ್ತಿದೆ ಎಂದು ಕುಂಚಿಟಿಗ ಮಠದ ಶ್ರೀ...

ಮಕ್ಕಳಿಗೆ ಮೌಲ್ಯ ತಿಳಿಸಿಕೊಡುವಲ್ಲಿ ವಿಫಲ

ಮೈಸೂರು: ಶಿಕ್ಷಣ ಕೊಡಿಸುವ ಭರದಲ್ಲಿ ಮಕ್ಕಳಿಗೆ ಮೌಲ್ಯ ತಿಳಿಸಿಕೊಡುವಲ್ಲಿ ನಾವು ಸೋಲುತ್ತಿದ್ದೇವೆಯೇ ಎಂಬ ಭಾವನೆ ಮೂಡುತ್ತಿದೆ ಎಂದು ಶಾಸಕ ಎಸ್.ಎ.ರಾಮದಾಸ್ ವಿಷಾದಿಸಿದರು. ಧರ್ಮಪ್ರಕಾಶ ಡಿ.ಬನುಮಯ್ಯ...

ಸಂವಿಧಾನದ ಇತಿಹಾಸದಲ್ಲಿಂದು ಕರಾಳ ದಿನ: ಪೌರತ್ವ ಮಸೂದೆಗೆ ಸೋನಿಯಾ ಗಾಂಧಿ ವಿರೋಧ

ನವದೆಹಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿ ಕಾರಿದ್ದಾರೆ. ಇಂದು(ಬುಧವಾರ) ಭಾರತ...

| ಅಭಯ್ ಮನಗೂಳಿ ಬೆಂಗಳೂರು

ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವ ಬದಲು ಆನ್​ಲೈನ್ ವೈದ್ಯಕೀಯ ಸೇವೆ ಮೊರೆ ಹೋಗುತ್ತಿರುವಿರಾ? ಹಾಗಿದ್ದರೆ ಎಚ್ಚರ. ಸಮಯ ಹಾಗೂ ಹಣ ಉಳಿಸುವ ನಿಮ್ಮ ದೂರಾಲೋಚನೆ ನಿಮ್ಮ ಜೀವಕ್ಕೇ ಮುಳುವಾಗಬಹುದು!

ಆನ್​ಲೈನ್ ಸಮಾಲೋಚನೆಯಿಂದ ಅನುಕೂಲಕ್ಕಿಂತ ರೋಗಿಯ ಜೀವಕ್ಕೆ ಆಪತ್ತೇ ಹೆಚ್ಚೆಂದು ಕರ್ನಾಟಕ ಮೆಡಿಕಲ್ ಕೌನ್ಸಿಲ್ (ಕೆಎಂಸಿ) ಎಚ್ಚರಿಕೆ ಕೊಟ್ಟಿದೆ. ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ) ಮಾನದಂಡಗಳಿಗೆ ಒಳಪಟ್ಟು ಆನ್​ಲೈನ್ ಮೂಲಕ ಸೇವೆ ಒದಗಿಸಲು ಅವಕಾಶವಿದೆಯೇ ಎಂದು ಬೆಂಗಳೂರು ಚರ್ಮವೈದ್ಯರ ಸಂಘ (ಬಿಡಿಎಸ್) ಕೇಳಿದ ಮಾಹಿತಿಗೆ ಪ್ರತಿಕ್ರಿಯಿಸಿರುವ ಕೆಎಂಸಿ ಅದರಿಂದ ಉಂಟಾಗುವ ಅಪಾಯಗಳ ಸಮಗ್ರ ಮಾಹಿತಿಯನ್ನು ಬಿಚ್ಚಿಟ್ಟಿದೆ.

ರೋಗಿಯನ್ನು ದೈಹಿಕವಾಗಿ ಪರಾಮಶಿಸದ ಹೊರತು ಆತನ ರೋಗಗಳನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಆನ್​ಲೈನ್ ಮೂಲಕ ರೋಗವನ್ನು ತಪ್ಪಾಗಿ ಗ್ರಹಿಸಿದರೆ ಅಪಾಯದ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆನ್​ಲೈನ್ ವೈದ್ಯಕೀಯ ಚಿಕಿತ್ಸೆ ಸೂಕ್ತವಲ್ಲ ಎಂಬುದು ಕೆಎಂಸಿ ನಿಲುವು.

