Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಈರುಳ್ಳಿ ಘಟಕ ಪರಿಶೀಲಿಸಿದ ಕೇಂದ್ರ ತಂಡ

Friday, 15.06.2018, 5:31 AM       No Comments

ಮಂಡ್ಯ: ಜಿಲ್ಲೆಯಲ್ಲಿ ಆರಂಭಿಸಿದ ರಾಜಾ ಈರುಳ್ಳಿ ಶೇಖರಣಾ ಘಟಕ ರಾಷ್ಟ್ರ ಪ್ರಶಸ್ತಿ ಪಡೆಯುವ ರೇಸ್‌ನಲ್ಲಿರುವ ಹಿನ್ನೆಲೆ ಗುರುವಾರ ರಾಷ್ಟ್ರೀಯ ನರೇಗಾ ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ.ಎಸ್.ಬಿ.ಅಗ್ನಿಹೋತ್ರಿ ಜಿಲ್ಲೆಗೆ ಭೇಟಿ ನೀಡಿ ಘಟಕವನ್ನು ಪರಿಶೀಲನೆ ನಡೆಸಿದರು.

ಜಿಪಂ, ಜಿಲ್ಲಾ ತೋಟಗಾರಿಕೆ ಇಲಾಖೆಯಿಂದ ನರೇಗಾ ಮತ್ತು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ 2016-17ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ರಾಜಾ ಈರುಳ್ಳಿ ಶೇಖರಣಾ ಘಟಕವನ್ನು ಆರಂಭಿಸಲಾಗಿತ್ತು. ಇದು ಮಾದರಿ ಕಾರ್ಯಕ್ರಮ ಎಂದು ಗುರುತಿಸಿಕೊಂಡಿತ್ತು.

ಪ್ರತಿ ವರ್ಷ ನರೇಗಾ ಯೋಜನೆಯಡಿ ವಿಶೇಷ ಕಾರ್ಯಕ್ರಮ ರೂಪಿಸಿದ ಜಿಲ್ಲೆಗೆ ರಾಷ್ಟ್ರ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಬಾರಿ ಪ್ರಶಸ್ತಿ ಪಡೆಯಲು ಆಯ್ಕೆಯಾದ ಜಿಲ್ಲೆಗಳ ಪೈಕಿ ಮಂಡ್ಯ ಕೂಡ ಸೇರಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಅಧಿಕಾರಿಗಳ ತಂಡ ರಾಜ್ಯದ ವಿವಿಧೆಡೆ ಪರಿಶೀಲನೆ ನಡೆಸುತ್ತಿದೆ.

ರೈತರಿಂದ ಘಟಕದ ಮಾಹಿತಿ: ಜಿಲ್ಲೆಗೆ ಆಗಮಿಸಿದ ಡಾ.ಎಸ್.ಬಿ.ಅಗ್ನಿಹೋತ್ರಿ ಅವರನ್ನು ಜಿಪಂ ಸಿಇಒ ಶರತ್ ನೇತೃತ್ವದ ತಂಡ ಸ್ವಾಗತಿಸಿತು. ನಂತರ ನಾಗಮಂಗಲ ತಾಲೂಕಿನ ಇಜ್ಜಲಘಟ್ಟ ಮತ್ತು ಚೊಟ್ಟ ಕ್ಯಾತನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಈರುಳ್ಳಿ ಶೇಖರಣಾ ಘಟಕಕ್ಕೆ ಭೇಟಿ ನೀಡಲಾಯಿತು. ಅಲ್ಲಿ ಅಗ್ನಿಹೋತ್ರಿ ಅವರು ರೈತರಿಂದ ಮಾಹಿತಿ ಪಡೆದುಕೊಂಡರು. ಘಟಕದಿಂದ ಆಗಿರುವ ಪ್ರಯೋಜನ, ಮೊದಲಿಗೂ ಮತ್ತು ಪ್ರಸ್ತುತ ಇರುವ ವ್ಯತ್ಯಾಸಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ನಂತರ ಜಿಪಂ ಅಧಿಕಾರಿಗಳಿಂದಲೂ ಮಾಹಿತಿ ಕಲೆ ಹಾಕಲಾಯಿತು. ಪ್ರಮುಖವಾಗಿ ಈರುಳ್ಳಿ ಬೆಳೆಯುತ್ತಿರುವ ರೈತರೆಷ್ಟು, ನರೇಗಾ ಮತ್ತು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಒಗ್ಗೂಡಿಸುವಿಕೆಯಿಂದ ಘಟಕ ಸ್ಥಾಪಿಸಲು ಕಾರಣವೇನು, ರೈತರಿಗೆ ಆಗಿರುವ ಅನುಕೂಲವೇನು, ಒಂದು ವೇಳೆ ಮುಂದಿನ ದಿನಗಳಲ್ಲಿ ರೈತರ ಸಂಖ್ಯೆ ಹೆಚ್ಚಾದರೆ ಏನು ಮಾಡಬಹುದು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡರು.

ಈ ವೇಳೆ ಜಿಪಂ ಉಪಕಾರ್ಯದರ್ಶಿ ಕೃಷ್ಣರಾಜು, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಎಸ್.ರಾಜು, ನಾಗಮಂಗಲ ತಾಪಂ ಇಒ ಶಿವರಾಜಯ್ಯ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಶಾಂತಾ ಇದ್ದರು.

ಮುಂದಿನ ವಾರ ಮತ್ತೊಂದು ತಂಡ: ಮೊದಲ ಹಂತವಾಗಿ ರಾಷ್ಟ್ರೀಯ ನರೇಗಾ ಪ್ರಶಸ್ತಿ ಸಮಿತಿ ಅಧ್ಯಕ್ಷರು ಜಿಲ್ಲೆಗೆ ಆಗಮಿಸಿ ಮಾಹಿತಿ ಕಲೆಹಾಕಿದ್ದಾರೆ. ಅದೇ ರೀತಿ ಎರಡನೇ ಹಂತದಲ್ಲಿ ಸಮಿತಿಯ ಸದಸ್ಯರ ತಂಡ ಮುಂದಿನ ವಾರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಲ್ಲದೆ, ಘಟಕಗಳ ಬಗ್ಗೆ ಇನ್ನಷ್ಟು ವಿಸ್ತಾರವಾದ ಮಾಹಿತಿ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ತಂಡ ಬರುವುದರೊಳಗೆ ಕೆಲ ಮಾಹಿತಿ ಸಿದ್ಧಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಈರುಳ್ಳಿ ಘಟಕದ ಸ್ಥಾಪನೆ, ಈಗ ಎಷ್ಟು ರೈತರು ಘಟಕಕ್ಕೆ ಅರ್ಜಿ ಸಲ್ಲಿಸಿದ್ದಾರೆ ಸೇರಿದಂತೆ ಇನ್ನು ಕೆಲವು ಮಾಹಿತಿಯನ್ನು ಅಂಕಿ ಅಂಶದಲ್ಲಿ ಸಿದ್ಧಪಡಿಸಿ ಅವರಿಗೆ ಸಲ್ಲಿಸಬೇಕಿದೆ.

Leave a Reply

Your email address will not be published. Required fields are marked *

Back To Top