ರಮಜಾನ್ ಸಡಗರದಲ್ಲಿ ಗೆಳೆಯರಿಬ್ಬರು ತಮಾಷೆಗಾಗಿ ಚಾಕುವಿನಿಂದ ಆಡಿದ ಆಟದಲ್ಲಿ ಇರಿತಕ್ಕೊಳಗಾಗಿ ಒಬ್ಬನ ಸಾವು

ಬೆಂಗಳೂರು: ರಮಜಾನ್​​ ಹಬ್ಬದ ಸಂಭ್ರಮದಲ್ಲಿ ಮಾಂಸದ​​ ಅಂಗಡಿಯಲ್ಲಿ ತಮಾಷೆಗಾಗಿ ಸ್ನೇಹಿತರ ನಡುವೆ ನಡೆದ ಆಟದಲ್ಲಿ ಆಕಸ್ಮಿಕವಾಗಿ ಚಾಕುವಿನ ಇರಿತಕ್ಕೊಳಗಾಗಿ ಸ್ನೇಹಿತ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಜೆ.ಜೆ. ನಗರದಲ್ಲಿ ನಡೆದಿದೆ.

ಸಿಬ್ಗತ್​ (35) ಸ್ನೇಹಿತನಿಂದ ಕೊಲೆಯಾದ ದುರ್ದೈವಿ. ಹಬ್ಬದ ದಿನ ತಮಾಷೆಗಾಗಿ ಸಿಬ್ಗತ್​​ ಹಾಗೂ ಆತನ ಜತೆಯಲ್ಲಿದ್ದ ಸ್ನೇಹಿತ ಮಾಂಸ​​ ಕತ್ತರಿಸುವ ಚಾಕುವನ್ನು ಹಿಡಿದು ಆಟವಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಸಿಬ್ಗತ್​​​​​​​​​​​ ಹೊಟ್ಟೆಗೆ ಚಾಕು ತಗುಲಿದೆ. ಚಾಕು ಇರಿತದಿಂದ ಸಿಬ್ಗತ್​​ ಕರುಳು ಆಚೆ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಕೊಲೆಯಾದ ಸಿಬ್ಗತ್​​ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಜೆ.ಜೆ ನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *