18.1 C
Bangalore
Saturday, December 7, 2019

ಮಂಗಳೂರಿನಿಂದ ಬೆಂಗಳೂರಿಗೆ ಇನ್ನೊಂದು ರೈಲು: ವರ್ಷಾಂತ್ಯದೊಳಗೆ ಶುರುವಾಗುವ ನಿರೀಕ್ಷೆ

Latest News

ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕೃಷಿ ಮಾರಾಟ ಇಲಾಖೆ

ಚಿತ್ರದುರ್ಗ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ, ಮೆಕ್ಕೆಜೋಳ ಮತ್ತಿತರ ಬೆಳೆಗಳ ಖರೀದಿ ಕೇಂದ್ರ ತೆರೆಯಲು ಹಾಗೂ ಏಜೆನ್ಸಿ ನಿಗದಿಪಡಿಸಲು ಕೋರಿ ಕೃಷಿ ಮಾರಾಟ...

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಅಂಗವನಾಡಿ ನೌಕರರ ಸಂಘದ...

ಅಂಬೇಡ್ಕರ್ ಸಂವಿಧಾನದ ಗುಮಾಸ್ತರಲ್ಲ

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಇತ್ತೀಚೆಗೆ ಕೆಲವರು ಸಂವಿಧಾನದ ಗುಮಾಸ್ತನ ರೀತಿ ನೋಡುತ್ತಿರುವುದು ಮನಸ್ಸಿಗೆ ತೀವ್ರ ನೋವು ಉಂಟುಮಾಡುತ್ತಿದೆ ಎಂದು...

ಅಂಬೇಡ್ಕರ್ ಚಿಂತನೆಗಳೇ ದೇಶಕ್ಕೆ ಸಂಪತ್ತು

ಮೈಸೂರು: ಶಿಕ್ಷಣದ ಏಕಸ್ವಾಮ್ಯ ಮುರಿದು, ಶಿಕ್ಷಣದ ಮೂಲಕ ಎಲ್ಲರಿಗೂ ಬಿಡುಗಡೆಯ ಕ್ರಾಂತಿ ಮೊಳಗಿಸಿದ ಅಂಬೇಡ್ಕರ್ ಅವರ ಶ್ರಮ, ಹೋರಾಟ ಮತ್ತು ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ...

ಶ್ರೀಕೃಷ್ಣನ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ

ಬಾಗಲಕೋಟೆ: ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಶ್ರೀಕೃಷ್ಣನ ನೀಡಿದ ಗೀತೋಪದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಉಡುಪಿ ಶ್ರೀಕೃಷ್ಣಮಠದ ಭಾವಿ ಪರ್ಯಾಯ ಪೀಠಾಧೀಶ, ಅದಮಾರು ಶ್ರೀ ಈಶಪ್ರಿಯತೀರ್ಥ...

ಪುತ್ತೂರು: ಅಗತ್ಯವಿರುವ 2ಪ್ರದೇಶಗಳಿಗೆ ಅಥವಾ ಬೃಹತ್ ನಗರದಿಂದ ಸಣ್ಣ ಪಟ್ಟಣಗಳಿಗೆ ವೇಗವಾಗಿ ಸಂಪರ್ಕಿಸಲು ನೆರವಾಗುವ ಉದ್ದೇಶದಿಂದ ತುಮಕೂರು-ಯಶವಂತಪುರ ಸೇರಿ ದೇಶದಲ್ಲಿ 10 ಸೇವಾ ಸರ್ವೀಸ್ ರೈಲು ಕಳೆದ ತಿಂಗಳು ಆರಂಭಗೊಂಡಿದ್ದು, ಬೆಂಗಳೂರು-ಮಂಗಳೂರು ಸೇವಾ ಸರ್ವೀಸ್ ರೈಲು ಸಂಚಾರವೂ ವರ್ಷಾಂತ್ಯದೊಳಗೆ ಶುರುವಾಗುವ ನಿರೀಕ್ಷೆಯಿದೆ.

