ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಹೆಚ್ಚು ಈರುಳ್ಳಿ ಬೆಳೆಯುವ ಧಾರವಾಡ ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಆಗಮಿಸಿ ವೀಕ್ಷಣೆ ಮಾಡಿತು.
ಶಿರಗುಪ್ಪಿ ಗ್ರಾಮದ ಪ್ರಗತಿಪರ ರೈತ ಅಣ್ಣಿಗೇರಿ ಅವರು ಬೆಳೆದ ಈರುಳ್ಳಿ ಬೆಳೆ ವೀಣೆ ಮಾಡಲಾಯಿತು.
ಅಧ್ಯಯನ ತಂಡದ ಸದಸ್ಯರು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ರೈತರು ಈರುಳ್ಳಿ ಬೆಳೆಯುವ ಪ್ರದೇಶ ಕಡಿಮೆ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ ಈರುಳ್ಳಿಯ ಅಭಾವ ಸೃಷ್ಟಿಯಾಗುವ ಸಂಭವವಿದ್ದು, ಬೆಳೆಗಾರರನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ನಿರ್ಣಯ ತೆಗೆದುಕೊಳ್ಳಲಿದೆ. ಇದಕ್ಕಾಗಿ ರೈತರು, ಸ್ಥಳಿಯ ಜನಪ್ರತಿನಿಧಿಗಳಿಂದ ಅಭಿಪ್ರಾಯ ಪಡೆದು ಯೋಜನೆ ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಭಾರತ
ಸರ್ಕಾರದ ಕೃಷಿ ಹಾಗೂ ರೈತರ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಮನೋಜ ಕೆ. ಹೇಳಿದರು.
ಈ ಹಿನ್ನೆಲೆಯಲ್ಲಿ ಆ. 4ರಂದು ಬೆಳಗ್ಗೆ 10.30ಕ್ಕೆ ಹುಬ್ಬಳ್ಳಿ ಎಪಿಎಂಸಿಯಲ್ಲಿ ದಲ್ಲಾಳಿಗಳ ಹಾಗೂ ಖರೀದಿದಾರರ ಸಭೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಈರುಳ್ಳಿ ಬೆಳೆ ವೀಣೆ ಮಾಡುವ ಸಂದರ್ಭದಲ್ಲಿ ಈರುಳ್ಳಿಗೆ ಎಂಎಸ್ಪಿ ನಿಗದಿಪಡಿಸಬೇಕು, ಅವಶ್ಯವಿದ್ದಲ್ಲಿ ರ್ತು ಮಾಡಲು ಅವಕಾಶ ನೀಡಬೇಕೆಂದು ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಅಧಿಕಾರಿಗಳಿಗೆ ಮನವಿ ಮಾಡಿದರು.
ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕಾಶಿನಾಥ ಭದ್ರಣ್ಣವರ, ಹುಬ್ಬಳ್ಳಿ ತಹಶೀಲ್ದಾರ ಪ್ರಕಾಶ ನಾಶಿ, ಇನಸ್ಪೆಕ್ಟರ್ ಮುರಗೇಶ ಚನ್ನಣ್ಣವರ, ಸಹಾಯಕ ನಿರ್ದೇಶಕ ಉಮೇಶ ಪಾಟೀಲ, ರೈತರಾದ ಮಹಾಬಳೇಶ ಅಣ್ಣಿಗೇರಿ, ಪ್ರಕಾಶಗೌಡ ಹನಮರಡ್ಡಿ, ಶಿವಣ್ಣ ಹುಬ್ಬಳ್ಳಿ, ಡಾ. ತಾಜುದ್ದೀನ ಮುಲ್ಲಾನವರ, ಕಾಂತಪ್ಪ ಅಣ್ಣಿಗೇರಿ, ಅಣ್ಣಪ್ಪ ಕುಲಕಣಿರ್, ಪ್ರಕಾಶ ಹುಲಗೂರ, ಮುತ್ತಪ್ಪ ಕೊಳ್ಳಿ, ಸೆಯ್ಯದ ಬಾವಾಖಾನವರ, ಗೋಪಾಲ ಬಾನಗೊಂಡ, ರಾಮಪ್ಪ ನೆಲಗುಡ್ಡದ, ಸೋಮಣ್ಣ ಅಣ್ಣಿಗೇರಿ ಹಾಗೂ ಇತರರು ಉಪಸ್ಥಿತರಿದ್ದರು.