ಮಂಗಳೂರು: ಕಳೆದ ಕೆಲವು ಸಮಯದಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಹಿಜಾಬ್ ವಿಚಾರದಲ್ಲಿ ಇಂದು ಮತ್ತೆ ಹೊಗೆಯಾಡುತ್ತಿರುವುದು ಕಂಡುಬಂದಿದೆ. ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುತ್ತಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ಟಿ.ಸಿ. ಪಡೆದಿದ್ದಾಳೆ.
ಮಂಗಳೂರಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ವಿದ್ಯಾರ್ಥಿನಿಯೊಬ್ಬಳು ತರಗತಿಯಲ್ಲಿ ಹಿಜಾಬ್ ಧರಿಸಿ ಕೂರಲು ಅವಕಾಶವಿಲ್ಲ ಎಂಬುದನ್ನು ವಿರೋಧಿಸಿ ಟಿ.ಸಿ. ಪಡೆದು ಬೇರೆಡೆ ಸೇರಲು ಮುಂದಾಗಿದ್ದಾಳೆ. ಟಿ.ಸಿ. ಪಡೆದು ಹಿಜಾಬ್ ಅವಕಾಶ ಇರುವ ಬೇರೆ ಕಾಲೇಜಿಗೆ ಸೇರಲು ಈಕೆ ನಿರ್ಧರಿಸಿದ್ದಾಳೆ.
ಟಿ.ಸಿ. ನೀಡುವಂತೆ ಕೋರಿ ಈ ವಿದ್ಯಾರ್ಥಿನಿ ನಿನ್ನೆ ಕಾಲೇಜಿಗೆ ಅರ್ಜಿ ಹಾಕಿದ್ದಳು. ಬೇರೆ ಕಾಲೇಜಿಗೆ ತೆರಳುವುದಿದ್ದರೆ ಟಿಸಿ ನೀಡಲು ವ್ಯವಸ್ಥೆ ಮಾಡುವುದಾಗಿ ಕಾಲೇಜು ಆಡಳಿತ ಮಂಡಳಿ ಹೇಳಿರುವುದರಿಂದ ಈಕೆ ಇಂದು ಅದನ್ನು ಪಡೆಯಲು ಕಾಲೇಜಿಗೆ ತೆರಳಿದ್ದಾಳೆ. ಮತ್ತೊಂದೆಡೆ ಹಿಜಾಬ್ ಧರಿಸಿ ತರಗತಿ ಹಾಜರಾಗಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿ 15 ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿದ್ದಾರೆ.
ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!