ಮಳೆಗಾಲದಲ್ಲಿ ಮಂಗಳೂರು-ಬೆಂಗಳೂರು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಘಾಟಿ ಕುಸಿತದಿಂದ ರಸ್ತೆಮಾರ್ಗ ಸಂಚಾರ ಸ್ಥಗಿತಗೊಂಡಿತ್ತು. ಶಿರಾಡಿ ಘಾಟಿ ರಸ್ತೆಯಲ್ಲಿ ಹೆಚ್ಚು ವಾಹನ ಓಡಾಟವಿರುವುದರಿಂದ ಬೆಂಗಳೂರಿನ ಐಟಿ ಸೇರಿದಂತೆ ವಿವಿಧ ಕಂಪನಿಗಳಲ್ಲಿ ದುಡಿಯುವ ಕರಾವಳಿಯ ಜನತೆಗೆ ತವರಿಗೆ ಬರಲು ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕರಾವಳಿ ಜಿಲ್ಲೆಗೆ ವೇಗವಾಗಿ ಸಂಪರ್ಕಿಸುವ ದೃಷ್ಟಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ರೈಲ್ವೆ ಸಚಿವ ಸುರೇಶ್ ಅಂಗಡಿ ಅವರಲ್ಲಿ ಮನವಿ ಮಾಡಿದ್ದು, ಮುಂದಿನ ತಿಂಗಳೊಳಗೆ ಸೇವಾ ಸರ್ವೀಸ್ ರೈಲು ಆರಂಭಿಸುವ ಸೂಚನೆಯೂ ಲಭಿಸಿದೆ ಎಂಬ ಮಾಹಿತಿ ವಿಜಯವಾಣಿಗೆ ಲಭ್ಯವಾಗಿದೆ.

ಸೇವಾ ಸರ್ವೀಸ್ ರೈಲು ಅಗತ್ಯ
ವೀಕೆಂಡ್‌ನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕಿಸುವುದೇ ತ್ರಾಸ. ಮಂಗಳೂರು ಬೆಂಗಳೂರನ್ನು ವೇಗವಾಗಿ ಸಂಪರ್ಕಿಸು ವಂತೆ ಸೇವಾ ಸರ್ವೀಸ್ ರೈಲು ಯೋಜನೆ ಜಾರಿಗೆ ಯೋಜನೆ ರೂಪುಗೊಳ್ಳುತ್ತಿದೆ. ಈಗಾಗಲೇ ತುಮಕೂರು-ಯಶವಂತಪುರ, ದೆಹಲಿ- ಸೆಮ್ಲಿ, ಭುವನೇಶ್ವರ್-ನಯಾಗಢ, ಮುರ್ಕೊಂಗ್ ಸೆಲೆಕ್ಸ್-ದಿಬ್ರೂಗಢ, ಕೋಟಾ-ಝಲಾವರ್ ನಗರ, ಕೊಯಮತ್ತರೂ-ಪಳನಿ, ಕೊಯಮತ್ತರೂರು- ಪೊಳ್ಳಾಚಿ, ವಾದ್‌ನಗರ್- ಮೆಹೆಸನಾ, ಕರೂರ್-ಸೇಲಂ ರೈಲು ಮಾರ್ಗದಲ್ಲಿ ಸೇವಾ ಸರ್ವೀಸ್ ರೈಲು ಸಂಚರಿಸುತ್ತಿದ್ದು, ಕಳೆದ ತಿಂಗಳಲ್ಲಿ ಚಾಲನೆ ದೊರಕಿದೆ. 2ನೇ ಹಂತದಲ್ಲಿ ಇನ್ನೂ 10 ಸೇವಾ ಸರ್ವೀಸ್ ರೈಲು ವರ್ಷಾಂತ್ಯಕ್ಕೆ ಆರಂಭಗೊಳ್ಳಲಿದ್ದು, ಇದರಲ್ಲಿ ಬೆಂಗಳೂರು-ಮಂಗಳೂರು ಸೇವಾ ಸರ್ವೀಸ್ ರೈಲು ಸಂಚಾರವೂ ಒಳಗೊಂಡಿದೆ.

ಕಾರವಾರಕ್ಕೂ ಸೇವಾ ಸರ್ವೀಸ್ ರೈಲು
ಬೆಂಗಳೂರು-ಮಂಗಳೂರು ಸೇವಾ ಸರ್ವೀಸ್ ರೈಲು ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಟು ಕುಣಿಗಲ್, ಹಾಸನ, ಸಕಲೇಶಪುರ ಮಾರ್ಗವಾಗಿ ಶನಿವಾರ ಬೆಳಗ್ಗೆ ಮಂಗಳೂರಿಗೆ ತಲುಪಲಿದೆ. ಉಡುಪಿ ಹಾಗೂ ಉತ್ತರ ಕರ್ನಾಟಕದ ಜನತೆಗೂ ಅನುಕೂಲವಾಗುವಂತೆ ಕಾರವಾರವರೆಗೆ ವಿಸ್ತರಿಸುವ ಯೋಜನೆಯೂ ಇಲಾಖೆ ಮುಂದಿದೆ. ಯೋಜನೆ ಕಾರ್ಯಗತಗೊಂಡರೆ ಶನಿವಾರ ಬೆಳಗ್ಗೆ 11 ಗಂಟೆ ವೇಳೆ ಕಾರವಾರ ತಲುಪಿ, ಸಾಯಂಕಾಲ ಮತ್ತೆ ಅದೇ ರೈಲು ಮಂಗಳೂರಿಗೆ ಆಗಮಿಸಲಿದೆ. ಶನಿವಾರ ರಾತ್ರಿ ಮಂಗಳೂರಿನಿಂದ ಸಕಲೇಶಪುರ, ಹಾಸನ, ಕುಣಿಗಲ್ ಮಾರ್ಗವಾಗಿ ಭಾನುವಾರ ಬೆಳಗ್ಗೆ ಬೆಂಗಳೂರು ತಲುಪಲಿದೆ. ಭಾನುವಾರ ಸಾಯಂಕಾಲ ಬೆಂಗಳೂರಿನಿಂದ ಹೊರಟ ರೈಲು ಮರುದಿನ ಮಂಗಳೂರು-ಕಾರವಾರ ತಲುಪಲಿದೆ. ಸೋಮವಾರ ಸಾಯಂಕಾಲ ಮತ್ತೆ ಮಂಗಳೂರಿನಿಂದ ಹೊರಟು ಮಂಗಳವಾರ ಬೆಳಗ್ಗೆ ಬೆಂಗಳೂರು ತಲುಪಲಿದೆ.