ಕಾನೂನಲ್ಲಿ ಅವಕಾಶ ಇಲ್ಲ: ಆನ್​ಲೈನ್ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಕಾನೂನು ಅನುಮತಿ ನೀಡಿಲ್ಲ. ಕೆಲ ಐಟಿ ಕಂಪನಿಗಳು ಎಂಸಿಐ ಮಾನದಂಡ ಗಮನಿಸದೆ ತಾವು ಲಾಭ ಮಾಡಿಕೊಳ್ಳಲು ವೈದ್ಯರಿಗೆ ಆನ್​ಲೈನ್ ವೇದಿಕೆ ಒದಗಿಸುತ್ತಿವೆ. ವೈದ್ಯರು ಈ ಬಗ್ಗೆ ಎಚ್ಚರವಹಿಸಬೇಕು. ಇಲ್ಲದಿದ್ದರೆ ಸುಖಾಸುಮ್ಮನೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತಾಗುತ್ತದೆ ಎಂಬುದನ್ನು ಅರಿಯಬೇಕೆಂದು ಕರ್ನಾಟಕ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷ ಡಾ.ಬಿ. ವೀರಭದ್ರಪ್ಪ ವಿಜಯವಾಣಿಗೆ ತಿಳಿಸಿದ್ದಾರೆ. ಭಾರತೀಯ ವೈದ್ಯಕೀಯ ಮಂಡಳಿ ಮುಂದೆ ಆನ್​ಲೈನ್ ವೈದ್ಯಕೀಯ ಸೇವೆ ಚರ್ಚೆಗೆ ಬಂದಾಗ ಪರಿಶೀಲಿಸಲಾಗುವುದು. ವಿದೇಶಗಳಲ್ಲಿ ಯಾವೆಲ್ಲ ಪದ್ಧತಿ ಅನುಸರಿಸಲಾಗುತ್ತಿದೆ ಎಂಬುದನ್ನು ನೋಡಬೇಕಿದೆ. ವೈದ್ಯರ ಹಿತ ಕಾಯುವುದರ ಜತೆಗೆ ರೋಗಿಗಳಿಗೂ ಭದ್ರತೆ ಒದಗಿಸುವುದು ಅವಶ್ಯಕ. ಆ ಎಲ್ಲ ಅಂಶಗಳನ್ನು ರ್ಚಚಿಸಿದ ನಂತರ ಆನ್​ಲೈನ್ ವ್ಯವಸ್ಥೆಗೆ ಲಭ್ಯವಿರುವ ಅವಕಾಶಗಳ ಬಗ್ಗೆ ಯೋಚಿಸಲಾಗುವುದು ಎಂದು ವೀರಭದ್ರಪ್ಪ ಹೇಳಿದರು.

ಆನ್​ಲೈನ್ ವೈದ್ಯಕೀಯ ಸೇವೆಯನ್ನು ವಿರೋಧಿಸುತ್ತೇವೆ. ಆರೋಗ್ಯಕ್ಕಾಗಿ ವೈದ್ಯರನ್ನು ಭೇಟಿ ಮಾಡುವುದಕ್ಕೂ ಸಮಯ ಇಲ್ಲ ಎಂದು ಹೇಳುವುದು ತಪು್ಪ. ರೋಗಿಯನ್ನು ಪ್ರತ್ಯಕ್ಷವಾಗಿ ಪರಿಶೀಲಿಸಿ ಚಿಕಿತ್ಸೆ ನೀಡಿದರೂ ವೈದ್ಯರ ಮೇಲೆ ಆರೋಪಗಳು ಬರುವುದಿದೆ. ಇನ್ನು, ಕಣ್ಣಿಗೆ ಕಾಣದ ವೈದ್ಯರನ್ನು ನಂಬುವುದು ಹೇಗೆ?

| ಡಾ. ಎಚ್.ಎನ್. ರವೀಂದ್ರ , ಅಧ್ಯಕ್ಷರು ಭಾರತೀಯ ವೈದ್ಯಕೀಯ ಸಂಘ(ಕರ್ನಾಟಕ)

ಅಪಾಯಗಳೇನು?

