VIDEO| ಚಲಿಸುತ್ತಿದ್ದ ರೈಲಿನ ಕೆಳಗಿತ್ತು ಹಸುಗೂಸು: ಮೈ ಜುಮ್ಮೆನಿಸುತ್ತದೆ ಈ ವಿಡಿಯೋ!

ಮಥುರಾ: ಉತ್ತರಪ್ರದೇಶದ ಮಥುರಾದಲ್ಲಿ ಮೈ ಜುಮ್ಮೆನಿಸುವ ಘಟನೆಯೊಂದು ಮಂಗಳವಾರ ನಡೆದಿದೆ. ರೈಲು ಹಳಿಗಳ ನಡುವೆ ಮಗುವೊಂದು ಆಕಸ್ಮಿಕವಾಗಿ ಬಿದ್ದ ಮೇಲೆ ಹಳಿಯ ಮೇಲೆ ರೈಲು ಚಲಿಸಿದರೂ, ಮಗು ಸಣ್ಣ ತರಚು ಗಾಯವೂ ಇಲ್ಲದೇ ಪವಾಡ ಸದೃಶ್ಯವಾಗಿ ಪಾರಾಗಿದೆ. ರೈಲು ಮುಂದೆ ಹೋದ ನಂತರ ಮಗುವನ್ನು ಪ್ರಯಾಣಿಕರು ರಕ್ಷಿಸಿದ್ದಾರೆ. ಹಳಿಗಳ ಮೇಲೆ ರೈಲು ಹರಿದು ಹೋಗುತ್ತಿದ್ದರೂ, ಅಳದೇ ಇದ್ದ ಮಗು, ಜನ ಕೈಗೆತ್ತಿಕೊಂಡ ಮೇಲೆ ಅತ್ತದ್ದು ಮಾತ್ರ ಅಚ್ಚರಿಯುಂಟು ಮಾಡಿತು.