ಬೆಂಗಳೂರು ಸಿಟಿಯಿಂದ ರೈಲು ಆರಂಭಕ್ಕೆ ಮನವಿ
ಬೆಂಗಳೂರು-ಮಂಗಳೂರು ಸೇವಾ ಸರ್ವೀಸ್ ರೈಲು ಸಂಚಾರದ ಆರಂಭಿಕ ಸ್ಥಳ ಹಾಗೂ ಅಂತಿಮ ಸ್ಥಳ ಇನ್ನೂ ನಿಗದಿಯಾಗಿಲ್ಲ. ಆದುದರಿಂದ ಪ್ರಮುಖ ಐಟಿ ಕಂಪನಿಗಳು ಸಿಟಿಯಲ್ಲಿರುವುದರಿಂದ ಬೆಂಗಳೂರು ಸಿಟಿ ನಿಲ್ದಾಣದಿಂದಲೇ ಸೇವಾ ಸರ್ವೀಸ್ ರೈಲು ಆರಂಭಿಸುವಂತೆ ಕುಕ್ಕೆಶ್ರೀ ಸುಬ್ರಹ್ಮಣ್ಯ-ಮಂಗಳೂರು ರೈಲ್ವೆ ಬಳಕೆದಾರರ ಹಿತರಕ್ಷಣಾ ವೇದಿಕೆ ಮನವಿ ಮಾಡಿದೆ.

ಬೆಂಗಳೂರು-ಮಂಗಳೂರು ಸೇವಾ ಸರ್ವೀಸ್ ರೈಲಿಗೆ ಬೇಡಿಕೆಯಿದೆ. ಕರಾವಳಿ ಜಿಲ್ಲೆಯ ಜನತೆಯ ಬೇಡಿಕೆಯಂತೆ ವರ್ಷಾಂತ್ಯದೊಳಗೆ ಸೇವಾ ಸರ್ವೀಸ್ ರೈಲು ಆರಂಭಗೊಳ್ಳಲಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಲಿದೆ.
ನಳಿನ್ ಕುಮಾರ್ ಕಟೀಲ್ ಸಂಸದರು

ಜಿಲ್ಲೆಯ ಜನರಿಗೆ ಅನುಕೂಲವಾಗುವ ಬೆಂಗಳೂರು-ಮಂಗಳೂರು ಸೇವಾ ಸರ್ವೀಸ್ ರೈಲು ಆರಂಭಿಸುವಂತೆ ಸಂಸದರ ಮೂಲಕ ರೈಲ್ವೆ ಸಚಿವರಿಗೆ ಹಾಗೂ ಇಲಾಖೆಗೆ ಮನವಿ ಮಾಡಲಾಗಿದೆ. ಮನವಿಗೆ ಮನ್ನಣೆಯೂ ದೊರಕಿರುವುದು ಸಂತಸ ತಂದಿದೆ. ಶೀಘ್ರದಲ್ಲಿ ಬೆಂಗಳೂರು-ಮಂಗಳೂರು ಸೇವಾ ಸರ್ವೀಸ್ ರೈಲು ಆರಂಭಗೊಂಡರೆ ಎಲ್ಲರಿಗೂ ಅನೂಕೂಲ.

ಸುದರ್ಶನ್ ಪುತ್ತೂರು
ಸಂಚಾಲಕರು, ಕುಕ್ಕೆಶ್ರೀ ಸುಬ್ರಹ್ಮಣ್ಯ-ಮಂಗಳೂರು ರೈಲ್ವೆ ಬಳಕೆದಾರರ ಹಿತರಕ್ಷಣಾ ವೇದಿಕೆ

ಶ್ರವಣ್‌ಕುಮಾರ್ ನಾಳ

Stay connected

278,740FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...