ಒಂದೇ ಗ್ರಾಮದ 20 ಜನರನ್ನು ಕಚ್ಚಿ ಗಾಯಗೊಳಿಸಿರುವ ಒಂಟಿ ಮಂಗ, ಐವರ ಸ್ಥಿತಿ ಗಂಭೀರ

ಧಾರವಾಡ: ಒಂಟಿ ಮಂಗ ಒಂದೇ ಗ್ರಾಮದ 20 ಜನರನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ಜಿಲ್ಲೆಯ ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದಲ್ಲಿ ನಡೆದಿದೆ.

ಎರಡು ವಾರಗಳಿಂದ ಗ್ರಾಮದಲ್ಲಿ ಮಂಗನ ಹಾವಳಿ ಹೆಚ್ಚಾಗಿದ್ದು, 20 ಜನರನ್ನು ಕಚ್ಚಿ ಗಾಯಗೊಳಿಸಿದೆ. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗನ ಅಟ್ಟಹಾಸದಿಂದ ಮನೆ ಬಿಟ್ಟು ಹೊರ ಬರಲು ಗ್ರಾಮಸ್ಥರು ಹೆದರುತ್ತಿದ್ದಾರೆ. ಗ್ರಾಮದ ಮಕ್ಕಳು, ಮಹಿಳೆಯರು ಮತ್ತು ವೃದ್ಧರನ್ನು ಗಾಯಗೊಳಿಸಿದೆ.

ದಿನಕ್ಕೊಬ್ಬರ ಮೇಲೆ ದಾಳಿ ಮಾಡುತ್ತಿರುವ ಮಂಗನನ್ನು ಹಿಡಿಯಲು ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​​​)

Leave a Reply

Your email address will not be published. Required fields are marked *