12 ಗಂಟೆಗೆ ಒಂದೇ ಟೋಲ್, ವಾಟ್ಸಾಪ್ ಸಂದೇಶ ಫೇಕ್

ಮಂಗಳೂರು: ಒಂದು ಟೋಲ್‌ಗೇಟ್‌ನಲ್ಲಿ ಒಮ್ಮೆ ಟೋಲ್ ಶುಲ್ಕ ಪಾವತಿಸಿ 12 ಗಂಟೆಯೊಳಗೆ ವಾಪಸ್ ಬರುವ ವಾಹನಗಳು ಮತ್ತೆ ಟೋಲ್ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ವಾಟ್ಸಾಪ್‌ನಲ್ಲಿ ಕಳೆದೆರಡು ದಿನಗಳಿಂದ ವ್ಯಾಪಕವಾಗಿ ಹರಿದಾಡುತ್ತಿದ್ದ ಸಂದೇಶಗಳು ಫೇಕ್. ಪ್ರಸ್ತುತ ವಿಷಯಕ್ಕೆ ಸಂಬಂಧಿಸಿ ಬಂದಿರುವ ಸಂದೇಶದಲ್ಲಿ ಸತ್ಯಾಂಶವಿಲ್ಲ. ಈ ಬಗ್ಗೆ ನಮಗೆ ಯಾವುದೇ ನಿರ್ದೇಶನಗಳಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಸಾಮ್ಸನ್ ವಿಜಯ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಒಂದು ಕಡೆ ಟೋಲ್ ಪಾವತಿಸಿ 10 ನಿಮಿಷದಲ್ಲಿ ವಾಪಸ್ ಬಂದರೂ ಮತ್ತೆ ಹಿಂತಿರುಗುವ ಪ್ರಯಾಣದ ಟೋಲ್ ಪಾವತಿ ಮಾಡಬೇಕಾಗುತ್ತದೆ. ಸುದ್ದಿ ಯಾವ ರೀತಿ ಹರಡಿದೆ ಎನ್ನುವುದು ನಮಗೆ ಗೊತ್ತಿಲ್ಲ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಇಂತಹ ಸಂದೇಶ ವೈರಲ್ ಆಗಿರುವುದು ಹೊಸ ವಿಷಯವಲ್ಲ. ವಿವಿಧ ವೆಬ್‌ಸೈಟ್‌ಗಳಲ್ಲಿ ದೇಶದ ವಿವಿಧೆಡೆಗಳಲ್ಲಿ ಇಂತಹ ಸುದ್ದಿ ಹಬ್ಬಿರುವುದು ಮತ್ತು ವೆಬ್‌ಸೈಟ್‌ಗಳಲ್ಲಿ ಭಾರಿ ಚರ್ಚೆಯಾಗಿದೆ.

ಟೋಲ್‌ಗೇಟ್‌ಗಳಲ್ಲಿ ಒಮ್ಮೆ ಶುಲ್ಕ ಪಾವತಿಸಿ 12 ಗಂಟೆ ಒಳಗೆ ವಾಪಸ್ ಬಂದರೆ ಮತ್ತೆ ಶುಲ್ಕ ಪಾವತಿ ಮಾಡಬೇಕಿಲ್ಲ ಎಂಬ ಸಾಮಾಜಿಕ ಜಾಲತಾಣದ ಮಾಹಿತಿ ಸತ್ಯಕ್ಕೆ ದೂರ. ನಿಯಮ ಪ್ರಕಾರ ಶುಲ್ಕ ಪಾವತಿಸಿ ಕೆಲ ನಿಮಿಷಗಳಲ್ಲಿ ವಾಪಸ್ ಬಂದರೂ ಹಣ ನೀಡಬೇಕು. ಆಗಮನ-ನಿರ್ಗಮನ ರಶೀದಿ ಪಡೆದಿದ್ದರೂ ಮಧ್ಯರಾತ್ರಿ 12 ಗಂಟೆ ಬಳಿಕ ಅದು ಅನೂರ್ಜಿತವಾಗುತ್ತದೆ.
– ರಮೇಶ್ ವರ್ಣೆಕರ್, ಉಡುಪಿ ಸಾರಿಗೆ ಅಧಿಕಾರಿ

Leave a Reply

Your email address will not be published. Required fields are marked *