  • ಕಣ್ಣಿಗೆ ಕಾಣದೆ ವೈದ್ಯಕೀಯ ಸಲಹೆ ನೀಡುವವರು ನಕಲಿ ವೈದ್ಯರೂ ಆಗಿರಬಹುದು.
  • ಹಣದಾಸೆಗಾಗಿ ಯಾವುದೋ ರೋಗಕ್ಕೆ ಮತ್ಯಾವುದೋ ಸಲಹೆ ಕೊಡಬಹುದು.
  • ಜನರಲ್ಲಿ ಆತಂಕ ಸೃಷ್ಟಿಸಿ ಆನ್​ಲೈನ್​ನಲ್ಲಿ 2ನೇ ಸಲಹೆ ಪಡೆಯಲು ಸೂಚಿಸಬಹುದು.
  • ಸಣ್ಣಪುಟ್ಟ ಸಮಸ್ಯೆಯನ್ನೂ ದೊಡ್ಡ ರೋಗವೆಂದು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ
  • ಒಂದು ವೇಳೆ ಅನಾಹುತವಾದರೆ ಯಾರನ್ನೂ ಹೊಣೆ ಮಾಡಲು ಅವಕಾಶವಿರುವುದಿಲ್ಲ.

ಗೂಗಲ್ ಮಾಹಿತಿ ಬೇಡ

ಯಾವುದೇ ರೋಗಕ್ಕೆ ಗೂಗಲ್ ಮೂಲಕ ಮಾಹಿತಿ ಪಡೆಯುವುದು ಅಪಾಯಕರ. ಕೆಲವು ವೆಬ್​ಸೈಟ್​ಗಳು, ಫೇಕ್ ಐಡಿಗಳಿಂದ ಸುಳ್ಳು ಮಾಹಿತಿ ಹರಿಬಿಡಲಾಗುತ್ತಿದ್ದು, ಸಣ್ಣಪುಟ್ಟ ಲಕ್ಷಣಗಳಿಗೂ ಅಪಾಯಕಾರಿ ರೋಗ ಎಂಬಂತೆ ಬಿಂಬಿಸಲಾಗಿರುತ್ತದೆ. ಕೆಲವು ವೆಬ್​ಸೈಟ್​ಗಳು ಹಿಟ್ ಪಡೆಯಲು ಇಂಥ ಮಾರ್ಗ ಹಿಡಿದರೆ ಇನ್ನೂ ಕೆಲವೆಡೆ ಅರ್ಧಂಬರ್ಧ ಮಾಹಿತಿ ನೀಡಲಾಗಿರುತ್ತದೆ. ಇಂತಹ ಮಾಹಿತಿಯಿಂದಲೇ ಹಲವರ ಬದುಕು ಹಾಳಾಗಿದೆ. ಲೈಂಗಿಕ ಸಮಸ್ಯೆಗಳಿಗೆ ಹೆಚ್ಚಾಗಿ ಗೂಗಲ್ ಮಾಡುವುದು ಒಂದೆಡೆಯಾದರೆ, ಗರ್ಭಿಣಿಯರು ತಮ್ಮಲ್ಲಿ ಕಂಡುಬರುವ ಬದಲಾವಣೆಗಳ ಬಗ್ಗೆ ಗೂಗಲ್​ನಲ್ಲಿ ಮಾಹಿತಿ ಪಡೆದು ಆತಂಕಕ್ಕೊಳಗಾಗುವ ಪ್ರಕರಣಗಳು ಹೆಚ್ಚುತ್ತಿವೆ.

Stay connected

278,748FansLike
587FollowersFollow
624,000SubscribersSubscribe

ವಿಡಿಯೋ ನ್ಯೂಸ್

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...