More

    ಒಂದು ದೇಶ ಒಂದು ಪಡಿತರ ಚೀಟಿ ಜೂನ್ 1ರಿಂದ ದೇಶಾದ್ಯಂತ ಜಾರಿ: ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್

    ಪಟನಾ: ಒಂದು ದೇಶ ಒಂದು ಪಡಿತರ ಚೀಟಿ ವ್ಯವಸ್ಥೆ ಜೂನ್ 1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

    ಅವರು ಪಟನಾದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಈ ವಿಷಯ ತಿಳಿಸಿದರು. ಒಂದು ದೇಶ ಒಂದು ಪಡಿತರ ಚೀಟಿ ವ್ಯವಸ್ಥೆ ಮೂಲಕ ಫಲಾನುಭವಿಗಳು ಒಂದು ಪಡಿತರ ಚೀಟಿ ಹೊಂದಿದ್ದರೆ ದೇಶದ ಯಾವುದೇ ಭಾಗದಲ್ಲೂ ಅದರ ಮೂಲಕ ಪಡಿತರ ಪಡೆಯಬಹುದಾಗಿದೆ ಎಂದರು.

    ಆರಂಭಿಕ ಹಂತದಲ್ಲಿ ಇದು ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ, ಕರ್ನಾಟಕ, ಕೇರಳ, ಗೋವಾ, ಮಧ್ಯಪ್ರದೇಶ, ತ್ರಿಪುರಾ, ಜಾರ್ಖಂಡ್ ಸೇರಿ 12 ರಾಜ್ಯಗಳಲ್ಲಿ ಅನುಷ್ಠಾನಗೊಳ್ಳಲಿದೆ. ಈ ಹಂತದಲ್ಲಿ ಈ ರಾಜ್ಯಗಳ ಫಲಾನುಭವಿಗಳು ಪಡಿತರ ಚೀಟಿಯೊಂದಿಗೆ ಉಲ್ಲೇಖಿಸಿದ 12 ರಾಜ್ಯಗಳಲ್ಲಿ ಎಲ್ಲಿ ಬೇಕಾದರೂ ಪಡಿತರ ಪಡೆಯಬಹುದಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts