ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ಚಾಮರಾಜನಗರದ ಮಾದಪ್ಪ ಶಿವಣ್ಣ ಮಡಿವಾಳ ಶೆಟ್ಟಿ ಸಾವು

ಮುರುಡೇಶ್ವರ: ಮುರುಡೇಶ್ವರದ ಪ್ರವಾಸಕ್ಕೆ ಬಂದಿದ್ದ ಚಾಮರಾಜನಗರ ಜಿಲ್ಲೆಯ ಮಾದಪ್ಪ ಶಿವಣ್ಣ ಮಡಿವಾಳ ಶೆಟ್ಟಿ ಸಮುದ್ರದ ಭಾರಿ ಅಲೆಗೆ ಸಿಲುಕಿ ಮೃತಪಟ್ಟಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ಐವರನ್ನು ಲೈಫ್​ಗಾರ್ಡ್​ಗಳು ರಕ್ಷಿಸಿದ್ದಾರೆ.

ಶಿವಣ್ಣ ಮಡಿವಾಳ ಶೆಟ್ಟಿ ಜತೆ ಯೋಗೇಶ ಸುರೇಶ ನಾಯ್ಕ, ಸಿದ್ಧರಾಜು, ನಾಗರಾಜ ಶೆಟ್ಟಿ, ರವೀಶ್​ ಮತ್ತು ಲೋಕೇಶ್​ ಸಮುದ್ರದಲ್ಲಿ ಆಟವಾಡುತ್ತಿದ್ದರು. ಹಠಾತ್ತನೆ ಭಾರಿ ಅಲೆಯೊಂದು ಅಪ್ಪಳಿಸಿತು. ಇದರಿಂದಾಗಿ ಇವರೆಲ್ಲರೂ ಮುಳುಗಲಾರಂಭಿಸಿದರು. ಸ್ಥಳದಲ್ಲಿದ್ದ ಲೈಫ್​ಗಾರ್ಡ್​ಗಳಾದ ಜಯರಾಮ, ಹರಿಕಾಂತಾ, ಚಂದ್ರಶೇಖರ ದೇವಾಡಿಗ ಐವರನ್ನು ರಕ್ಷಿಸಿದರು. ಪ್ರವಾಸಿಗರ ಮಿತ್ರ ಮಂಜುನಾಥ್​ ಶೇಟ್​ ಇವರಿಗೆ ನೆರವಾದರು. ಆದರೆ, ಮಾದಪ್ಪ ಶಿವಣ್ಣ ಮಡಿವಾಳ ಶೆಟ್ಟಿ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಇವರೆಲ್ಲರೂ ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಯಿಂದ ಪ್ರವಾಸಕ್ಕೆ ಬಂದವರು ಎಂದು ಪೊಲೀಸರು ತಿಳಿಸಿದ್ದಾರೆ.