Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ವರ್ಷಕ್ಕೊಂದು ಚುನಾವಣೆ

Saturday, 11.08.2018, 3:02 AM       No Comments

ನವದೆಹಲಿ: ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಪರ್ಯಾಯವಾಗಿ ಚುನಾವಣಾ ಆಯೋಗ ‘ವರ್ಷಕ್ಕೊಂದು ಚುನಾವಣೆ’ ಪರಿಕಲ್ಪನೆ ಮುಂದಿಟ್ಟಿದೆ.

‘ಏಕಕಾಲ ಚುನಾವಣೆಗೆ ವಿಶೇಷ ಭದ್ರತಾ ಪಡೆ ಸಹಿತ ಹೆಚ್ಚಿನ ಮಾನವಸಂಪನ್ಮೂಲ ಬೇಕಾಗುತ್ತದೆ. ಒಂದೇ ಬಾರಿಗೆ ಚುನಾವಣೆ ನಡೆಸಲು ಸಾಂವಿಧಾನಿಕ ಅನುಮೋದನೆ ಪಡೆಯಲು ಸಮಯ ತಗಲುತ್ತದೆ. ಕಾನೂನು ತಿದ್ದುಪಡಿಯಾಗದ ಹೊರತು ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ಒಂದೇ ವರ್ಷದ ವಿವಿಧ ತಿಂಗಳಲ್ಲಿ ನಡೆಯುವ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಹೊಸ ಪ್ರಸ್ತಾವನೆ ತಯಾರಿಸಲಾಗುತ್ತಿದೆ’ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

48 ಗಂಟೆ ಮುನ್ನ ಸುದ್ದಿ ಬಂದ್: ಮತದಾನಕ್ಕಿಂತ 48 ಗಂಟೆ ಮುನ್ನ ಚುನಾವಣೆಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಾಕುವಂತಿಲ್ಲ. ಪ್ರಾಯೋಗಿಕವಾಗಿ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಈ ಕಾನೂನು ಮಾಡಲಾಗುತ್ತಿದೆ. 2019ರ ಲೋಕಸಭೆ ಚುನಾವಣೆಗೂ ಮುನ್ನ ಇದರ ಪರಿಣಾಮ ಖಾತ್ರಿಯಾಗುತ್ತದೆ ಎಂದು ಒ.ಪಿ.ರಾವತ್ ತಿಳಿಸಿದ್ದಾರೆ. ವಿವಿಪ್ಯಾಟ್ ಸಾಧನಗಳು ಸುರಕ್ಷಿತವಾಗಿವೆ. ಇವಿಎಂಗಳು ವಿಶ್ವಾಸಾರ್ಹ ಎಂದು ರಾವತ್ ಹೇಳಿದ್ದಾರೆ. ವಿವಿಪ್ಯಾಟ್ ಸಾಧನಗಳು ಮತದಾರರ ಫೋಟೋ ಕ್ಲಿಕ್ಕಿಸುತ್ತವೆ ಎಂಬ ವದಂತಿ ಇತ್ತೀಚೆಗೆ ಹರಡಿತ್ತು.

Leave a Reply

Your email address will not be published. Required fields are marked *

Back To Top